ಕರುಳು, ಮೆದಳು ಆರೋಗ್ಯಕ್ಕೆ ಟಾಪ್ 10 ಆಹಾರ, ಹಾರ್ವಡ್ ವೈದ್ಯನ ಪಟ್ಟಿಯಲ್ಲಿ ಇಡ್ಲಿ-ಮೊಸರು

Published : Jul 25, 2025, 11:08 PM IST

ಹಾರ್ವರ್ಡ್ ವೈದ್ಯ ಕರಳು ಹಾಗೂ ಮೆದಳು ಸೇರಿದಂತೆ ಉತ್ತಮ ಆರೋಗ್ಯಕ್ಕೆ ಯಾವ ಆಹಾರ ಉತ್ತಮ ಎಂದು ಪಟ್ಟಿ ಮಾಡಿದ್ದಾರೆ. ಪ್ರತಿ ಆಹಾರಕ್ಕೆ 10ರಲ್ಲಿ ಅದರ ಪೌಷ್ಠಿಕಾಂಶ, ಆರೋಗ್ಯ ಲಾಭದ ಅನುಸಾರ ರೇಟಿಂಗ್ ನೀಡಿದ್ದಾರೆ. ಈ ಪಟ್ಟಿಯಲ್ಲಿ ಮೊಸರು, ಇಡ್ಲಿ ಮುಂಚೂಣಿಯಲ್ಲಿದೆ.

PREV
15

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಆಹಾರ ಪದ್ಧತಿಯಲ್ಲಿ ಕೆಲ ಕಠಿಣ ಕ್ರಮಗಳು ಅಗತ್ಯ. ವೈದ್ಯರು ಪದೇ ಪದೇ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸುತ್ತಾರೆ. ಇದೀಗ ಹಾರ್ವರ್ಡ್‌ನ ಕರುಳು ತಜ್ಞ ಡಾ.ಸೌರವ್ ಸೇಥಿ ಕರುಳು ಹಾಗೂ ಮೆದಳಿನ ಆರೋಗ್ಯಕ್ಕೆ ಉತ್ತಮ ಆಹಾರ ಯಾವುದು ಎಂದು ಪಟ್ಟಿ ಮಾಡಿದ್ದಾರೆ. ಕರುಳು ಹಾಗೂ ಹೊಟ್ಟೆ ಆರೋಗ್ಯ ಉತ್ತವಾಗಿದ್ದರೆ, ಅವರ ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಸೌರಬ್ ಸೇಥಿ ಹೇಳಿದ್ದಾರೆ.

25

ಸೌರಬ್ ಸೇಥಿ ಪ್ರತಿ ಆಹಾರ ಕರುಳು ಹಾಗೂ ಮೆದಳಿನ ಆರೋಗ್ಯಕ್ಕೆ ಎಷ್ಟು ಉತ್ತಮ ಎಂಬುದನ್ನು ಪಟ್ಟಿ ಮಾಡಿದ್ದಾರೆ. ಈ ಆಹಾರಗಳಿಗೆ ರೇಟಿಂಗ್ ನೀಡಿದ್ದಾರೆ. ಕರಳು ಹಾಗೂ ಮೆದಳಿನ ಆರೋಗ್ಯಕ್ಕೆ ಪ್ರತಿ ಆಹಾರ 10 ರಲ್ಲಿ ಅಂಕ ನೀಡಿದ್ದಾರೆ. ಸೌರಬ್ ಸೇಥಿ ಟಾಪ್ 10 ಆಹಾರದ ಪಟ್ಟಿ ನೀಡಿದ್ದಾರೆ ವಿಶೇಷ ಅಂದರೆ ಮೊಸರು(ಯೋಗರ್ಟ್) 10 ರಲ್ಲಿ 10 ಅಂಕ ಪಡೆದು ಮುಂಚೂಣಿಯಲ್ಲಿದ್ದರೆ ಇಡ್ಲಿ 10 ರಲ್ಲಿ 6 ರೇಟಿಂಗ್ ಪಡೆದಿದೆ.

