ರೆಸಿಪಿ ಬ್ರೆಡ್‌ ಪಕೋಡ - ಸಂಜೆ ಕಾಫಿ ಯಾ ಟೀ ಜೊತೆ ಟೇಸ್ಟಿ ಸ್ನಾಕ್!

First Published Mar 5, 2021, 5:46 PM IST

ಸಂಜೆ ಕಾಫಿ ಯಾ ಟೀ ಜೊತೆ ಪಕೋಡ ಇದ್ದರೆ ಸಖತ್‌ ಕಾಂಬೋ. ಸಂಜೆ ಸ್ನಾಕ್ಸ್‌ಗೆ ಬ್ರೆಡ್‌ ಪಕೋಡ ಟ್ರೈ ಮಾಡಿ ನೋಡಿ. ಟೇಸ್ಟಿ ಬ್ರೆಡ್‌ ಪಕೋಡದ ಸುಲಭ ರೆಸಿಪಿ ನಿಮಗಾಗಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು - 4 ಆಲೂಗಡ್ಡೆ, 250 ಗ್ರಾಂ ಕಡಲೆಹಿಟ್ಟು, 8 ಬ್ರೆಡ್ ಸ್ಲೈಸ್‌, 200 ಗ್ರಾಂಚೀಸ್, 12 ಟೀಸ್ಪೂನ್ ಹುರಿದ ಜೀರಿಗೆ ಪುಡಿ, 1 ಟೀಸ್ಪೂನ್ ಅಚ್ಚ ಖಾರದಪುಡಿ, 1 ಟೀಸ್ಪೂನ್ ಉಪ್ಪು, 2-3 ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪಿನ ಚಟ್ನಿ, ಕರಿಯಲು ಎಣ್ಣೆ .
undefined
ಮೊದಲು ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಪಕ್ಕಕ್ಕೆ ಇರಿಸಿ.
undefined
ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಾಶ್‌ ಮಾಡಿಕೊಳ್ಳಿ.
undefined
ಮ್ಯಾಶ್‌ ಮಾಡಿದ ಆಲೂಗಡ್ಡೆಗೆ ಅರ್ಧ ಟೀ ಚಮಚ ಉಪ್ಪು, ಖಾರದ ಪುಡಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಸೇರಿಸಿ ಹಾಗೂ ರೋಸ್ಟ್‌ ಮಾಡಿದ ಜೀರಿಗೆ ಸೇರಿಸಲು ಮರೆಯಬೇಡಿ.
undefined
ಆಲೂಗಡ್ಡೆಗೆ ಮಸಾಲೆಗಳನ್ನು ಚೆನ್ನಾಗಿ ಮಿಕ್ಸ್‌ ಮಾಡಿ ಇಡಿ.
undefined
ಈಗ ಒಂದು ಬೌಲ್‌ಗೆ 250 ಗ್ರಾಂ ಕಡಲೆ ಹಿಟ್ಟು, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ತೆಳುವಾದ ಮಿಶ್ರಣ ತಯಾರಿಸಿ ಕೊಳ್ಳಿ.
undefined
ತೆಳುವಾದ ಚೀಸ್‌ ಸ್ಲೈಸ್‌ ತೆಗೆದುಕೊಳ್ಳಿ.
undefined
ಎರಡು ಬ್ರೆಡ್ ಪೀಸ್‌ ತೆಗೆದುಕೊಂಡು, ಮೊದಲು ಆಲೂಗೆಡ್ಡೆ ಮಿಶ್ರಣವನ್ನು ಬ್ರೆಡ್‌ ಮೇಲೆ ಚೆನ್ನಾಗಿ ಹರಡಿ, ಅದರ ಮೇಲೆ ಒಂದು ಚೀಸ್ ಹಾಳೆ ಇಡಿ. ಇನ್ನೊಂದು ಬ್ರೆಡ್‌ಗೆ ಕೊತ್ತಂಬರಿ ಸೊಪ್ಪಿನ ಚಟ್ನಿ ಹಚ್ಚಿ.
undefined
ಕಡಲೆ ಹಿಟ್ಟಿನ ದ್ರಾವಣದಲ್ಲಿ ಅದ್ದಿ. ನಂತರ ಎಣ್ಣೆಯಲ್ಲಿ ಬ್ರೆಡ್‌ನ ಎರಡು ಬದಿಯನ್ನು ಡೀಪ್‌ ಫ್ರೈ ಮಾಡಿ.
undefined
ಸಾಸ್‌ ಅಥವಾ ಪುದೀನಾ ಚಟ್ನಿ ಜೊತೆ ಬ್ರೆಡ್‌ ಪಕೋಡ ಎಂಜಾಯ್‌ ಮಾಡಿ.
undefined
click me!