ಶ್ರಾವಣ ಮಾಸ ಬಂತು, ಮೊಟ್ಟೆ ತಿನ್ನೋಲ್ವಾ? ಹಾಗಾದ್ದಿಲ್ಲಿ ಈ ಆಮ್ಲೆಟ್‌ ಮಾಡಿ!

First Published | Jul 27, 2021, 1:47 PM IST

ಶ್ರಾವಣ ಮಾಸ  ಪ್ರಾರಂಭವಾಗಿದೆ. ಈ ಪವಿತ್ರ ತಿಂಗಳಲ್ಲಿ, ಹೆಚ್ಚಿನ ಜನರು ಮೊಟ್ಟೆ, ಮಾಂಸವನ್ನು ತ್ಯಜಿಸುತ್ತಾರೆ. ಇಲ್ಲಿದೆ ವೆಜ್‌ ಆಮ್ಲೆಟ್ ರುಚಿ ಮೊಟ್ಟೆಯಂತೆಯೇ. ಆದರೆ ಅದರಲ್ಲಿ ಮೊಟ್ಟೆ ಇರುವುದಿಲ್ಲ.  ಬೇಕಾಗುವ ಸಾಮಗ್ರಿಗಳು -1 ಬೌಲ್‌ ಕಡಲೆ ಹಿಟ್ಟು, 3 ಟೀಸ್ಪೂನ್ ಮೈದಾ ಹಿಟ್ಟು, 1/3 ಟೀಸ್ಪೂನ್ ಬೇಕಿಂಗ್ ಪೌಡರ್, 1 ಸಣ್ಣಗೆ ಕತ್ತರಿಸಿದ ಈರುಳ್ಳಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ, 2 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ, ಸ್ವಲ್ಪ ಬೆಣ್ಣೆ, ರುಚಿಗೆ ಉಪ್ಪು, 1/3 ಟೀಸ್ಪೂನ್ ಖಾರದ ಪುಡಿ.

ಮೊದಲು ಒಂದು ಬಟ್ಟಲಿನಲ್ಲಿ ಕಡಲೆ ಹಿಟ್ಟು ತೆಗೆದುಕೊಳ್ಳಿ.ಅದಕ್ಕೆ ಮೈದಾ ಮತ್ತು ಬೇಕಿಂಗ್ ಪೌಡರ್ ಸೇರಿಸಿ.
ರುಚಿಗೆ ತಕ್ಕಷ್ಟು ಉಪ್ಪು ಮತ್ತು ಖಾರದ ಪುಡಿ ಕೂಡ ಸೇರಿಸಿ. ನಂತರ ನೀರು ಸೇರಿಸಿ ದಪ್ಪವಾದ ಬ್ಯಾಟರ್ ತಯಾರಿಸಿಕೊಳ್ಳಿ.
Tap to resize

ಈಗ ಹಿಟ್ಟಿಗೆ ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
ಬ್ಯಾಟರ್ ತುಂಬಾ ದಪ್ಪ ಅಥವಾ ಹೆಚ್ಚು ತೆಳ್ಳಗಿರಬಾರದು.
ಈಗ ಪ್ಯಾನ್‌ಗೆ ಬೆಣ್ಣೆ ಹಾಕಿ, ಕಾದ ನಂತರ ಎರಡು ಚಮಚ ಹಿಟ್ಟು ಹರಡಿ.
ಗೋಲ್ಡನ್‌ ಕಲರ್‌ ಆಗುವವರೆಗೆ ಬೇಯಿಸಿ. ನಂತರ ತಿರುಗಿಸಿ ಇನ್ನೊಂದು ಬದಿಯನ್ನು ಬೇಯಿಸಿ.
ಹಸಿರು ಚಟ್ನಿಯೊಂದಿಗೆ ಬಿಸಿ ವೆಜ್‌ ಆಮ್ಲೆಟ್ ಅನ್ನು ಎಂಜಾಯ್‌ ಮಾಡಿ.

Latest Videos

click me!