ಕೆಂಪಕ್ಕಿ ಗೊತ್ತು, ಇದೇನು ಕಪ್ಪಕ್ಕಿ ಮಧುಮೇಹಿಗಳಿಗೆ ರಾಮಬಾಣನಾ?

Black Rice ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ನಾರಿನಂಶ, ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು, ತೂಕ ಇಳಿಸಿಕೊಳ್ಳಲು, ಹೃದಯ ಕಾಯಿಲೆಗಳು, ಮಧುಮೇಹ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ನಮ್ಮ ದೇಶದಲ್ಲಿ ಅಕ್ಕಿ ಒಂದು ಪ್ರಮುಖ ಆಹಾರ. ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಹಲವು ದೇಶಗಳಲ್ಲಿ ಅನ್ನವನ್ನು ಬಹಳ  ತಿನ್ನುತ್ತಾರೆ. ಆದರೆ ಭಾರತದಲ್ಲಿ ತುಸು ಹೆಚ್ಚು. ಏಕೆಂದರೆ ಅನ್ನ-ಸಾಂಬಾರ್ ರುಚಿ ಎಲ್ಲರಿಗೂ ಇಷ್ಟ. ಕೆಲವರು ದಿನಕ್ಕೆರಡು ಹೊತ್ತು ಅನ್ನ ತಿಂದರೆ.. ಹಲವರು ಮೂರೂ ಹೊತ್ತು ಅನ್ನವನ್ನೇ ತಿನ್ನುತ್ತಾರೆ. ಇದು ಹೊಟ್ಟೆ ತುಂಬುವುದಲ್ಲದೆ., ನಮ್ಮ ದೇಹಕ್ಕೆ ಅಗತ್ಯವಾದ ಶಕ್ತಿ ನೀಡುತ್ತದೆ. ಆದರೆ ಹಲವರು ಬಿಳಿ ಅನ್ನವನ್ನೇ ಹೆಚ್ಚಾಗಿ ತಿನ್ನುತ್ತಾರೆ. ಆದರೆ ಬಿಳಿ ಅನ್ನವನ್ನು ಹೆಚ್ಚು ತಿಂದರೆ ಅನಗತ್ಯ ಸಮಸ್ಯೆಗಳು ಬರುತ್ತವೆ. 
 

ಬಿಳಿ ಅನ್ನದಲ್ಲಿ ಕಾರ್ಬೋಹೈಡ್ರೇಟ್ಸ್ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇವು ನಮ್ಮ ತೂಕ ಹೆಚ್ಚಿಸುವುದಲ್ಲದೆ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಇತ್ತೀಚಿಗೆ ಹಲವರು ಬಿಳಿ ಅನ್ನವನ್ನು ತಿನ್ನುವುದನ್ನು ಕಡಿಮೆ ಮಾಡಿದ್ದಾರೆ. ಇದನ್ನು ಸ್ವಲ್ಪ ಪ್ರಮಾಣದಲ್ಲಿ ತಿಂದು.. ಜೋಳದ ರೊಟ್ಟಿ, ಚಪಾತಿರ, ರಾಗಿ ಮುದ್ದೆ ಮುಂತಾದವುಗಳನ್ನು ತಿನ್ನುತ್ತಾರೆ. ಬಿಳಿ ಅಕ್ಕಿ ಬೊಜ್ಜು, ಮಧುಮೇಹ, ರಕ್ತದೊತ್ತಡ ಸೇರಿ ಹಲವು ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಇದರಲ್ಲಿ ಇತರೆ ಅಕ್ಕಿಗಳಿಗಿಂತ ಹೆಚ್ಚು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಅದಕ್ಕಾಗಿಯೇ ಮಧುಮೇಹ ಇರುವವರು ಬಿಳಿ ಅಕ್ಕಿ ಬದಲಿಗೆ ಕಂದು ಅಕ್ಕಿಯನ್ನು ತಿನ್ನುತ್ತಾರೆ. ವಾಸ್ತವವಾಗಿ ಬಿಳಿ ಅಕ್ಕಿಗಿಂತಲೂ ಕಂದು, ಕಪ್ಪು ಅಕ್ಕಿ ಹೆಚ್ಚು ಆರೋಗ್ಯಕರ. ಆರೋಗ್ಯದ ದೃಷ್ಟಿಯಿಂದ ಹಲವರು ಕಪ್ಪು ಅಕ್ಕಿಯನ್ನು ಹೆಚ್ಚು ಸೇವಿಸುತ್ತಾರೆ. 


