ಜಗತ್ತಿನ ಟಾಪ್‌ 10 ಮದ್ಯ ಉತ್ಪಾದಕ ಕಂಪನಿಗಳು, ಭಾರತದ ಬ್ರ್ಯಾಂಡ್‌ ಲಿಸ್ಟ್‌ನಲ್ಲಿ ಇದ್ಯಾ?

First Published | Aug 9, 2024, 7:22 PM IST

ಭಾರತದ ಯಾವೊಂದು ಮದ್ಯ ತಯಾರಕ ಕಂಪನಿ ಕೂಡ ವಿಶ್ವದ ಅತಿದೊಡ್ಡ ಮದ್ಯ ಉತ್ಪಾದಕ ಕಂಪನಿಯ ಟಾಪ್‌ 10 ಲಿಸ್ಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಆದರೆ, 12.05 ಬಿಲಿಯನ್‌ ಯುಎಸ್‌ ಡಾಲರ್‌ ಮಾರ್ಕೆಟ್‌ ಮೌಲ್ಯದೊಂದಿಗೆ ಭಾರತದ ಕಂಪನಿಯೊಂದು 15ನೇ ಸ್ಥಾನದಲ್ಲಿದೆ. ಇದರಲ್ಲಿ ಟಾಪ್‌ 10 ಮದ್ಯ ಉತ್ಪಾದಕ ಕಂಪನಿಗಳೊಂದಿಗೆ ಟಾಪ್‌ 50ಯಲ್ಲಿರುವ ಭಾರತೀಯ ಕಂಪನಿಗಳ ವಿವರವನ್ನೂ ನೀಡಲಾಗಿದೆ.
 

ಆಲ್ಕೋಹಾಲ್‌ ಇಂಡಸ್ಟ್ರೀ 2030ರ ವೇಳೆಗೆ ಜಾಗತಿಕವಾಗಿ 4.3 ಟ್ರಿಲಿಯನ್‌ ಯುಎಸ್‌ ಡಾಲರ್‌ ಮೌಲ್ಯ ದಾಟುವ ಸಾಧ್ಯತೆ ಇದೆ ಎಂದು ಮ್ಯಾಕ್ಸಿಮೈಜ್ ಮಾರ್ಕೆಟ್ ರಿಸರ್ಚ್‌ನ ವರದಿ ತಿಳಿಸಿದೆ.
 

 ಜಗತ್ತಿನ ಅಗ್ರ ಕಂಪನಿಗಳು ಈ ಇಂಡಸ್ಟ್ರಿಯನ್ನು ಆಳುತ್ತಿವೆ. ಜಗತ್ತಿನಲ್ಲಿ ಅಂದಾಜು 57 ಅಗ್ರ ಆಲ್ಕೋಹಾಲ್‌ ಕಂಪನಿಗಳಿವೆ. ಇವುಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ ಬರೋಬ್ಬರಿ  926.92 ಬಿಲಿಯನ್‌ ಯುಎಸ್‌ ಡಾಲರ್‌.
 

Latest Videos


ಜಗತ್ತಿನ ಟಾಪ್‌ 10 ಮದ್ಯ ಉತ್ಪಾದಕ ಕಂಪನಿಗಳ ಲಿಸ್ಟ್‌ನಲ್ಲಿ ಭಾರತದ ಯಾವುದೇ ಒಂದೂ ಕಂಪನಿಯೂ ಸ್ಥಾನ ಪಡೆದಿಲ್ಲ ಎನ್ನುವುದು ವಿಶೇಷವಾಗಿದೆ.12.05 ಬಿಲಿಯನ್ ಡಾಲರ್‌ಗಳ ಮಾರುಕಟ್ಟೆ ಬಂಡವಾಳದೊಂದಿಗೆ 15 ನೇ ಸ್ಥಾನದಲ್ಲಿ ಅಗ್ರ ಭಾರತೀಯ ಬ್ರ್ಯಾಂಡ್ ಸ್ಥಾನ ಪಡೆದುಕೊಂಡಿದೆ.
 

