ಸೇಬು ಹಣ್ಣು ಪ್ರತಿ ಋತುಮಾನದಲ್ಲೂ ದೊರೆಯುತ್ತದೆ. ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಸೇಬುಗಳನ್ನು ಕಾಣಬಹುದು. ದೇಸಿಯಿಂದ ವಿದೇಶಿ, ಹಸಿರು ಸೇಬು ಮತ್ತು ಹಿಮಾಚಲದ ಚಿನ್ನದ ಸೇಬು. ಸಾಮಾನ್ಯವಾಗಿ ಕೆಂಪು ಸೇಬುಗಳನ್ನು ಜನರು ತಿನ್ನುತ್ತಾರೆ, ಆದರೆ ಹಸಿರು ಸೇಬುಗಳು ಪ್ರಯೋಜನಕಾರಿ. ಹಸಿರು ಸೇಬು ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಕೆ ಸಮೃದ್ಧವಾಗಿದೆ. ಇದರ ಜೊತೆಗೆ ಕಬ್ಬಿಣ, ಪೊಟಾಶಿಯಂ, ಕ್ಯಾಲ್ಸಿಯಂ, ಆಂಟಿ ಆಕ್ಸಿಡೆಂಟುಗಳು ಮತ್ತು ಫ್ಲಾವನಾಯ್ಡ್ ಗಳು ಕೂಡ ಇವೆ.
ಟೈಪ್-2 ಮಧುಮೇಹದಲ್ಲಿ ಪ್ರಯೋಜನಕಾರಿ:ಮಧುಮೇಹಿ ರೋಗಿಯಾಗಿದ್ದರೆ, ಹಸಿರು ಸೇಬುಗಳನ್ನು ತಿನ್ನಬೇಕು. ಹಸಿರು ಸೇಬುಗಳಲ್ಲಿ ಕೆಂಪು ಸೇಬುಗಳಿಗಿಂತ ಕಡಿಮೆ ಸಕ್ಕರೆ ಅಂಶವಿದೆ ಮತ್ತು ನಾರಿನಂಶವು ತುಂಬಾ ಹೆಚ್ಚಾಗಿರುತ್ತದೆ. ಅದರಲ್ಲೂ ಹಸಿರು ಸೇಬು ಗಳು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆಹಸಿರು ಸೇಬುಗಳಲ್ಲಿ ಪೆಕ್ಟಿನ್ ಎಂಬ ಧಾತುವಿದ್ದು, ಇದು ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಉತ್ತೇಜಿಸುತ್ತದೆ. ಇದರಲ್ಲಿ ಇರುವಂತಹ ಅಧಿಕ ನಾರಿನಂಶವು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.
ಶ್ವಾಸಕೋಶಕ್ಕೆ ಪ್ರಯೋಜನಕಾರಿ :ಹಸಿರು ಸೇಬುಗಳನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಅಸ್ತಮಾ ದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಒಂದು ಸಂಶೋಧನೆಯು ಕಂಡುಬಂದಿದೆ. ಇದಕ್ಕೆ ಕಾರಣ ಹಸಿರು ಸೇಬುಗಳಲ್ಲಿ ಕಂಡುಬರುವ 'ಫ್ಲೇವನಾಯ್ಡ್ಸ್' ಎಂಬ ಧಾತು. ಸಂಶೋಧಕರು ಹೇಳುವ ಪ್ರಕಾರ ಫ್ಲಾವನಾಯ್ಡ್ ಗಳು ಅಸ್ತಮಾದ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಲ್ಲವು.
ಮೂಳೆಗಳ ಶಕ್ತಿ ಹೆಚ್ಚಿಸುತ್ತದೆ :ಹಸಿರು ಸೇಬುಹಣ್ಣಿನಲ್ಲಿ ಪೊಟಾಶಿಯಂ, ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂ ಹೇರಳವಾಗಿದೆ. ಕೆಲವು ಅಧ್ಯಯನಗಳು ಕಂಡುಕೊಂಡಂತೆ ವಿಟಮಿನ್ ಕೆ ಮಹಿಳೆಯರಲ್ಲಿ ಆಸ್ಟಿಯೊಪೊರೋಸಿಸ್ ತಡೆಗಟ್ಟಲು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ.
ಕಣ್ಣಿನ ಆರೋಗ್ಯಕ್ಕೆ ಅತ್ಯಗತ್ಯ:ಕಳೆದ ಕೆಲವು ವರ್ಷಗಳಿಂದ ಟಿವಿ, ಲ್ಯಾಪ್ ಟಾಪ್, ಮೊಬೈಲ್ ಬಳಕೆಯಿಂದ ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಸಾಮಾನ್ಯ. ಕಣ್ಣು ಗಳ ದುರ್ಬಲತೆಯಿಂದ ಹಿಡಿದು ಜನರು ವಿವಿಧ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸ್ಕ್ರೀನ್-ಟೈಮ್ ಅನ್ನು ಹೆಚ್ಚಿಸಿದ್ದರೆ, ಆಹಾರದಲ್ಲಿ ಹಸಿರು ಸೇಬುಗಳನ್ನು ಸೇರಿಸಿಕೊಳ್ಳಬೇಕು. ಇದರಲ್ಲಿ ಇರುವಂತಹ ವಿಟಮಿನ್ ಎ ಕಣ್ಣಿನ ದೃಷ್ಟಿಗೆ ಒಳ್ಳೆಯದು.
ಆರೋಗ್ಯಕರ ಚರ್ಮ :ಹಸಿರು ಸೇಬು ಕೇವಲ ದೇಹಕ್ಕೆ ಮಾತ್ರವಲ್ಲ, ಚರ್ಮಕ್ಕೆ ಕೂಡ ಪ್ರಯೋಜನಕಾರಿ. ವಿಟಮಿನ್ ಸಿ, ವಿಟಮಿನ್-ಎ ಮತ್ತು ಆಂಟಿ ಆಕ್ಸಿಡೆಂಟ್ ಗಳ ಉತ್ತಮ ಮೂಲವಾಗಿವೆ. ಇದು ಚರ್ಮದ ಸುಕ್ಕಾಗುವುದರ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಆರೋಗ್ಯಕರವಾಗಿಡುತ್ತದೆ.