ಚಹಾ, ಕಾಫಿಯನ್ನು ಪ್ರತಿದಿನ ನಾವು ತಪ್ಪದೆ ಸೇವನೆ ಮಾಡುತ್ತೇವೆ. ಈ ಪಾನೀಯಗಳನ್ನು ಆರೋಗ್ಯಕರವಾಗಿಸಲು, ಸಕ್ಕರೆ ಮತ್ತು ಹಾಲನ್ನು ತ್ಯಜಿಸುವುದು ಅತ್ಯುತ್ತಮ ಮಾರ್ಗವಾಗಿದ್ದು, ಇದು ನಿಮಗೆ ಬ್ಲ್ಯಾಕ್ ಕಾಫಿ ಮತ್ತು ಬ್ಲ್ಯಾಕ್ ಟೀಯಾಗಿ ಮಾರ್ಪಡುತ್ತದೆ. ಪಾನೀಯಗಳಲ್ಲಿ ಯಾವ ಪಾನೀಯಗಳು ಒಂದಕ್ಕಿಂತ ಒಂದು ವಿಭಿನ್ನ ರುಚಿಯನ್ನು ಹೊಂದಿದೆಯಾದರೂ ಇವೆರಡರಲ್ಲಿ ಯಾವುದು ಆರೋಗ್ಯಕರವಾಗಿದೆ ಎಂಬುದನ್ನು ನೋಡೋಣ?
ಬ್ಲ್ಯಾಕ್ ಕಾಫಿಎಲ್ಲಾ ಫಿಟ್ ನೆಸ್ ಉತ್ಸಾಹಿಗಳು ಬ್ಲ್ಯಾಕ್ ಕಾಫಿಯನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ. ಜಿಮ್ಗೆ ಹೋಗುವ ಮುನ್ನ ಒಂದು ಕಪ್ ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ನಿಮ್ಮ ಚಯಾಪಚಯ ಕ್ರಿಯೆಗೆ ಉತ್ತೇಜನ ನೀಡಬಹುದು ಎಂದು ಹೇಳಲಾಗುತ್ತದೆ. ಕಾಫಿಯಲ್ಲಿ ಕೆಫಿನ್ ಅಂಶ ಅಧಿಕವಾಗಿರುವ ಕಾರಣ ವ್ಯಾಯಾಮಕ್ಕೆ ಅಗತ್ಯವಾದ ಶಕ್ತಿಯ ಪ್ರಮಾಣವು ನಿಮಗೆ ದೊರೆಯುತ್ತದೆ.
ಬ್ಲ್ಯಾಕ್ ಕಾಫಿಯಲ್ಲಿ ವಿವಿಧ ಆಂಟಿ ಆಕ್ಸಿಡೆಂಟುಗಳು, ಮೆಗ್ನೀಶಿಯಂ ಮತ್ತು ಪೊಟಾಶಿಯಂಗಳು ಸಮೃದ್ಧವಾಗಿದೆ. ಇಂಟರ್ ನ್ಯಾಷನಲ್ ಜರ್ನಲ್ ಆಫ್ ಎಪಿಡೆಮಿಯಾಲಜಿಯಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಬ್ಲ್ಯಾಕ್ ಕಾಫಿ ಸೇವಿಸಿದವರಲ್ಲಿ ಬೊಜ್ಜು ಮತ್ತು ಟೈಪ್ 2 ಮಧುಮೇಹದ ಅಪಾಯ ಕಡಿಮೆ ಎಂದು ಕಂಡುಹಿಡಿಯಲಾಗಿದೆ.
ಕ್ಯಾಲೋರಿಗಳುಒಂದು ಕಪ್ ಬ್ಲ್ಯಾಕ್ ಕಾಫಿಯಲ್ಲಿ ಶೂನ್ಯ ಕ್ಯಾಲೋರಿಗಳಿವೆ.
ಕಪ್ಪು ಚಹಾಬ್ಲ್ಯಾಕ್ ಟೀ ಮತ್ತು ಬ್ಲ್ಯಾಕ್ ಕಾಫಿಗಳು ಕೆಫೀನ್ ಅಂಶವನ್ನು ಹೊರತುಪಡಿಸಿ ಒಂದೇ ರೀತಿಯವು, ಆದರೆ ಇದು ಕಪ್ಪು ಚಹಾದಲ್ಲಿ ಕಡಿಮೆ. ಕಪ್ಪು ಟೀಯಲ್ಲಿ ಪರ್ಯಾಪ್ತ ಕೊಬ್ಬು ಇಲ್ಲ ಮತ್ತು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಯುರೋಪಿಯನ್ ಜರ್ನಲ್ ಆಫ್ ನ್ಯೂಟ್ರಿಷನ್ ನಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ನಿಯಮಿತವಾಗಿ ಕಪ್ಪು ಚಹಾ ಸೇವಿಸುವವರು ಹೆಚ್ಚುವರಿ ಕಿಲೋಗಳನ್ನು ಕಳೆದುಕೊಂಡಿರುತ್ತಾರೆ.
ಕ್ಯಾಲೋರಿಗಳುಒಂದು ಕಪ್ ಬ್ಲ್ಯಾಕ್ ಟೀಯಲ್ಲಿ 2 ಕ್ಯಾಲೋರಿಗಳಿವೆ.
ಯಾವುದು ಉತ್ತಮ?ಎರಡೂ ಪಾನೀಯಗಳು ಆರೋಗ್ಯಕರವಾಗಿವೆ ಮತ್ತು ನೀವು ಹುಡುಕುತ್ತಿರುವ ಪ್ರಯೋಜನಗಳ ಮೇಲೆ ಅವಲಂಬಿತವಾಗಿದೆ. ನೀವು ಬೆಳಗ್ಗೆ ವ್ಯಾಯಾಮ ಮಾಡಿದರೆ ನಿಮ್ಮ ಚಯಾಪಚಯ ಕ್ರಿಯೆಯನ್ನು ಆರಂಭಿಸಲು ಮತ್ತು ಜಿಮ್ ನಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಶಕ್ತಿಯನ್ನು ನೀಡಲು ಬ್ಲ್ಯಾಕ್ ಕಾಫಿ ಉತ್ತಮ.
ಆದರೆ ನೀವು ಹೆಚ್ಚು ಕೆಫೀನ್ ಸೇವನೆ ಮಾಡಲು ಇಷ್ಟಪಡದಿದ್ದರೆ, ಬ್ಲ್ಯಾಕ್ ಟೀ ಉತ್ತಮ ಆಯ್ಕೆಯಾಗಬಹುದು. ಆತಂಕ ಮತ್ತು ರಕ್ತದೊತ್ತಡ ಸಮಸ್ಯೆಗಳಿಂದ ಬಳಲುತ್ತಿರುವವರು ಬ್ಲ್ಯಾಕ್ ಕಾಫಿಯನ್ನು ದೂರವಿಡಬೇಕು.
ರಾತ್ರಿ ಮಲಗುವಾಗ ಬ್ಲಾಕ್ ಕಾಫಿ ಸೇವನೆ ಮಾಡಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ನಿಮ್ಮ ಆರೋಗ್ಯಕ್ಕೆ ಯಾವುದು ಉತ್ತಮವೋ ಅದನ್ನೇ ಆಯ್ಕೆ ಮಾಡಿ ಸೇವಿಸಿ. ಮತ್ತು ಆರೋಗ್ಯದಿಂದಿರಿ.