ಇನ್ನು ಟಾಪ್‌ 50 ಕಂಪನಿಗಳ ಲಿಸ್ಟ್‌ನಲ್ಲಿ ಭಾರತದ ಇನ್ನೂ ಎರಡು ಕಂಪನಿಳು ಸ್ಥಾನ ಪಡೆದುಕೊಂಡಿವೆ. ಅದರ ವಿವರಗಳನ್ನೂ ನೀಡಲಾಗಿದೆ. ಮಾರುಕಟ್ಟೆ ಬಂಡವಾಳದ ಪ್ರಕಾರ ವಿಶ್ವದ ಟಾಪ್‌ 10 ಆಲ್ಕೋಹಾಲ್‌ ಬ್ರ್ಯಾಂಡ್‌ಗಳು ಇಲ್ಲಿವೆ.
 

ಕ್ವೆಚೌ ಮೌಟೈ(Kweichow Moutai): ಚೀನಾದ ಕ್ವೆಚೌ ಮೌಟೈ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಜಗತ್ತಿನ ಅತ್ಯುನ್ನತ ಮಟ್ಟದ ಮದ್ಯವನ್ನು ಇದು ಉತ್ಪಾದನೆ ಮತ್ತು ಮಾರಾಟ ಮಾಡುತ್ತದೆ. ಇದರ ಮಾರುಕಟ್ಟೆ ಮೌಲ್ಯ 243.08 ಬಿಲಿಯನ್‌ ಯುಎಸ್‌ ಡಾಲರ್‌.
 

ಆನ್‌ಹ್ಯುಸರ್‌ ಬುಷ್‌ ಇನ್‌ಬೆವ್‌ (Anheuser-Busch InBev): ಬೆಲ್ಜಿಯಂ ದೇಶದ ಬ್ರ್ಯಾಂಡ್‌ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.  ಮಲ್ಟಿನ್ಯಾಷನಲ್‌ ಬ್ರೂವಿಂಗ್‌ ಕಂಪನಿಯಾಗಿರುವ ಇದು, ಐಕಾನಿಕ್‌ ಬ್ರ್ಯಾಂಡ್‌ಗಳಾದ ಬಡ್‌ವೈಸರ್‌, ಸ್ಟೆಲ್ಲಾ ಆರ್ಟಿಯೋಸ್‌ ಹಾಗೂ ಕೊರೋನಾವನ್ನು ಉತ್ಪಾದನೆ ಮಾಡುತ್ತದೆ. ಇದರ ಮಾರುಕಟ್ಟೆ ಮೌಲ್ಯ 120.24 ಬಿಲಿಯನ್‌ ಯುಎಸ್‌ ಡಾಲರ್‌.

