ಮೀನಿನ ರೆಸಿಪಿ ಮಾಡ್ತಾ ಇದೀರಾ? ಹಾಗಿದ್ರೆ ಈ ಟಿಪ್ಸ್ ಮಿಸ್ ಮಾಡದೆ ಓದ್ಕೊಳಿ

First Published Aug 7, 2021, 12:12 PM IST

ಮೀನಿನ ಮೃದುವಾದ ಮಾಂಸ ಮತ್ತು ರುಚಿ ಮತ್ತು ವಿನ್ಯಾಸವನ್ನು ಜನ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಸ್ವಚ್ಛಗೊಳಿಸುವುದರಿಂದ ಮೀನು ಬೇಯಿಸುವವರೆಗಿನ ಕೆಲಸ ತುಂಬಾ ಕಷ್ಟ ಎನಿಸದೆ ಇರದು. ಮೀನು ಸೂಕ್ಷ್ಮವಾಗಿದೆ ಆದರೆ ರುಚಿಕರವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಮೀನುಗಳನ್ನು ಸ್ವಚ್ಛಗೊಳಿಸುವ ಮತ್ತು ಬೇಯಿಸುವ ಪ್ರಕ್ರಿಯೆಯೂ ಸಹ ಕಷ್ಟವೇ. ಆದರೆ ಕೆಲವು ಸರಳ ಟಿಪ್ಸ್ ಅನುಸರಿಸುವ ಮೂಲಕ ಮೀನುಗಳನ್ನು ಸ್ವಚ್ಛಗೊಳಿಸುವ ಮತ್ತು ಬೇಯಿಸುವ ಕಲೆ ತಿಳಿಯಬಹುದು. ಈ ಅದ್ಭುತ  ಹ್ಯಾಕ್ ಅಡುಗೆಮನೆಯ ಕೆಲಸ ಸುಗಮಗೊಳಿಸುತ್ತವೆ.
 

ಮೀನಿನ ಮುಳ್ಳು ತೆಗೆಯಿರಿ: ಮೀನಿನ ಮೂಳೆಗಳನ್ನು ತೆಗೆದುಹಾಕುವುದು ಕಷ್ಟ ಎನಿಸಬಹುದು, ಆದರೆ ಅದು ನಿಜವಾಗಿಯೂ ಸುಲಭ. ಮೀನನ್ನು ತೊಳೆದು ಸ್ವಚ್ಛಗೊಳಿಸಿ, ಒಣಗಿಸಿ ಮತ್ತು ತೀಕ್ಷ್ಣವಾದ ಚಾಕುವನ್ನು ಬಳಸಿ, ಮಧ್ಯದಿಂದ ಮೀನನ್ನು ಸೀಳಿ ಬಾಲವನ್ನು ಹಿಡಿದು, ಮೀನುಗಳನ್ನು ನಡುವೆ ಬೇರ್ಪಡಿಸಿ ಮತ್ತು ಮಾಂಸವನ್ನು ನಿಧಾನವಾಗಿ ಕತ್ತರಿಸಿ ಮೂಳೆಗಳನ್ನು ತೆಗೆಯಿರಿ.

ಮೀನಿನ ಕೊಬ್ಬಿನ ಪದರವನ್ನು ತೆಗೆದುಹಾಕಿ: ಕೊಬ್ಬಿನ ಪದರ ಅಥವಾ ಚರ್ಮವಿಲ್ಲದೆ  ಮೀನಿನ ಭಕ್ಷ್ಯವನ್ನು ಬೇಯಿಸಲು ಬಯಸಿದರೆ ಮೀನಿನ ತುಂಡುಗಳನ್ನು ಇರಿಸಿ ಮತ್ತು ಅದರ ಮೇಲೆ ಸ್ವಲ್ಪ ಕುದಿಯುವ ನೀರನ್ನು ಸುರಿಯಿರಿ. 

ಒಂದು ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಬಿಡಿ ಮತ್ತು ಸ್ವಲ್ಪ ಸಮಯದ ಬಳಿಕ  ಮೀನಿನ ತುಂಡುಗಳನ್ನು ತೆಗೆದು ಮತ್ತು ಪದರವನ್ನು ಸುಲಭವಾಗಿ ತೆಗೆಯಿರಿ. ಇದರಿಂದ ಹೆಚ್ಚು ಕಷ್ಟ ಪಡದೇ ಮೀನನ್ನು ಶುಚಿಗೊಳಿಸಬಹುದು. 