35

ಕರಳು ಮೆದುಳಿನ ಆರೋಗ್ಯಕ್ಕೆ ಟಾಪ್ 10 ಆಹಾರ ( ರೇಟಿಂಗ್)

ಮೊಸರು (ಸಕ್ಕರೆ ಮಿಶ್ರಿತವಲ್ಲದ): 10 ರಲ್ಲಿ 10 ರೇಟಿಂಗ್

ಇಡ್ಲಿ : 10ರಲ್ಲಿ 6 ರೇಟಿಂಗ್

ಬ್ರೊಕೊಲಿ ಹಾಗೂ ಕಾಲಿಫ್ಲವರ್ : 10ರಲ್ಲಿ 8 ರೇಟಿಂಗ್

ಬ್ಲೂಬೇರಿ ಹಣ್ಣು: 10 ರಲ್ಲಿ 7 ರೇಟಿಂಗ್

ಬಟರ್ ಫ್ರೂಟ್ , ಅವಕಾಡೋ : 10ರಲ್ಲಿ 9 ರೇಟಿಂಗ್

ಸಿಹಿ ಗೆಣಸು: 10ರಲ್ಲಿ 5 ರೇಟಿಂಗ್

ಪಾಪ್ ಕಾರ್ನ್: 10ರಲ್ಲಿ 4 ರೇಟಿಂಗ್

ಹಣ್ಣಿನ ರಸ ಅಥವಾ ಜ್ಯೂಸ್ : 10ರಲ್ಲಿ 2 ರೇಟಿಂಗ್

ವೈಟ್ ಬ್ರೆಡ್ : 10ರಲ್ಲಿ 1 ರೇಟಿಂಗ್

45

ಡಾಕ್ಟರ್ ಸೌರಬ್ ಸೇಥಿ ಹೇಳುವ ಪ್ರಕಾರ ಸಿಹಿ ಅಥವಾ ಸಕ್ಕರೆ ಮಿಶ್ರಣ ಮಾಡದ ಮೊಸರು ಕರುಳು ಹಾಗೂ ಮೆದಳಿನ ಆರೋಗ್ಯಕ್ಕೆ ಅತ್ಯುತ್ತಮ ಎಂದಿದ್ದಾರೆ. ಇದರ ಜೊತೆಗೆ ಬೆಣ್ಣೆ ಹಣ್ಣ ಅಥವಾ ಬಟರ್ ಫ್ರೂಟ್ ಎಂದೆ ಕರೆಯಲ್ಪಡುವ ಅವಕಾಡೋ ಕೂಡ ಕರುಳಿನ ಆರೋಗ್ಯಕ್ಕೆ ಉತ್ತಮ ಎಂದಿದ್ದಾರೆ.ಕರುಳಿನ ಆರೋಗ್ಯ ಉತ್ತಮವಾಗಿದ್ದಷ್ಟು ಮೆದಳು, ಮನಸ್ಸು ಕೂಡ ಉತ್ತಮವಾಗಿರುತ್ತೆ ಎಂದಿದ್ದಾರೆ.

55

ಡಾಕ್ಟರ್ ಸೌರಬ್ ಸೇಥಿ ತಮ್ಮ ಅಧ್ಯಯನ, ಸಂಶೋಧನೆ ಹಾಗೂ ಅನುಭವದ ಮೂಲಕ ಉತ್ತಮ ಆಹಾರದ ಪಟ್ಟಿ ನೀಡಿದ್ದಾರೆ.

ಸೂಚನೆ : ಈ ವರದಿ ಮಾಹಿತಿಗಾಗಿ ನೀಡಲಾಗಿದೆ. ಆರೋಗ್ಯದ ದೃಷ್ಟಿಯಿಂದ ಆಹಾರ ಅಥವಾ ಯಾವುದೇ ಸಲಹೆ ಪಾಲಿಸುವ ಮುನ್ನ ವೈದ್ಯರ ಸಂಪರ್ಕಿಸಿ.

Read more Photos on
click me!

Recommended Stories