ಡಿಯಾಜಿಯೋ (Diageo):ಇಂಗ್ಲೆಂಡ್‌ನ ಪ್ರಖ್ಯಾತ ಮದ್ಯ ಕಂಪನಿ ಡಿಯಾಜಿಯೋ. ಸ್ಪಿರಿಟ್ಸ್‌, ಬಿಯರ್ಸ್‌ ಹಾಗೂ ವೈನ್‌ಅನ್ನು ಇದು ಉತ್ಪಾದನೆ ಮಾಡುತ್ತದೆ. ಜಾನಿವಾಕರ್‌ (Johnnie Walker), ಸಿಮನ್ರಾಫ್‌ (Smirnoff) ಹಾಗೂ ಗಿನ್ನೀಸ್‌ (Guinness) ಮದ್ಯವನ್ನು ಇದು ಉತ್ಪಾದನೆ ಮಾಡುತ್ತದೆ. ಇದರ ಮಾರುಕಟ್ಟೆ ಮೌಲ್ಯ 69.29 ಬಿಲಿಯನ್‌ ಯುಎಸ್‌ ಡಾಲರ್‌ ಆಗಿದ್ದು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ವೂಲಿಯಾಂಗೆ ಯಿಬಿನ್‌ (Wuliangye Yibin): ಚೀನಾದ ಮದ್ಯ ತಯಾರಕ ಕಂಪನಿ ವೂಲಿಯಾಂಗೆ ಯಿಬಿನ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದರ ಮಾರುಕಟ್ಟೆ ಮೌಲ್ಯ 67.06 ಬಿಲಿಯನ್‌ ಯುಎಸ್‌ ಡಾಲರ್‌. ಇದು ಬಣ್ಣರಹಿತ ಮದ್ಯವಾಗಿರುವ, ಶೇ. 35 ರಿಂದ 60ರಷ್ಟು ಆಲ್ಕೋಹಾಲ್‌ ಕಂಟೆಂಟ್‌ ಹೊಂದಿರುವ ಬೈಜಿಯುಅನ್ನು ಉತ್ಪಾದನೆ ಮಾಡುತ್ತದೆ. ಇದನ್ನು 1952 ರಲ್ಲಿ ಸ್ಥಾಪಿಸಲಾಯಿತು ಮತ್ತು ಸಿಚುವಾನ್‌ನ ಯಿಬಿನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.

ಹೈನೆಕೆನ್ (Heineken): ಭಾರತೀಯರು ಕೇಳಿರುವಂತ ಬ್ರ್ಯಾಂಡ್‌ ಹೈನೆಕೆನ್‌. 50.21 ಬಿಲಿಯನ್‌ ಯುಎಸ್‌ ಡಾಲರ್‌ ಮಾರುಕಟ್ಟೆ ಮೌಲ್ಯ ಹೊಂದಿದೆ. ತನ್ನ ಜನಪ್ರಿಯ ಹೈನೆಕೆನ್‌ ಬಿಯರ್‌ ಬ್ರ್ಯಾಂಡ್‌ಗೆ ಇದು ಹೆಸರುವಾಸಿಯಾಗಿದ್ದು, ನೆದರ್ಲೆಂಡ್ ಮೂಲದ ಕಂಪನಿಯಾಗಿದೆ.
 

ಕಾನ್ಸ್‌ಸ್ಟೆಲ್ಲೇಷನ್‌ ಬ್ರ್ಯಾಂಡ್ಸ್‌ (Constellation Brands): ಅಮೆರಿಕದ ಮದ್ಯ ಉತ್ಪಾದಕ ಕಂಪನಿಯ ಹೆಸರಿಲ್ಲದೆ ಈ ಪಟ್ಟಿ ಕಂಪ್ಲೀಟ್‌ ಆಗೋದೇ ಇಲ್ಲ. 44.99 ಬಿಲಿಯನ್‌ ಯುಎಸ್‌ ಡಾಲರ್‌ ಮಾರುಕಟ್ಟೆ ಮೌಲ್ಯ ಹೊಂದಿದೆ. ಕಾನ್ಸ್ಟೆಲೇಷನ್ ಬ್ರಾಂಡ್ಸ್ ಬಿಯರ್, ವೈನ್ ಮತ್ತು ಸ್ಪಿರಿಟ್‌ಗಳ ಉತ್ಪಾನೆ ಮಾಡುತ್ತದೆ. ಇವುಗಳಲ್ಲಿ ಕೊರೊನಾ, ಮೊಡೆಲ್ಲೋ ಹಾಗೂ ರಾಬರ್ಟ್‌ ಮೊಂಡಾವಿ ಪ್ರಮುಖವಾದವು.
 

