ಇವತ್ತು ಮಾಡಿದ ಅಡುಗೆ ಮಿಕ್ಕಿದರೆ.. ಅದನ್ನ ಫ್ರಿಡ್ಜ್‌ನಲ್ಲಿಟ್ಟು ಮಾರನೇ ದಿನ ಬಿಸಿ ಮಾಡ್ಕೊಂಡು ತಿನ್ನೋ ಅಭ್ಯಾಸ ಎಲ್ಲರಿಗೂ ಇರುತ್ತದೆ. ಆದರೆ, ಹಾಗೆ ಮಿಕ್ಕಿದ್ದನ್ನ ಬಿಸಿ ಮಾಡಿ ತಿನ್ನೋದು ಒಳ್ಳೇದಲ್ಲ ಅಂತಾರೆ. ಮುಖ್ಯವಾಗಿ ಬಿಸಿ ಮಾಡಿ ತಿನ್ನಬಾರದು ಅಂತ ಹೇಳ್ತಾರೆ. ಹೀಗೆ ಮಾಡೋದ್ರಿಂದ.. ಫುಡ್ ಪಾಯ್ಸನ್ (ವಿಷಾಹಾರ) ಆಗುತ್ತೆ ಅಂತ ಭಯಪಡ್ತಾರೆ. ಅದು ನಿಜ. ಆದರೆ, ಅದು ಕೆಲವೊಂದು ಆಹಾರಗಳ ಕೆಲವು ಫುಡ್ಸ್‌ಗಳನ್ನ ಪೊರಪಾಟಿನಿಂದಲೂ ವಾರ್ಮ್ ಮಾಡಿ ತಿನ್ಬಾರ್ದು. ಯಾವುವು ಅಂತ ನೋಡೋಣ..
ಅನ್ನ
ರಾತ್ರಿ ಮಿಕ್ಕಿದ ಅನ್ನವನ್ನ ಬಹಳಷ್ಟು ಜನ ಮಾರನೇ ದಿನ ಬಿಸಿ ಮಾಡಿ ತಿನ್ನುತ್ತಾರೆ. ಆದರೆ, ಅನ್ನ ಬಿಸಿ ಮಾಡುವುದರಿಂದ ಅದು ವಿಷ ಆಗುತ್ತದೆ. ನಾವು ಒಮ್ಮೆ ಮಾಡಿದ ಅನ್ನವನ್ನ ರೂಮ್ ಟೆಂಪರೇಚರ್‌ನಲ್ಲಿ ಹೆಚ್ಚು ಹೊತ್ತು ಇಟ್ಟಾಗ, ಅದು ಒಂದು ರೀತಿಯ ಬ್ಯಾಕ್ಟೀರಿಯಾ ಬೆಳೆಸುತ್ತದೆ. ಇದನ್ನ ಮತ್ತೊಮ್ಮೆ ಬಿಸಿ ಮಾಡುವುದರಿಂದ ಅದು ವಿಷ ಆಗುತ್ತದೆ. ಅದಕ್ಕೆ, ಅನ್ನವನ್ನ ಬಿಸಿ ಮಾಡಿ ತಿನ್ನಬಾರದು.
ಮೊಟ್ಟೆಗಳು
ಒಮ್ಮೆ ಬಿಸಿ ಮಾಡಿ ಬೇಯಿಸಿದ ಮೊಟ್ಟೆಗಳನ್ನು ಮತ್ತೆ ಬಿಸಿ ಮಾಡೋದು ತುಂಬಾ ಅಪಾಯಕಾರಿ. ಅದರಲ್ಲೂ ಗಟ್ಟಿಯಾಗಿ ಬೇಯಿಸಿದ್ರೆ ಅಥವಾ ಹುರಿದಿದ್ರೆ, ಅವು ಮತ್ತೆ ಬಿಸಿ ಮಾಡಿದಾಗ ವಿಷಕಾರಿಯಾಗಬಹುದು. ಮೊಟ್ಟೆಯಲ್ಲಿ ಪ್ರೋಟೀನ್ ಇರುತ್ತೆ. ಆದ್ರೆ.. ನಾವು ಅದನ್ನ ಮತ್ತೊಮ್ಮೆ ಬಿಸಿ ಮಾಡಿದಾಗ ಅದರಲ್ಲಿರುವ ಪ್ರೋಟೀನ್‌ಗಳು ಹೋಗುವ ಸಾಧ್ಯತೆ ಇದೆ. ರುಚಿ ಕೂಡ ಕಳೆದುಕೊಳ್ಳುತ್ತೆ. ಅದಕ್ಕೆ.. ಇವುಗಳನ್ನ ಮತ್ತೆ ಬಿಸಿ ಮಾಡಬಾರದು. ಅಷ್ಟೇ ಅಲ್ಲದೆ ಮೊಟ್ಟೆ ಬೇಯಿಸಿದ ನಂತರ ತಾಜಾ ಇರುವಾಗಲೇ ತಿನ್ನೋದು ಒಳ್ಳೇದು.
