ರೆಸಿಪಿ- ಉಳಿದ ಇಡ್ಲಿಗಳಿಂದ ಮಾಡಿ ನೋಡಿ ಈ ಟೇಸ್ಟಿ ಸ್ನಾಕ್ಸ್‌!

First Published | Feb 20, 2021, 12:55 PM IST

ಇಡ್ಲಿ ನಮ್ಮ ದಕ್ಷಿಣ ಭಾರತದವರ ಫೇವರೇಟ್‌ ಬ್ರೇಕ್‌ಫಾಸ್ಟ್‌. ಬಿಸಿ ಬಿಸಿ ಇಡ್ಲ್ಲಿ ಸಾಂಬಾರ್‌. ಸಾಮಾನ್ಯವಾಗಿ ಎಲ್ಲರೂ ಇಷ್ಷಪಡುವ ತಿಂಡಿ. ಅದರೆ ಕೆಲಮೊಮ್ಮೆ ಬೆಳಿಗ್ಗೆ ಮಾಡಿದ ಇಡ್ಲಿ ಹೆಚ್ಚಾಗಿ ಉಳಿದು ಬಿಡುತ್ತದೆ. ಆ ಉಳಿದ ಇಡ್ಲಿಗಳಿಂದ ಮಾಡಿ ನೋಡಿ ಈ ತಿಂಡಿ. ಫ್ರೈಡ್‌ ಇಡ್ಲಿ  ಸಂಜೆ ಕಾಫಿ ಜೊತೆ ಬೆಸ್ಟ್  ಸ್ನಾಕ್ಸ್‌. ಇಲ್ಲಿದೆ ನೋಡಿ ಅದರ ರೆಸಿಪಿ.
ಇಡ್ಲಿ  6-7 
ಹೆಚ್ಚಿದ ಈರುಳ್ಳಿ - 1
ಕ್ಯಾಪ್ಸಿಕಮ್‌ - 1
ಸಣ್ಣಗೆ ಹೆಚ್ಚಿದ ಶುಂಠಿ ಬೆಳ್ಳುಳ್ಳಿ 2 ಚಮಚ
ಸಣ್ಣಗೆ ಕತ್ತರಿಸಿದ ಟೊಮೆಟೊ  1
ಸಣ್ಣಗೆ ಕತ್ತರಿಸಿದ ಮೆಣಸಿನಕಾಯಿಗಳು 2    
1 ಟೀಸ್ಪೂನ್ ಸಾಸಿವೆ
1 ಚಮಚ ಟೊಮೆಟೊ ಕೆಚಪ್
1 ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
ರುಚಿಗೆ ಉಪ್ಪು
1/2 ಚಮಚ  ಚಿಲಿ ಫ್ಲೆಕ್ಸ್‌
 

ಫ್ರೈಡ್‌ ಇಡ್ಲಿ ತಯಾರಿಸಲು, ಮೊದಲು ಉಳಿದ ಇಡ್ಲಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.
ಪ್ಯಾನ್‌ಗೆ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ ಮತ್ತು ಎಣ್ಣೆಯನ್ನು ಚೆನ್ನಾಗಿ ಕಾಯಿಸಿ.
Tap to resize

ಎಣ್ಣೆ ಬಿಸಿಯಾದಾಗ ಸಾಸಿವೆ ಸೇರಿಸಿ. ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಸೇರಿಸಿ.ಬೆಳ್ಳುಳ್ಳಿ-ಶುಂಠಿ ಮತ್ತು ಕ್ಯಾಪ್ಸಿಕಂ ಕೂಡ ಸೇರಿಸಿ.ಗೋಲ್ಡನ್‌ ಬ್ರೌನ್‌ ಆಗುವವರೆಗೆ ಫ್ರೈ ಮಾಡಿ. ನಂತರ ಕತ್ತರಿಸಿದ ಟೊಮಾಟೊ ಸೇರಿಸಿ. ಈಗ ಟೊಮೆಟೊ ಮೆತ್ತಾಗುವರೆಗೆ ಬೇಯಿಸಬೇಕು.
ಟೊಮೆಟೊ ಕರಗಿದ ತಕ್ಷಣ, ಅದಕ್ಕೆ ಟೊಮೆಟೊ ಕೆಚಪ್ ಸೇರಿಸಿ. ಚೆನ್ನಾಗಿ ಮಿಕ್ಸ್‌ ಮಾಡಿ.
ಒಂದೆರಡು ನಿಮಿಷಗಳ ನಂತರಆ ಮಿಶ್ರಣಕ್ಕೆ ಕತ್ತರಿಸಿದ ಇಡ್ಲಿಯನ್ನು ಸೇರಿಸಿ.
ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹಾಗೂ ಚಿಲಿ ಫ್ಲೆಕ್ಸ್‌ ಸೇರಿಸಿ. ಇಡ್ಲಿ ಪೀಸ್‌ ಆಗದಂತೆ ನಿಧಾನವಾಗಿ ಫ್ರೈ ಮಾ ಮಾಡಿ.
ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಫ್ರೈಡ್‌ ಇಡ್ಲಿ ಸವಿಯಲು ರೆಡಿ.

Latest Videos

click me!