ಮೊಟ್ಟೆ ಹಲ್ವಾ! ಮೊಟ್ಟೆ ಪ್ರಿಯರಿಗೊಂದು 'ಸ್ವೀಟ್' ನ್ಯೂಸ್

First Published | Jul 17, 2021, 8:28 AM IST

ಮೊಟ್ಟೆ ಒಂದು ಸೂಪರ್‌ ಫುಡ್‌. ಅನೇಕ ಪೋಷಕಾಂಶಗಳನ್ನು ಹೊಂದಿರುವ ಮೊಟ್ಟೆಯನ್ನು ದಿನ ಯಾವುದೇ ಸಮಯದಲ್ಲಿ ಸೇವಿಬಹುದಾಗಿದೆ. ಬೇಯಿಸಿದ ಮೊಟ್ಟೆಯಿಂದ ಹಿಡಿದು ಅಮ್ಲೆಟ್‌, ಭುರ್ಜಿ, ಕರಿ, ಮಾಸಾಲ ಹೀಗೆ ಹಲವು ಭಕ್ಷ್ಯಗಳನ್ನು ಮೊಟ್ಟೆಯಿಂದ ತಯಾರಿಸುತ್ತಾರೆ. ಕೇವಲ ಇಷ್ಟೇ ಅಲ್ಲ ಮೊಟ್ಟೆಯಿಂದ ಹಲ್ವಾ ಕೂಡ ಮಾಡಬಹುದು. ಇಲ್ಲಿದೆ ಮೊಟ್ಟೆಯ ಪುಡ್ಡಿಂಗ್‌ ಅಥವಾ ಹಲ್ವಾ ಮಾಡುವ ವಿಧಾನ. 

ಅನೇಕ ಪೌಷ್ಠಿಕಾಂಶಗಳನ್ನು ಹೊಂದಿರುವ ಮೊಟ್ಟೆ ಪ್ರತಿದಿನ ಸೇವಿಸಿದರೆ ಆರೋಗ್ಯಕ್ಕೆ ಅಗತ್ಯ ಪೋಷಕಾಂಶಗಳು ದೊರೆಯುತ್ತವೆ.
ಮುಖ್ಯವಾಗಿ ಪ್ರೋಟೀನ್, ಅಗತ್ಯಅನ್‌ಸ್ಯಾಚುರೇಟೆಡ್‌ ಫ್ಯಾಟಿ ಆ್ಯಸಿಡ್‌ಗಳು (ಲಿನೋಲಿಕ್, ಒಲೀಕ್ ಆಮ್ಲ), ಕಬ್ಬಿಣ, ವಿಟಮಿನ್‌ ಎ, ಬಿ 6, ಬಿ 12, ಫೋಲೇಟ್, ಅಮೈನೋ ಆಮ್ಲಗಳು, ರಂಜಕ ಮತ್ತು ಸೆಲೆನಿಯಮ್ ಅನ್ನು ಹೊಂದಿರುತ್ತದೆ.
Tap to resize

ಬೇಕಾಗುವ ಸಾಮಗ್ರಿ -1 ಕಪ್ ಕೆನೆ ಭರಿತ ಹಾಲು, 200 ಗ್ರಾಂ ಖೋವಾ, 6 ಮೊಟ್ಟೆಗಳು,12 ಕಪ್ ಸಕ್ಕರೆ,10 ಕೇಸರಿ ದಳಗಳು,1 ಟೀಸ್ಪೂನ್ ತುಪ್ಪ,1 ಟೀಸ್ಪೂನ್ ಏಲಕ್ಕಿ ಪುಡಿ,14 ಕಪ್ ಗೋಡಂಬಿ, 14 ಕಪ್ ಒಣದ್ರಾಕ್ಷಿ,1 ಚಿಟಕಿ ಜಾಯಿಕಾಯಿ, 1 ಟೀಸ್ಪೂನ್, 1 ಟೀಸ್ಪೂನ್ ಬಾದಾಮಿ.
ನಾನ್-ಸ್ಟಿಕ್ ಪ್ಯಾನ್‌ನಲ್ಲಿ ಹಾಲನ್ನು ಬಿಸಿ ಮಾಡಿ. ಇದು ಕುದಿಯಲು ಪ್ರಾರಂಭಿಸಿದಾಗ ಖೋವಾ ಸೇರಿಸಿ ಮತ್ತು 10-15 ನಿಮಿಷಗಳು ಸ್ವಲ್ಪ ದಪ್ಪವಾಗುವವರೆಗೆ ನಿರಂತರವಾಗಿ ಕೈಯಾಡಿಸಿ. ಹಾಲು ತಳ ಹಿಡಿಯದಂತೆ ಗಮನಿಸಿ. ಅದರ ನಂತರ ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ.
ದೊಡ್ಡ ಬಟ್ಟಲಿನಲ್ಲಿ, ಸಕ್ಕರೆಯೊಂದಿಗೆ ಮೊಟ್ಟೆಗಳನ್ನು ಚೆನ್ನಾಗಿ ಬೀಟ್‌ ಮಾಡಿ. ಅದಕ್ಕೆ ಕೇಸರಿ ದಳ ಸೇರಿಸಿ. ನಂತರ ತಣ್ಣಗಾದ ಹಾಲು ಮತ್ತು ಖೋವಾ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ.
ಮತ್ತೊಂದು ನಾನ್-ಸ್ಟಿಕ್ ಪಾತ್ರೆಯಲ್ಲಿ, ತುಪ್ಪ ಕರಗಿಸಿ ಅದಕ್ಕೆ ಮೊಟ್ಟೆ ಮಿಶ್ರಣವನ್ನು ಸೇರಿಸಿ. ಮಿಶ್ರಣ ದಪ್ಪವಾಗುವವರೆಗೆ ಮತ್ತು ಮೊಟ್ಟೆಯನ್ನು ಬೇಯುವವರೆಗೆ 10-15 ನಿಮಿಷಗಳ ಕಾಲ ನಿರಂತರವಾಗಿ ಮಿಕ್ಸ್‌ ಮಾಡುತ್ತಿರಿ.
ಈಗ ಈ ಮಿಶ್ರಣಕ್ಕೆ ಏಲಕ್ಕಿ, ಗೋಡಂಬಿ ಮತ್ತು ಒಣದ್ರಾಕ್ಷಿ ಸೇರಿಸಿ. ಈ ಹಂತದಲ್ಲಿ ಮೊಟ್ಟೆ ಮಿಶ್ರಣ ಫುಡ್ಡಿಂಗ್‌ನಂತೆ ಕಾಣುತ್ತದೆ. ಗ್ಯಾಸ್‌ ಆಫ್ ಮಾಡಿ.
ಒಂದು ತಟ್ಟೆಗೆ ತುಪ್ಪವನ್ನು ಸವರಿ ಅದರಲ್ಲಿ ಸುರಿಯಿರಿ. ಒಂದು ಸೌಟಿನ ಸಹಾಯದಿಂದ ಸಮವಾಗಿ ಹರಡಿ, ಅದರ ಮೇಲೆ ಜಾಯಿಕಾಯಿ, ಸಣ್ಣಗೆ ಕಟ್‌ ಮಾಡಿದ ಪಿಸ್ತಾ ಮತ್ತು ಬಾದಾಮಿ ಹಾಕಿ ಅಲಂಕರಿಸಿ. ಅದನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ಸವಿಯಿರಿ.

Latest Videos

click me!