ಮೀನು ಅಂಟಿಕೊಳ್ಳುವುದನ್ನು ತಪ್ಪಿಸುವುದು ಹೇಗೆ?: ಹೆಪ್ಪುಗಟ್ಟಿದ ಮೀನುಗಳನ್ನು ಕತ್ತರಿಸುವುದು ಕಷ್ಟ ಮತ್ತು ಅದರ ಮೂಲ ವಿನ್ಯಾಸವನ್ನು ಮರಳಿ ಪಡೆಯಲು ಗಂಟೆಗಳು ತೆಗೆದುಕೊಳ್ಳಬಹುದು, ಆದರೆ ಇದನ್ನು ಸುಲಭವಾಗಿ ಮಾಡಲು ಇಲ್ಲೊಂದು ಸೂಪರ್ ಟ್ರಿಕ್ಸ್ ಇದೆ. 

ಒಂದು ಟ್ರೇನಲ್ಲಿ ಸ್ವಲ್ಪ ಎಣ್ಣೆಯನ್ನು ಹಚ್ಚಿ ಮತ್ತು ಮೀನಿನ ತುಂಡುಗಳನ್ನು ಅದರ ಮೇಲೆ ಇಡುವ ಮೂಲಕ ಮೀನು ಹೆಪ್ಪುಗಟ್ಟುವುದನ್ನು ತಡೆಯಬಹುದು.  ಅವುಗಳನ್ನು ಜಿಪ್ ಪೌಚ್ ನಲ್ಲಿ ಇಡುವ ಮೂಲಕ ಸುಲಭವಾಗಿ ಸಂಗ್ರಹಿಸಬಹುದು.

ಕೆಲವೇ ನಿಮಿಷಗಳಲ್ಲಿ ಮೀನನ್ನು ಡಿಸ್ಕೇಲ್ ಮಾಡಿ: ಮೀನನ್ನು ಸ್ವಚ್ಛಗೊಳಿಸುವ ವಿಷಯಕ್ಕೆ ಬಂದಾಗ ಮೀನುಗಳ ಮೇಲ್ಮೈ ಭಾಗವನ್ನು ಕ್ಲೀನ್ ಮಾಡುವುದು ಸಣ್ಣ ವಿಷಯವಾಗಿದೆ, ಆದರೆ ಈ ಸೂಪರ್ ಕೂಲ್ ಹ್ಯಾಕ್ ನೊಂದಿಗೆ ಕೆಲವೇ ನಿಮಿಷಗಳಲ್ಲಿ ಅದನ್ನು ತೆಗೆದುಹಾಕಬಹುದು. ಮೀನನ್ನು ಸ್ವಲ್ಪ ಟೂತ್ ಪೇಸ್ಟ್ ನಿಂದ ಕೋಟ್ ಮಾಡಿ ಮತ್ತು ಅದನ್ನು 3-4 ನಿಮಿಷಗಳ ಕಾಲ ಹಾಗೆ ಬಿಡಿ ಮತ್ತು ಚಾಕುವಿನ ಸಹಾಯದಿಂದ ಅದನ್ನು ಕ್ಲೀನ್ ಮಾಡಿ. 

ಮೀನು ತುಂಬಾ ಜಾರುತ್ತದೆಯೇ: ಮೀನನ್ನು ಕತ್ತರಿಸಿ ಬೇಯಿಸಲು ಬಳಸುವಾಗ ಅದು ತುಂಬಾ ಜಾರುತ್ತದೆಯೇ? ಸರಿ, ಅದಕ್ಕೆ ಪರಿಪೂರ್ಣ ಪರಿಹಾರ ಇಲ್ಲಿದೆ. ಮೀನನ್ನು  ಗಾಳಿ ತುಂಬಿದ ಕೋಲಾ ಪಾನೀಯದಲ್ಲಿ 5-10 ನಿಮಿಷಗಳ ಕಾಲ ನೆನೆಸಿ. ಇದರಿಂದ ಮೀನು ಅಂಟುವುದಿಲ್ಲ ಅಥವಾ ಜಾರುವುದಿಲ್ಲ.

ವಾಸನೆಯನ್ನು ತೆಗೆದುಹಾಕಿ: ಮೀನುಗಳನ್ನು ಸ್ವಚ್ಛಗೊಳಿಸುವುದು ಅಥವಾ ಕತ್ತರಿಸುವಾಗ ಕೆಟ್ಟ ವಾಸನೆ ಬರುತ್ತದೆ ಕೈಗಳಿಗೆ ಸ್ವಲ್ಪ ಟೂತ್ ಪೇಸ್ಟ್ ಅನ್ನು ಹಚ್ಚಿ ಮತ್ತು ಸ್ವಲ್ಪ ಸಮಯದವರೆಗೆ ಮಸಾಜ್ ಮಾಡಿ ಅದನ್ನು ನೀರಿನಿಂದ ತೊಳೆಯಿರಿ, ಇದರಿಂದ ವಾಸನೆ ದೂರವಾಗುತ್ತದೆ. 

click me!