ತೂಕ ಕಡಿಮೆ ಮಾಡಲು ಪಾನಿಪುರಿ... ಹೌದು ನೀವು ಕೇಳಿದ್ದು ಸರಿ ಇದೆ...
First Published | Mar 18, 2021, 3:34 PM ISTಪಾನಿಪುರಿ ಅಥವಾ ಗೋಲ್ಗಪ್ಪ ರುಚಿ ಅಂದರೆ ಎಲ್ಲರಿಗೂ ಇಷ್ಟ. ಪಾನಿಪುರಿ ದೇಶದ ಅತ್ಯಂತ ನೆಚ್ಚಿನ ಬೀದಿ ತಿಂಡಿಗಳಲ್ಲಿ ಒಂದಾಗಿದೆ. ಆದರೆ ಅನೇಕ ಜನರು ತಮ್ಮ ಕಟ್ಟುನಿಟ್ಟಿನ ಆಹಾರ ಯೋಜನೆಯಿಂದಾಗಿ ಪಾನಿಪುರಿ ತಿನ್ನುವುದನ್ನು ತಪ್ಪಿಸುತ್ತಾರೆ. ಆದರೆ ಇಲ್ಲೊಂದು ಶಾಕಿಂಗ್, ಅಲ್ಲ.. ಸಿಹಿ ಸುದ್ದಿ ಇದೆ. ಅದೇನೆಂದರೆ ಪಾನಿಪುರಿ ತಿನ್ನುವುದರಿಂದ ತೂಕ ಕಡಿಮೆಯಾಗುತ್ತದೆ. ಹೌದು ನೀವು ಕೇಳಿದ್ದು ಸರಿಯಾಗಿಯೇ ಇದೆ. ಇದು ನಿಜ. ವಾಸ್ತವವಾಗಿ, ದೇಹದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಪಾನಿಪುರಿ ಸಾಕಷ್ಟು ಸಹಾಯ ಮಾಡುತ್ತದೆ.