ತೂಕ ಹೆಚ್ಚಾಗುತ್ತಿದೆ ಎಂದ ಕೂಡಲೇ ಜನರು ಚಪಾತಿ ತಿನ್ನಲು ಶುರು ಮಾಡುತ್ತಾರೆ. ಆದರೆ, ನಿಜವಾಗಲೂ ಚಪಾತಿ ಎಲ್ಲರಿಗೂ ಅಗತ್ಯ ಪೋಷಕಾಂಶಗಳನ್ನು ಪೂರೈಸಿ ತೂಕ ಸರಿದೂಗಿಸಲು ಸಹಕರಿಸುವುದು ಹೌದಾ? ಈ ಬಗ್ಗೆ ಇರೋ ತಪ್ಪು ಕಲ್ಪನೆಗಳೇನು?
ಹೆಚ್ಚಿನ ತೂಕ
ಹಲವರು ತೂಕ ಇಳಿಸಿಕೊಳ್ಳಲು ಚಪಾತಿ ತಿನ್ನುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ ಅಧಿಕ ತೂಕ ಅಥವಾ ಬೊಜ್ಜು ಸಮಸ್ಯೆಗಳಿಂದ ಬಳಲುತ್ತಿರುವವರು ಗೋಧಿ ಚಪಾತಿಯಿಂದ ದೂರವಿರಬೇಕು. ಇದು ತೂಕವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಜೀರ್ಣಕ್ರಿಯೆ ಸ್ಲೋ ಮಾಡುತ್ತೆ
ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗಿರುವವರು ಚಪಾತಿ ತಿನ್ನಬಾರದು. ಗ್ಯಾಸ್, ಅಜೀರ್ಣ, ಹುಳಿ ತೇಗು, ಹೊಟ್ಟೆ ಉಬ್ಬರದಂತಹ ಜೀರ್ಣ ಸಮಸ್ಯೆಗಳಿಂದ ಬಳಲುವವರು ಚಪಾತಿಯಿಂದ ದೂರವಿರಬೇಕು. ಏಕೆಂದರೆ ಇದು ನಿಮ್ಮ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಡಯಾಬಿಟಿಕ್ ಪೆಷೆಂಟ್ಸ್‌ಗೆ ಚಪಾತಿ ಒಳ್ಳೇದಾ?
ಮಧುಮೇಹಿಗಳು ಕೂಡ ಚಪಾತಿ ತಿನ್ನಬಾರದೆಂದೇ ಹೇಳುತ್ತಾರೆ ತಜ್ಞರು. ಚಪಾತಿ ಸ್ವಲ್ಪ ಸಿಹಿ. ಇದರಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಹೆಚ್ಚಿರುತ್ತದೆ. ಇದನ್ನು ತಿಂದರೆ ಮಧುಮೇಹಿಗಳ ರಕ್ತದ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಆದ್ದರಿಂದ ಸಕ್ಕರೆ ಇರುವವರೂ ಚಪಾತಿ ತಿನ್ನಬಾರದು.
ಕೆಮ್ಮು, ಜ್ವರ
ಕೆಲವು ಅನಾರೋಗ್ಯ ಸಮಸ್ಯೆಗಳಿರುವವರೂ ಚಪಾತಿ ಅವೈಡ್ ಮಾಡಬೇಕು. ವಿಶೇಷವಾಗಿ ಕಫ, ಜ್ವರ, ಶೀತ, ನೆಗಡಿ ಮುಂತಾದ ಶೀತ ಸಂಬಂಧ ರೋಗಗಳಿಂದ ಬಳಲುವವರು ಚಪಾತಿ ತಿನ್ನಬೇಡಿ. ಏಕೆಂದರೆ ಇದು ನಿಮ್ಮ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಗೋಧಿಗೆ ಬದಲಾಗಿ ಮಲ್ಟಿಗ್ರೇನ್ ರೊಟ್ಟಿ
ಗೋಧಿ ಹಿಟ್ಟಿನ ಬದಲು ನೀವು ರಾಗಿ, ಮೆಕ್ಕೆಜೋಳ, ಬಾರ್ಲಿ, ಜೋಳ, ನವಣೆ ಮುಂತಾದ ಹಲವು ಬಗೆಯ ಹಿಟ್ಟಿನಿಂದ ತಯಾರಿಸಿದ ಚಪಾತಿ ತಿನ್ನಬಹುದು. ಇದನ್ನು ಮಲ್ಟಿಗ್ರೇನ್ ರೊಟ್ಟಿ ಎನ್ನುತ್ತಾರೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೇದು.
ಮಲ್ಟಿಗ್ರೇನ್ ರೊಟ್ಟಿ ಪ್ರಯೋಜನ
ಮಲ್ಟಿಗ್ರೇನ್ ರೊಟ್ಟಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಜೊತೆಗೆ ನಮ್ಮ ರೋಗನಿರೋಧಕ ಶಕ್ತಿಯನ್ನು (Immunity Power) ಹೆಚ್ಚಿಸಲು ಸಹಕರಿಸುತ್ತದೆ. ಈ ರೊಟ್ಟಿ ನಮ್ಮ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದು. ಇದನ್ನು ತಿಂದರೆ ಚಯಾಪಚಯ ಕ್ರಿಯೆಯೂ ವೇಗವಾಗಿ ನಡೆಯುತ್ತದೆ. ಇದು ನೀವು ತೂಕ ಇಳಿಸಿಕೊಳ್ಳಲುವಂತೆ ಮಾಡುತ್ತದೆ. ತೂಕ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಗೋಧಿ ಹಿಟ್ಟಿನಿಂದ ಮಾಡಿದ ಚಪಾತಿ ಒಳ್ಳೆಯದು.