ಒಂದೇ ರೀತಿಯ ಉದ್ದಿನ ಇಡ್ಲಿ ತಿಂದು ಬೇಜಾರಾಗಿದ್ದರೆ, ಇಲ್ಲಿದೆ ಹೊಸ ಇಡ್ಲಿ ರೆಸಿಪಿ

First Published | Jan 23, 2021, 4:56 PM IST

ಇಡ್ಲಿ ದಕ್ಷಿಣ ಭಾರತದ ಬಹಳ ಫೇಮಸ್‌ ತಿಂಡಿ. ಬಿಳಿಯಾದ ಮೃದು ಇಡ್ಲಿಗಳನ್ನು ಇಲ್ಲಿಯ ಜನರು ತುಂಬಾ ಇಷ್ಟಪಡುತ್ತಾರೆ. ನೀವು ಎಂದಾದರೂ ಕಪ್ಪು ಇಡ್ಲಿ ಸೇವಿಸಿದ್ದೀರಾ? ಈ ಕಪ್ಪು ಇಡ್ಲಿಯನ್ನು ನೀವೂ ಸುಲಭವಾಗಿ ಮನೆಯಲ್ಲಿ ಹೇಗೆ ತಯಾರಿಸಬಹುದು ಎಂಬ ವಿವರ ಇಲ್ಲಿದೆ. 
3 ಪ್ಯಾಕೆಟ್‌ಗಳು ಬೋರ್‌ಬೌರ್ನ್ ಬಿಸ್ಕತ್ತು,
1/2 ಕಪ್ ಚಾಕೊಲೇಟ್ ಚಿಪ್ಸ್,
1 ಡೈರಿ ಮಿಲ್ಕ್ ,
1 ಕಪ್ ಹಾಲು,
1 ಕಪ್‌ ಸಕ್ಕರೆ,

ಮೊದಲು ಬಿಸ್ಕತ್ತುಗಳು ತೆಗೆದುಕೊಳ್ಳಿ. ಬಿಸ್ಕತ್ತುಗಳು ಫ್ರೆಶ್‌ ಹಾಗೂ ಗರಿಗರಿಯಾಗಿ ಇರಬೇಕು.
ಬಿಸ್ಕತ್ತುಗಳನ್ನು ಮಿಕ್ಸರ್‌ನ ಜಾರ್‌ಗೆ ಹಾಕಿ. ಇದಕ್ಕೆ ಸಕ್ಕರೆ ಕೂಡ ಸೇರಿಸಿ.
Tap to resize

ಅದನ್ನು ನುಣ್ಣನೆ ಪುಡಿ ಮಾಡಿಕೊಳ್ಳಿ.
ಪುಡಿಗೆ ಹಾಲನ್ನು ಚೆನ್ನಾಗಿ ಮಿಶ್ರಣ ಮಾಡಿ. ಉಂಡೆಗಳಾಗದಂತೆ ಅದನ್ನು ಚೆನ್ನಾಗಿ ಕಲಕಿ.
ನಂತರ ಆ ಮಿಶ್ರಣಕ್ಕೆ ಚಾಕೊಲೇಟ್ ಚಿಪ್ಸ್‌ ಪುಡಿ ಮಾಡಿ, ಸರಿಯಾಗಿ ಮಿಕ್ಸ್‌ ಮಾಡಿ.
ಇಡ್ಲಿ ಕುಕ್ಕರ್ ತೆಗೆದುಕೊಳ್ಳಿ. ಅದರ ಅಚ್ಚುಗಳಿಗೆ ಚೆನ್ನಾಗಿ ಎಣ್ಣೆ ಸವರಿ. ಆದ್ದರಿಂದ ಇಡ್ಲಿ ಅಂಟಿಕೊಳ್ಳುವುದಿಲ್ಲ.
ಈಗ ಎಲ್ಲಾ ತಟ್ಟೆಗಳಲ್ಲಿ ಒಂದು ಚಮಚ ಇಡ್ಲಿ ಹಿಟ್ಟು ಹಾಕಿ.
ಅರ್ಧ ತುಂಡು ಡೈರಿ ಮಿಲ್ಕ್‌ ಮಧ್ಯದಲ್ಲಿ ಸೇರಿಸಿ.ಅದನ್ನು ಇಡ್ಲಿ ಕುಕ್ಕರ್‌ನಲ್ಲಿಟ್ಟು ಬೇಯಿಸಿ.
ಅವುಗಳನ್ನು ಚಮಚದ ಸಹಾಯದಿಂದ ನಿಧಾನವಾಗಿ ತೆಗೆಯಿರಿ. ಈಗ ಚಾಕೊಲೇಟ್ ಇಡ್ಲಿ ಸವಿಯಲು ರೆಡಿ.

Latest Videos

click me!