ಉಪ್ಪು, ಸಕ್ಕರೆ ಎರಡನ್ನೂ ಅವೈಡ್ ಮಾಡಿದರೆ ಹಾರ್ಟ್ ಅಟ್ಯಾಕ್ ಅಪಾಯ ತಗ್ಗಿಸಬಹುದು ನೋಡಿ!

First Published | Aug 31, 2024, 3:02 PM IST

ಈಗ ಆರೋಗ್ಯವಾಗಿ ಡ್ಯಾನ್ಸ್ ಮಾಡ್ಕೊಂಡು, ಫೀಲ್ಡಲ್ಲಿ ಆಟ ಆಡ್ಕೊಂಡು ಈರೋರು ಇದ್ದಕ್ಕಿದ್ದಂತೆ ಕುಸಿದು ಬಿದ್ದು, ಸತ್ತು ಹೋಗುತ್ತಿದ್ದಾರೆ. ಇದರಲ್ಲಿ ಮಕ್ಕಳು ಯುವಕರೂ ಸೇರಿದ್ದಾರೆನ್ನುವುದು ದುರಂತ. ಕೇವಲ ವೃದ್ಧರನ್ನು ಮಾತ್ರ ಕಾಡುತ್ತಿದ್ದ ಹೃದಯಾಘಾತ ಚಿಕ್ಕ ಚಿಕ್ಕ ಮಕ್ಕಳನ್ನೂ ಕಾಡುವಂತಾಗಲೇನು ಕಾರಣ? ಹೀಗೆಕಾಯ್ತು? ಏನು ಮಾಡಬಹುದು. 

ಹೃದಯ ಸಂಬಂಧಿ ಕಾಯಿಲೆ, ವಿಶ್ವಾದ್ಯಂತ ಸಾವಿಗೆ ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ. ಇಂದು ಚಿಕ್ಕ ವಯಸ್ಸಿನವರಲ್ಲಿಯೂ ಹೃದಯಾಘಾತ ಸಂಭವಿಸುತ್ತಿದೆ. ಇದಕ್ಕೆ ಅನಾರೋಗ್ಯಕರ ಜೀವನಶೈಲಿಯೇ ಪ್ರಮುಖ ಕಾರಣ. ವಿಶೇಷವಾಗಿ ಕೆಲವು ಆಹಾರಗಳು. ಆರೋಗ್ಯ ತಜ್ಞರ ಪ್ರಕಾರ ಕೆಲವು ರೀತಿಯ ಆಹಾರಗಳು ಹೃದಯ ಕಾಯಿಲೆಗೆ ಕಾರಣವಾಗುತ್ತವೆ. ಹೃದಯಾಘಾತವನ್ನು ಪ್ರಚೋದಿಸುತ್ತವೆ. ಅಷ್ಟೇ ಅಲ್ಲ, ಅವು ಹಲವು ಅಪಾಯಕಾರಿ ಕಾಯಿಲೆಗಳಿಗೂ ಕಾರಣವಾಗುತ್ತವೆ. ಈಗ ಅವು ಯಾವುವು?

ಉಪ್ಪು: ಅತಿಯಾಗಿ ಉಪ್ಪು ಸೇವಿಸುವುದರಿಂದ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ, ಇದು ಹೃದಯಾಘಾತಕ್ಕೆ ಪ್ರಮುಖ ಕಾರಣ. ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳಲ್ಲಿ ಉಪ್ಪಿನಂಶ ಹೆಚ್ಚಾಗಿರುತ್ತದೆ, ಇದು ಹೃದಯಾಘಾತ ಮತ್ತು ಇತರ ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ನಿಮ್ಮ ದೈನಂದಿನ ಆಹಾರದಲ್ಲಿ ಉಪ್ಪಿನ ಒಟ್ಟು ಪ್ರಮಾಣವನ್ನು ಕಡಿಮೆ ಮಾಡಿ, ಗಿಡಮೂಲಿಕೆ, ಮಸಾಲೆ ಬಳಸಿ. 

Tap to resize

ಪ್ರೋಟೀನ್ ಆಹಾರ: ಪ್ರತಿಯೊಬ್ಬರಿಗೂ ಪ್ರೋಟೀನ್ ಅವಶ್ಯಕ. ಅಂದರೆ ನೀವು ಹೆಚ್ಚು ಪ್ರೋಟೀನ್ ಹೆಚ್ಚಿರುವ ಆಹಾರ ಸೇವಿಸಬೇಕು ಎಂದರ್ಥವಲ್ಲ. ಇದು ಮೂತ್ರಪಿಂಡದ ಸಮಸ್ಯೆಗೆ ಕಾರಣವಾಗುತ್ತದೆ. ಇದು ಹೃದ್ರೋಗದ ಅಪಾಯವನ್ನೂ ಹೆಚ್ಚಿಸುತ್ತದೆ. ಆದ್ದರಿಂದ ಮಾಂಸ, ಮೀನು, ಕೋಳಿ ಮಾಂಸ, ಡೈರಿ ಉತ್ಪನ್ನಗಳನ್ನು (Dairy Products) ಮಿತವಾಗಿ ಸೇವಿಸಿ. ಬದಲಾಗಿ, ನೀವು ದ್ವಿದಳ ಧಾನ್ಯಗಳು, ಬೀನ್ಸ್ (Beans), ಸೋಯಾದಂಥ ಸಸ್ಯಾಧಾರಿತ ಪ್ರೋಟೀನ್ (Plant based Proteirns) ಆಹಾರಗಳನ್ನು ಸೇವಿಸಬಹುದು. ಇವು ನಿಮ್ಮ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಅನ್ನು ಒದಗಿಸಿ, ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ. 
 