ಪೆರ್ನೋಡ್ ರಿಕಾರ್ಡ್ (Pernod Ricard): ಪೆರ್ನೋಡ್ ರಿಕಾರ್ಡ್ ಫ್ರೆಂಚ್ ಬಹುರಾಷ್ಟ್ರೀಯ ಕಂಪನಿಯಾಗಿದ್ದು ಅದು ಸ್ಪಿರಿಟ್ಸ್ ಮತ್ತು ವೈನ್ ಅನ್ನು ಉತ್ಪಾದಿಸುತ್ತದೆ. ಇದರ ಪೋರ್ಟ್‌ಫೋಲಿಯೋ ಅಬ್ಸೊಲಟ್ ವೋಡ್ಕಾ, ಚಿವಾಸ್ ರೀಗಲ್ ಮತ್ತು ಜಾಕೋಬ್ಸ್ ಕ್ರೀಕ್‌ನಂತಹ ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ. ಇದು ವಿಶ್ವದ ಎರಡನೇ ಅತಿ ದೊಡ್ಡ ವೈನ್ ಮತ್ತು ಮದ್ಯ ಮಾರಾಟಗಾರ. ಒಟ್ಟಾರೆ 33.77 ಬಿಲಿಯನ್‌ ಯುಎಸ್‌ಡಾಲರ್‌ ಮೌಲ್ಯ ಹೊಂದಿರುವ ಕಂಪನಿ ಆಗಿದೆ.
 

ಅಂಬೇವ್ (Ambev): 32.75 ಬಿಲಿಯನ್‌ ಯುಎಸ್‌ ಡಾಲರ್‌ ಮೌಲ್ಯದ ಬ್ರೆಜಿಲ್‌ ಕಂಪನಿ ಆಂಬೇವ್‌. ಇದು ಬಡ್‌ವೈಸರ್, ಸ್ಟೆಲ್ಲಾ ಆರ್ಟೊಯಿಸ್ ಮತ್ತು ಬ್ರಹ್ಮದಂತಹ ಬ್ರ್ಯಾಂಡ್‌ಗಳನ್ನು ಹೊಂದಿದೆ.
 

ಲುಜೌ ಲಾವ್‌ಜಿಯಾವೋ (Luzhou Laojiao): ಚೀನಾದ ಲುಜೌ ಲಾವ್‌ಜಿಯಾವೋ ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಬೈಜಿಯು ಮತ್ತು ಇತರ ಆಲ್ಕೊಹಾಲ್ಯುಕ್ತ ಪಾನೀಯಗಳನ್ನು ಉತ್ಪಾದಿಸುವ ಕಂಪನಿಯಾಗಿದೆ.  ಕಂಪನಿಯ ಉತ್ಪನ್ನಗಳಲ್ಲಿ ನ್ಯಾಶನಲ್ ಸೆಲ್ಲರ್ 1573 ಕಸ್ಟಮೈಸ್ಡ್ ಲಿಕ್ಕರ್ ಮತ್ತು ಲುಝೌ ಲಾವೊಜಿಯಾವೊ ಟೆಕ್ ಲಿಕ್ಕರ್ ಸೇರಿವೆ. ಇದರ ಮಾರುಕಟ್ಟೆ ಮೌಲ್ಯ 25.366 ಬಿಲಿಯನ್‌ ಯುಎಸ್‌ ಡಾಲರ್‌.

ಬ್ರೌನ್-ಫಾರ್ಮನ್ (Brown-Forman): ಅಮೇರಿಕನ್ ಕಂಪನಿಯು ಮದ್ಯ, ವೈನ್ ಮತ್ತು ಬಿಯರ್ ಅನ್ನು ಉತ್ಪಾದಿಸುತ್ತದೆ. ಇದರ ಪೋರ್ಟ್‌ಫೋಲಿಯೊ ಬ್ರ್ಯಾಂಡ್‌ಗಳಾದ ಜ್ಯಾಕ್ ಡೇನಿಯಲ್ಸ್, ಫಿನ್‌ಲ್ಯಾಂಡ್ ಮತ್ತು ಕೊರ್ಬೆಲ್ ಅನ್ನು ಒಳಗೊಂಡಿದೆ. ಇದರ ಮಾರುಕಟ್ಟೆ ಮೌಲ್ಯ 21.49 ಬಿಲಿಯನ್‌ ಯುಎಸ್‌ ಡಾಲರ್‌. ಇದು ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
 