ಈ ಅಕ್ಕಿ ಕಪ್ಪಗಿರಲೇನು ಕಾರಣ?
ಇದು ತುಂಬಾ ಕುತೂಹಲಕಾರಿ ವಿಷಯ. ವಾಸ್ತವವಾಗಿ ಕಪ್ಪು ಅಕ್ಕಿಯಲ್ಲಿ ಆಂಥೋಸಯಾನಿನ್ ಎಂಬ ವರ್ಣದ್ರವ್ಯ ಇರುತ್ತದೆ. ಇದರಿಂದ ಈ ಅಕ್ಕಿಗೆ ಕಪ್ಪು ಬಣ್ಣ ಬರುತ್ತದೆ. ಇದು ಉತ್ಕರ್ಷಣ ನಿರೋಧಕ. 

ಕಪ್ಪು ಅಕ್ಕಿಯಲ್ಲಿ ಅಮೈನೋ ಆಮ್ಲ, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಇ, ಸತು, ರಂಜಕ, ಕ್ಯಾಲ್ಸಿಯಂ, ಮೆಗ್ನೀಷಿಯಮ್, ಮ್ಯಾಂಗನೀಸ್, ಪೊಟ್ಯಾಷಿಯಮ್, ಕಬ್ಬಿಣ, ತಾಮ್ರದ ಜೊತೆಗೆ ಫ್ಲೇವನಾಯ್ಡ್‌ಗಳು, ಆರೋಗ್ಯಕರ ಕೊಬ್ಬುಗಳು ಹೇರಳವಾಗಿವೆ. ಇವೆಲ್ಲವೂ ನಮ್ಮ ದೇಹವನ್ನು ಹಲವು ಕಾಯಿಲೆಗಳಿಂದ ರಕ್ಷಿಸುತ್ತವೆ. 
 

ಕಪ್ಪು ಅಕ್ಕಿಯಲ್ಲಿ  ನಾರಿನಂಶವೂ ಹೇರಳವಾಗಿರುತ್ತದೆ. ಇದು ನಿಮ್ಮ ಹೊಟ್ಟೆಯನ್ನು ಬೇಗ ತುಂಬಿಸುತ್ತದೆ ಮತ್ತು ನೀವು ಹೆಚ್ಚು ತಿನ್ನದಂತೆ ತಡೆಯುತ್ತದೆ. ಇದು ನಿಮಗೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಮಲಬದ್ಧತೆ (Constipation) ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ನಾರಿನಂಶವು ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಜೊತೆಗೆ ನಿಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸುವುದರ ಜೊತೆಗೆ ಹೃದಯವನ್ನು ಆರೋಗ್ಯವಾಗಿಡುತ್ತದೆ. 

ಕಪ್ಪು ಅಕ್ಕಿಯಲ್ಲಿ ಫೈಟೊ ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಇವು ನಮ್ಮ ದೇಹವನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ. ಈ ಆಕ್ಸಿಡೇಟಿವ್ ಒತ್ತಡ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗೆ ಕಾರಣವಾಗುತ್ತದೆ. ಆದ್ದರಿಂದ ಕಪ್ಪು ಅಕ್ಕಿ ಸೇವಿಸುವುದರಿಂದ ಇದರಲ್ಲಿರುವ ಆಂಥೋಸಯಾನಿನ್‌ಗಳು, ಗ್ಲೈಕೋಸೈಡ್‌ಗಳು, ಕ್ಯಾರೊಟಿನಾಯ್ಡ್‌ಗಳು, ಫ್ಲೇವನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳು ಹಲವು ಕಾಯಿಲೆಗಳಿಂದ ದೂರವಿಡುತ್ತದೆ. ಕಪ್ಪು ಅಕ್ಕಿಯಲ್ಲಿ  42 ರಿಂದ 50 ರವರೆಗೆ ಗ್ಲೈಸೆಮಿಕ್ ಸೂಚ್ಯಂಕ ಇರುತ್ತದೆ. ಇದು ರಕ್ತದ ಸಕ್ಕರೆ ಮಟ್ಟವನ್ನು ಹಠಾತ್ತನೆ ಹೆಚ್ಚಿಸುವುದಿಲ್ಲ. ಅದಕ್ಕಾಗಿಯೇ ಮಧುಮೇಹಿಗಳಿಗೆ ಇದು ತುಂಬಾ ಪ್ರಯೋಜನಕಾರಿ. 

Latest Videos

click me!