ಸಕ್ಕರೆ: ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಹೆಚ್ಚು ಸೇವಿಸುವುದರಿಂದ ನಿಮಗೆ ಅನಗತ್ಯ ಸಮಸ್ಯೆಗಳು ಎದುರಾಗುತ್ತವೆ. ಇದು ದೇಹದ ತೂಕವನ್ನು ಹೆಚ್ಚಿಸುತ್ತದೆ. ಇದು ಟೈಪ್ 2 ಮಧುಮೇಹಕ್ಕೂ ಎಡೆ ಮಾಡಿಕೊಡಬಹುದು. ಇದು ಹೃದ್ರೋಗದ ಪ್ರಮುಖ ಅಪಾಯಕಾರಿ ಅಂಶಗಳಲ್ಲೊಂದು. ಸಿಹಿತಿಂಡಿಗಳು, ಸೋಡಾ, ಪೇಸ್ಟ್ರಿ ಮತ್ತು ಇತರೆ ಸಿಹಿತಿಂಡಿಗಳು ಎಷ್ಟೇ ರುಚಿಕರವಾಗಿದ್ದರೂ ಅವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅನಗತ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಅವುಗಳನ್ನು ಮಿತವಾಗಿ ಸೇವಿಸಿ. ಸಿಹಿತಿಂಡಿಗಳ ಮೇಲಿನ ಆಸೆಯನ್ನು ಕಡಿಮೆ ಮಾಡಲು ಫೈಬರ್‌ಯುಕ್ತ ಹಣ್ಣುಗಳನ್ನು ಸೇವಿಸಿ. ಇವು ನಿಮ್ಮ ಆರೋಗ್ಯವನ್ನು ಕಾಪಾಡುತ್ತವೆ. 
 

ಸ್ಯಾಚುರೇಟೆಡ್, ಟ್ರಾನ್ಸ್ ಕೊಬ್ಬುಗಳು: ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬುಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತವೆ. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ ನಿಮಗೆ ಹೃದ್ರೋಗ ಬರುವ ಅಪಾಯ ಹೆಚ್ಚು. ಅದಕ್ಕಾಗಿಯೇ ವೈದ್ಯರು ಕೆಂಪು ಮಾಂಸ, ಪೂರ್ಣ ಕೊಬ್ಬಿನ ಡೈರಿ ಉತ್ಪನ್ನಗಳು ಮತ್ತು ಹೈಡ್ರೋಜನೀಕರಿಸಿದ ಎಣ್ಣೆಗಳಿಂದ ತಯಾರಿಸಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಲು ಶಿಫಾರಸು ಮಾಡುತ್ತಾರೆ. ಬದಲಾಗಿ, ಬಾದಾಮಿ, ವಾಲ್‌ನಟ್ಸ್, ಆಲಿವ್ ಎಣ್ಣೆ ಮತ್ತು ಬೆಣ್ಣೆ ಹಣ್ಣು ಸೇರಿ ಪಾಲಿಸ್ಯಾಚುರೇಟೆಡ್ ಕೊಬ್ಬುಇರೋ ಆಹಾರ ಸೇವಿಸಿ. 
 

ಬೆಳಗಿನ ಉಪಾಹಾರ: ಆಗಾಗ್ಗೆ ಬೆಳಗಿನ ಉಪಾಹಾರವನ್ನು ಬಿಡುವ ಅಭ್ಯಾಸವು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಇದು ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ಅಸಮತೋಲನಗೊಳಿಸುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆ ಬರುವ ಅಪಾಯವನ್ನೂ ಹೆಚ್ಚಿಸುತ್ತದೆ. ನೀವು ಆರೋಗ್ಯಕರ ಉಪಾಹಾರವನ್ನು ಸೇವಿಸಿದರೆ, ದಿನವಿಡೀ ಶಕ್ತಿಯುತವಾಗಿರುವುದಲ್ಲದೆ, ಹಗಲಿನಲ್ಲಿ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಇದು ನಿಮ್ಮ ತೂಕವನ್ನು ಕಡಿಮೆ ಮಾಡುತ್ತದೆ. 

Latest Videos

click me!