Winter Foods :ಚಳಿಗಾಲದ ರೋಗಗಳಿಂದ ದೂರವಿರಲು ಈ ಆಹಾರಗಳು ಬೆಸ್ಟ್

Suvarna News   | Asianet News
Published : Jan 26, 2022, 03:01 PM ISTUpdated : Jan 26, 2022, 03:02 PM IST

ಚಳಿಗಾಲದಲ್ಲಿ (winter season)ಆರೋಗ್ಯವಾಗಿರಲು ದೇಹದಲ್ಲಿ ಉಷ್ಣತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಈ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಉಷ್ಣತೆಯನ್ನು ನೀಡುತ್ತದೆ ಹಾಗೂ ಶೀತದ ಜೊತೆಗೆ ಇತರ ಶೀತದ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಅಂತಹ ಆಹಾರಗಳು ಯಾವುವು ಅದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯಿರಿ.

PREV
110
Winter Foods :ಚಳಿಗಾಲದ ರೋಗಗಳಿಂದ ದೂರವಿರಲು ಈ ಆಹಾರಗಳು ಬೆಸ್ಟ್

1. ಬೆಲ್ಲ - ಚಳಿಗಾಲದಲ್ಲಿ, ಶೀತ ಮತ್ತು ಕೆಮ್ಮು ಇದ್ದಾಗ, ಬೆಲ್ಲವನ್ನು ಸಾಮಾನ್ಯವಾಗಿ ನೀಡಲಾಗುತ್ತದೆ, ಏಕೆಂದರೆ ಇದು ದೇಹಕ್ಕೆ ಬೆಚ್ಚಗಿನ ಅನುಭವವನ್ನು ನೀಡುತ್ತದೆ. ನಿತ್ಯ ಬೆಲ್ಲವನ್ನು ಸೇವಿಸುವ ಮೂಲಕ ಶೀತದ ಪರಿಣಾಮಗಳನ್ನು ಎದುರಿಸಬೇಕಾಗಿಲ್ಲ. ಇದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. 

210

2. ಮೊಟ್ಟೆ - ಮೊಟ್ಟೆ ತಿನ್ನುವವರಿಗೆ ಶೀತವನ್ನು ಎದುರಿಸಲು ಇದು ಉತ್ತಮ ಆಯ್ಕೆಯಾಗಿದೆ. ಇದು ನಿಮ್ಮ ದೇಹವನ್ನು ಶೀತದಿಂದ ರಕ್ಷಿಸುತ್ತದೆ, ಬೆಚ್ಚಗಿನ ಮತ್ತು ಪೋಷಣೆಯನ್ನು ನೀಡುತ್ತದೆ. ನೀವು ಇದನ್ನು ಯಾವುದೇ ರೂಪದಲ್ಲಿ ಸೇವಿಸಬಹುದು. ಪ್ರತಿದಿನ ಸೇವನೆ ಮಾಡಿದರೂ ಸಹ ಆರೋಗ್ಯಕ್ಕೆ ಉತ್ತಮ. 
 

310

3. ಅರಿಶಿನ - ಶೀತವನ್ನು ತಪ್ಪಿಸಲು ಇದನ್ನು ಔಷಧಿಯಾಗಿಯೂ ಬಳಸಲಾಗುತ್ತದೆ. ನೀವು ಅರಿಶಿನವನ್ನು (turmeric)ಸಾಧ್ಯವಾದಷ್ಟು ಬಳಸಬೇಕು. ದೇಹದಲ್ಲಿ ಬೆಚ್ಚಗಿನ ವಾತಾವರಣ ಕಾಪಾಡಿಕೊಳ್ಳಬೇಕು. ಇದು ಪ್ರತಿಜೀವಕವಾಗಿಯೂ ಕೆಲಸ ಮಾಡುತ್ತದೆ. ಹಾಲಿನಲ್ಲಿ, ನೀರಿನಲ್ಲಿ ಸಹ ಅರಿಶಿನ ಹಾಕಿ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ. 

410

4 .ಬೆಳ್ಳುಳ್ಳಿ - ಬೆಳ್ಳುಳ್ಳಿ ಅತ್ಯುತ್ತಮ ಪ್ರತಿಜೀವಕ ಮತ್ತು ಶೀತದಲ್ಲಿ ಬಳಸುವ ಔಷಧವಾಗಿದೆ. ಶೀತದ ದಿನಗಳಲ್ಲಿ ಬೆಳ್ಳುಳ್ಳಿ (garlic)ಚಟ್ನಿ, ಸಾರು, ಏನಾದರೂ ಅಡುಗೆ ಮಾಡಿ ಸೇವಿಸಬಹುದು. ಇದಲ್ಲದೆ, ನೀವು ಅದನ್ನು ಹಸಿಯಾಗಿ ತಿನ್ನಬಹುದು ಅಥವಾ ಬ್ರೆಡ್ ನೊಂದಿಗೆ ಹುರಿದು ಸೇವಿಸಬಹುದು. 

