ಬೇಕಾದ ವಸ್ತುಗಳು:1 ಹೂಕೋಸು, 250 ಗ್ರಾಂ ಆಲೂಗಡ್ಡೆ, 1 ಬೌಲ್ ಬಟಾಣಿ, 3 ಈರುಳ್ಳಿ, 4 ಟೊಮ್ಯಾಟೊ, 4 ಹಸಿರು ಮೆಣಸಿನಕಾಯಿ, 2 ಚಮಚ ಬೆಳ್ಳುಳ್ಳಿ ಪೇಸ್ಟ್ , 2 ಚಮಚ ಶುಂಠಿ ಪೇಸ್ಟ್, 1 ತೇಜ್‌ಪತ್ತ, 1 ದೊಡ್ಡ ಏಲಕ್ಕಿ, 2 ಲವಂಗ, 1ತುಂಡು ದಾಲ್ಚಿನ್ನಿ, 1 ಟೀಸ್ಪೂನ್ ಉಪ್ಪು, 1 ಟೀಸ್ಪೂನ್ ಖಾರದ ಪುಡಿ, 12 ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಗರಂ ಮಸಾಲ, ಸ್ವಲ್ಪ ಕೊತ್ತಂಬರಿ ಸೊಪ್ಪು.ಮೊದಲು ಆಲೂಗಡ್ಡೆ, ಹೂಕೋಸುಮತ್ತು ಬಟಾಣಿ ನೀರಿನಿಂದ ಚೆನ್ನಾಗಿ ತೊಳೆಯಿರಿ.
undefined
ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಈರುಳ್ಳಿ ಫ್ರೈ ಮಾಡಿ.
undefined
ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ.
undefined
ಈಗ ಬಟಾಣಿ, ಆಲೂಗಡ್ಡೆ ಮತ್ತು ಹೂಕೋಸು ಹಾಕಿ. ಅವುಗಳನ್ನು ಚೆನ್ನಾಗಿ ಫ್ರೈ ಮಾಡಿ.
undefined
ಸ್ಪಲ್ಪ ಸಮಯದ ನಂತರ ತೇಜ್‌ಪತ್ತ, ಏಲಕ್ಕಿ, ದಾಲ್ಚಿನ್ನಿ ಮತ್ತು ಲವಂಗವನ್ನು ಬಾಣಲೆಗೆ ಹಾಕಿ ಮಿಕ್ಸ್ ಮಾಡಿ.
undefined
ತರಕಾರಿಗಳಿಗೆ ಸ್ವಲ್ಪ ನೀರು ಹಾಕಿ ಇದರಿಂದ ಮಸಾಲೆಗಳು ಸುಡುವುದಿಲ್ಲ.
undefined
ಮಸಾಲೆಗಳನ್ನು ಹುರಿದ ನಂತರ ಅದಕ್ಕೆ ಕತ್ತರಿಸಿದ ಟೊಮ್ಯಾಟೊ ಸೇರಿಸಿ. ಟೊಮೆಟೊ ಸಾಫ್ಟ್ ಆಗುವವರೆಗೆ ಬೇಯಿಸಿ.
undefined
ಮೇಲೆ ಉಪ್ಪು ಗರಂ ಮಸಾಲ, ಖಾರದ ಪುಡಿ ಮತ್ತು ಅರಿಶಿನ ಪುಡಿಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ.
undefined
ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಮೇಲೆ ಉದುರಿಸಿದರೆ ಟೇಸ್ಟಿ ಢಾಬಾ ಶೈಲಿಯ ಆಲೂ ಗೋಬಿರೆಡಿ. ರೊಟ್ಟಿ, ಚಪಾತಿ ಅಥವಾ ಪರೋಟಗಳೊಂದಿಗೆ ಸವಿಯಿರಿ.
undefined