ಆಲೂಗಡ್ಡೆ
ಆಲೂಗಡ್ಡೆ ಪಿಷ್ಟ ಪದಾರ್ಥ ಹೊಂದಿರುವ ಆಹಾರ. ರೂಮ್ ಟೆಂಪರೇಚರ್‌ನಲ್ಲಿ ಇಟ್ಟಾಗ ಅವು ಬೇಗ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಬೆಳೆಸುತ್ತವೆ. ಆಲೂಗಡ್ಡೆಯನ್ನು ಮತ್ತೆ ಬಿಸಿ ಮಾಡುವುದರಿಂದ ಅವು ಮೃದುವಾಗುತ್ತವೆ. ಅವುಗಳ ರುಚಿ ಕಳೆದುಕೊಳ್ಳುತ್ತವೆ. ಮಿಕ್ಕಿದ ಆಲೂಗಡ್ಡೆಯನ್ನು ಫ್ರಿಡ್ಜ್‌ನಲ್ಲಿ ಇಟ್ಟು ತಣ್ಣಗೆ ಅಥವಾ ಮತ್ತೆ ಬಿಸಿ ಮಾಡದೆ ತಿನ್ನೋದು ಒಳ್ಳೇದು.
ಡ್ರೈ ಚಿಕನ್:
ಚಿಕನ್ ಪ್ರೋಟೀನ್, ಇದನ್ನು ಮತ್ತೆ ಬಿಸಿ ಮಾಡಿದಾಗ ಒಣಗಿ, ಗಟ್ಟಿಯಾಗುತ್ತದೆ. ಚಿಕನ್ ಅನ್ನು ಮತ್ತೆ ಬಿಸಿ ಮಾಡುವುದರಿಂದ ಹಾನಿಕಾರಕ ಬ್ಯಾಕ್ಟೀರಿಯಾ ಬೆಳೆಯುತ್ತದೆ. ಇದು ಫುಡ್ ಪಾಯ್ಸನ್ ಆಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಸುರಕ್ಷಿತವಾಗಿರಲು ಮಿಕ್ಕಿದ ಚಿಕನ್‌ನ್ನು ತಣ್ಣಗೆ ತಿನ್ನೋದು ಅಥವಾ ಮತ್ತೆ ಬಿಸಿ ಮಾಡದೆ ಬಳಸೋದು ಉತ್ತಮ.
ಪಾಲಕ್ ಸೊಪ್ಪು
ಪಾಲಕ್ ಸೊಪ್ಪು ಒಂದು ಎಲೆಯ ತರಕಾರಿಯಾಗಿದೆ. ಇದರಿಂದ ಮಾಡಲಾದ ಪಾಲಕ್ ಪನ್ನೀರ್, ಪಾಲಕ್ ಬಾತ್ ಸೇರಿದಂತೆ ಇನ್ನಿತರ ಪಾಲಕ್ ಸೊಪ್ಪಿನ ಅಡುಗೆಗಳನ್ನು ಮತ್ತೆ ಬಿಸಿ ಮಾಡಿದಾಗ, ಅದು ಹಾನಿಕಾರಕ ವಿಷವನ್ನು ಬಿಡುಗಡೆ ಮಾಡುತ್ತದೆ. ಈ ಪಾಲಕ್ ಸೊಪ್ಪನ್ನು ಮತ್ತೆ ಬಿಸಿ ಮಾಡುವುದರಿಂದ ನೈಟ್ರೋಸಮೈನ್‌ಗಳು ಉತ್ಪತ್ತಿಯಾಗುತ್ತವೆ. ಇವು ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದು ಹೇಳಲಾಗುತ್ತಿದೆ. ಇನ್ನು ಬೇಯಿಸಿದ ತಕ್ಷಣ ಅಥವಾ, ಅದನ್ನು ಮತ್ತೊಮ್ಮೆ ಬಿಸಿ ಮಾಡದೆ ತಿನ್ನುವುದು ಒಳ್ಳೆಯ ಅಭ್ಯಾಸ ಎಂದು ಹೇಳಲಾಗುತ್ತದೆ.
ಅಣಬೆಗಳು:
ನಾವು ಸೇವಿಸುವ ಆಹಾರಗಳಲ್ಲಿ ಅಣಬೆಗಳು ಸೂಕ್ಷ್ಮವಾದುದಾಗಿದೆ. ಅಣಬೆಯಿಂದ ಮಾಡಲಾದ ಆಹಾರಗಳನ್ನು ಮತ್ತೆ ಬಿಸಿ ಮಾಡುವುದರಿಂದ ಅವು ಬೇಗನೆ ಹಾಳಾಗುತ್ತವೆ. ಅಣಬೆಗಳನ್ನು ಮತ್ತೆ ಬಿಸಿ ಮಾಡುವುದರಿಂದ ಅವು ತುಂಬಾ ಮೆತ್ತಗಾಗುತ್ತವೆ. ಜೊತೆಗೆ, ಅಣಬೆ ಒಡೆದು ತನ್ನ ಆಕಾರವನ್ನೇ ಕಳೆದುಕೊಳ್ಳುತ್ತವೆ. ಅಣಬೆಗಳನ್ನು ಬೇಯಿಸಿದ ತಕ್ಷಣ ಅಥವಾ ಮತ್ತೆ ಬಿಸಿ ಮಾಡದೆ ತಿನ್ನೋದು ಒಳ್ಳೇದು.