ಯುನೈಟೆಡ್ ಸ್ಪಿರಿಟ್ಸ್ (United Spirits): ಭಾರತದ ಕಂಪನಿಯಾಗಿರುವ ಯುನೈಟೆಡ್‌ ಸ್ಪಿರಿಟ್ಸ್‌ ಪಟ್ಟಿಯಲ್ಲಿ 15ನೇ ಸ್ಥಾನದಲ್ಲಿದೆ. ಮಾರಾಟ ಪ್ರಮಾಣದಲ್ಲಿ ದೇಶದ 2ನೇ ಅತಿದೊಡ್ಡ ಮದ್ಯ ಕಂಪನಿಯಾಗಿದೆ. ಡಿಯಾಜಿಯೋದ ಸಹಕಂಪನಿಯಾಗಿದ್ದು, ಬೆಂಗಳೂರಿನ ಯುಬಿ ಟವರ್‌ನಲ್ಲಿ ಪ್ರಧಾನ ಕಚೇರಿಯಿದೆ. 12.05 ಬಿಲಿಯನ್‌ ಯುಎಸ್‌ ಡಾಲರ್‌ ಮೌಲ್ಯದ ಕಂಪನಿ ಆಗಿದೆ.
 

ಯುನೈಟೆಡ್ ಬ್ರೂವರೀಸ್ (United Breweries): ಬೆಂಗಳೂರಿನ ಪ್ರಧಾನ ಕಛೇರಿಯ ಕಂಪನಿಯು ಹೈನೆಕೆನ್ NV ಯ ಭಾರತೀಯ ಅಂಗಸಂಸ್ಥೆಯಾಗಿದೆ. ಕಂಪನಿಯು ಕಿಂಗ್‌ಫಿಶರ್ ಬ್ರಾಂಡ್‌ನ ಅಡಿಯಲ್ಲಿ ಬಿಯರ್‌ಗಳನ್ನು ಮಾರಾಟ ಮಾಡುತ್ತದೆ ಮತ್ತು ವಿವಿಧ ಆಲ್ಕೊಹಾಲ್ಯುಕ್ತ ಪಾನೀಯಗಳನ್ನು ಹೊಂದಿದೆ. ಯುನೈಟೆಡ್ ಬ್ರೂವರೀಸ್ ಭಾರತದ ಅತಿದೊಡ್ಡ ಬಿಯರ್ ಉತ್ಪಾದಕ ಕಂಪನಿ. 25ನೇ ಸ್ಥಾನದಲ್ಲಿರುವ ಇದರ ಮಾರುಕಟ್ಟೆ ಮೌಲ್ಯ 6.31 ಬಿಲಿಯನ್‌ ಯುಎಸ್‌ ಡಾಲರ್‌.
 

ರಾಡಿಕೊ ಖೈತಾನ್(Radico Khaitan): ಹಿಂದೆ ರಾಂಪುರ್ ಡಿಸ್ಟಿಲರಿ ಮತ್ತು ಕೆಮಿಕಲ್ ಕಂಪನಿ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು, ರಾಡಿಕೊ ಖೈತಾನ್ ನಾಲ್ಕನೇ ಅತಿದೊಡ್ಡ ಭಾರತೀಯ ಮದ್ಯದ ಕಂಪನಿಯಾಗಿ ಬೆಳೆದಿದೆ. ದರ ಬ್ರ್ಯಾಂಡ್‌ಗಳು US, ಕೆನಡಾ, ಯುರೋಪ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ 85 ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗುತ್ತವೆ. 33ನೇ ಸ್ಥಾನದಲ್ಲಿರುವ ಈ ಕಂಪನಿಯ ಮೌಲ್ಯ 2.72 ಬಿಲಿಯನ್‌ ಯುಎಸ್‌ ಡಾಲರ್‌.

click me!