ಬಾಳೆಹಣ್ಣಲ್ಲಿರೋ ಫ್ರಕ್ಟೋಸ್, ಕಾರ್ಬೋಹೈಡ್ರೇಟ್, ಗ್ಲೂಕೋಸ್, ಸುಕ್ರೋಸ್‌ನಂತಹ ಸಕ್ಕರೆಗಳು ಹೇರಳವಾಗಿವೆ ಇವು ನಮ್ಮ ದೇಹಕ್ಕೆ ಅಗತ್ಯ ಶಕ್ತಿ ನೀಡುತ್ತವೆ. ಬಾಳೆಹಣ್ಣಲ್ಲಿ ನಾರಿನಂಶವೂ ಇರುತ್ತದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಜೊತೆಗೆ ಮಲಬದ್ಧತೆಯಂತಹ ಸಮಸ್ಯೆಗಳನ್ನು ಗುಣಪಡಿಸಬಲ್ಲದು. ಬಾಳೆಹಣ್ಣಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಪೊಟ್ಯಾಷಿಯಮ್ ಹೇರಳವಾಗಿದೆ. ಅಷ್ಟೇ ಅಲ್ಲ ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಹ ಇರುತ್ತವೆ. ಇವು ನಮ್ಮ ದೇಹವನ್ನು ಆರೋಗ್ಯವಾಗಿಡುತ್ತವೆ.