510

5. ಮೆಂತ್ಯ - ಮೆಂತ್ಯೆ ಬೀಜಗಳಿಂದ ತಯಾರಿಸಿದ ಲಡ್ಡುಗಳನ್ನು ವಿಶೇಷವಾಗಿ ಚಳಿಯಲ್ಲಿ ಸೇವಿಸಲಾಗುತ್ತದೆ. ಇದು ದೇಹದಲ್ಲಿ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಮೆಂತ್ಯದ ಸೊಪ್ಪು ತರಕಾರಿಯನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದಲೂ ಈ ದಿನಗಳಲ್ಲಿ ಪ್ರಯೋಜನಕಾರಿಯಾಗಲಿದೆ. 

610

6. ಒಣ ಹಣ್ಣುಗಳು - ಒಣಗಿದ ಹಣ್ಣುಗಳನ್ನು ಅಂದರೆ ಗೋಡಂಬಿ, ಬಾದಾಮಿ, ವಾಲ್ನಟ್ ಮೊದಲಾದ ಡ್ರೈ ಫ್ರುಟ್ಸ್ (dry fruits)ಸೇವಿಸುವುದು ಶೀತದಿಂದ ರಕ್ಷಿಸಲು ಅತ್ಯಂತ ಸಹಾಯಕವಾಗಿರುತ್ತದೆ. ಬೆಲ್ಲ ಮತ್ತು ತುಪ್ಪದೊಂದಿಗೆ ಬೆರೆಸಿ ಲಾಡುಗಳನ್ನು ಮಾಡಿ ಸೇವಿಸಿದರೆ ಆಗ ಅದು ಇನ್ನಷ್ಟು ಆರೋಗ್ಯಕರವಾಗುತ್ತದೆ. 

710

7. ಜೇನುತುಪ್ಪ - ಜೇನುತುಪ್ಪವನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ, ಇದು ವಿಶೇಷವಾಗಿ ಶೀತದಿನಗಳಲ್ಲಿ ಪ್ರಯೋಜನಕಾರಿಯಾಗಿದೆ. ಬೆಚ್ಚಗಿನ ನೀರಿನೊಂದಿಗೆ ಇದರ ಸೇವನೆಯು ತೂಕ ವನ್ನು ಕಳೆದುಕೊಳ್ಳಲು ಮತ್ತು ಚುರುಕಾಗಲು ಸಹ ಸಹಾಯ ಮಾಡುತ್ತದೆ. 

810

8. ಮೆಣಸು - ಈ ದಿನಗಳಲ್ಲಿ ನಿಮ್ಮ ಆಹಾರದಲ್ಲಿ ಕರಿಮೆಣಸು ಸೇರಿಸಿ. ನೀವು ಬಯಸಿದರೆ, ಸೂಪ್ ಗಳು, ಸಲಾಡ್ ಗಳು ಮತ್ತು ಮೊಳಕೆಕಾಳುಗಳೊಂದಿಗೆ ಅಥವಾ ಕೆಂಪು ಮೆಣಸಿನಕಾಯಿಯ ಸೇರಿಸಿ. ಕರಿಮೆಣಸಿನ ಕಷಾಯ ಮಾಡಿ ಸೇವನೆ ಮಾಡುವುದರಿಂದ ಕೆಮ್ಮು, ಶೀತ, ಕಫ ನಿವಾರಣೆಯಾಗಲು ಸಹಾಯ ಮಾಡುತ್ತದೆ.  

910

9. ಶುಂಠಿ - ಈ ಋತುವಿನಲ್ಲಿ ದೇಹಕ್ಕೆ ಶಾಖವನ್ನು ತರಲು ಮತ್ತು ರೋಗನಿರೋಧಕ ಶಕ್ತಿಯನ್ನು (immunity power)ಹೆಚ್ಚಿಸಲು ಶುಂಠಿಯ ಸೇವನೆಯೂ ಅತ್ಯುತ್ತಮವಾಗಿದೆ. ಬೇಳೆ, ತರಕಾರಿ, ಸೂಪ್ ಇತ್ಯಾದಿಗಳಲ್ಲಿ ಅಥವಾ ಚಟ್ನಿಯೊಂದಿಗೆ ಇದನ್ನು ಸೇರಿಸಿ. ಶುಂಠಿ ಚಹಾ, ಕಷಾಯ ಮಾಡಿ ಸಹ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ. 

1010

10. ಗರಂ ಮಸಾಲ – ಆಹಾರದಲ್ಲಿ ಸ್ವಲ್ಪ ಗರಂ ಮಸಾಲ (garam masala)ಈ ಋತುವಿನಲ್ಲಿ ಬಹಳ ಮುಖ್ಯವಾದ ರುಚಿಯನ್ನು ಹೆಚ್ಚಿಸುವುದಲ್ಲದೆ ದೇಹಕ್ಕೆ ಬೆಚ್ಚಗನ್ನು ನೀಡುತ್ತದೆ.  ಗರಂ ಮಸಾಲದಲ್ಲಿ ಎಲ್ಲಾ ರೀತಿಯ ಮಸಾಲಗಳ ಮಿಶ್ರಣ ಇರೋದರಿಂದ ಇದು ಆರೋಗ್ಯವನ್ನು ಬೆಚ್ಚಗಿಡಲು ಸಹಾಯಕವಾಗಿದೆ.

Read more Photos on
click me!

Recommended Stories