ಮಳೆ ಹಾಗೂ ಚಳಿಗಾಲದ ಸಮಯದಲ್ಲಿ ಮದ್ಯಪಾನ ಪ್ರಿಯರಿಗೆ, ಅದ್ರಲ್ಲೂ ವಿಸ್ಕಿ ಕುಡಿಯೋರಿಗೆ ಒಳ್ಳೆಯ ಸಮಯ. ಇನ್ನು, ಉತ್ತಮ ವಿಸ್ಕಿ ಸೇವಿಸುವುದರ ಜತೆಗೆ ಅದಕ್ಕೆ ಯಾವ ಸ್ನ್ಯಾಕ್ಸ್ ಸರಿ ಹೊಂದುತ್ತದೆ ಅನ್ನೋದರ ಬಗ್ಗೆಯೂ ತಿಳಿದಿರಬೇಕು. ಕೆಲವು ವಿಸ್ಕಿ ಮತ್ತು ಸ್ನ್ಯಾಕ್ಸ್ ಕಾಂಬಿನೇಷನ್‌ನ ಕ್ಯುರೆಟೇಡ್ ಪಟ್ಟಿ ಇಲ್ಲಿದೆ..
ಸಿಂಗಲ್ ಮಾಲ್ಟ್ ವಿಸ್ಕಿ
ಭಾರತೀಯ ಸಿಂಗಲ್ ಮಾಲ್ಟ್ ವಿಸ್ಕಿ ತಮ್ಮ ಸೊಗಸಾದ ಸುವಾಸನೆಗಾಗಿ ಹಲವರ ಮೆಚ್ಚುಗೆ ಗಳಿಸಿವೆ. ಜಗತ್ತಿನ ಅನೇಕ ದೇಶಗಳ ವಿಸ್ಕಿಗಳಿಗೂ ಇದು ಸರಿಸಾಟಿ. ಈ ವಿಸ್ಕಿಗಳನ್ನು 100% ಮಾಲ್ಟೆಡ್ ಬಾರ್ಲಿಯಿಂದ ತಯಾರಿಸಲಾಗಿರುತ್ತೆ. ಮತ್ತು ಬಟ್ಟಿ ಇಳಿಸುವಿಕೆ ಹಾಗೂ ಏಜಿಂಗ್‌ಗೆ ಒಳಗಾಗುತ್ತದೆ. ಇದರ ಜತೆಗೆ ಮಸಾಲಾ ಬಾದಾಮಿ ಅಥವಾ ಗೋಡಂಬಿಗಳಂತಹ ಮಸಾಲೆಯುಕ್ತ ನಟ್ಸ್ ಉತ್ತಮ ಕಾಂಬಿನೇಷನ್ ಆಗುತ್ತದೆ.
ಬ್ಲೆಂಡೆಡ್ ವಿಸ್ಕಿ
ಭಾರತೀಯ ವಿಸ್ಕಿ ಉತ್ಸಾಹಿಗಳಲ್ಲಿ ಬ್ಲೆಂಡೆಡ್ ವಿಸ್ಕಿಗಳು ಜನಪ್ರಿಯ ಆಯ್ಕೆಯಾಗಿದೆ. ಈ ವಿಸ್ಕಿಗಳು ಮಾಲ್ಟ್ ವಿಸ್ಕಿ ಮತ್ತು ಧಾನ್ಯದ ವಿಸ್ಕಿಯ ಸಂಯೋಜನೆಯಾಗಿದೆ. ಇದರ ಜತೆಗೆ. ಚಿಕನ್ ಟಿಕ್ಕಾ ಅಥವಾ ಕಬಾಬ್ ಹೆಚ್ಚು ಸೂಕ್ತವಾಗುತ್ತದೆ. ನೀವು ಸಸ್ಯಾಹಾರಿ ಆಗಿದ್ರೆ ರೋಸ್ಟೆಡ್ ಕಡಲೆಬೀಜದ ಜತೆಗೂ ಸಖತ್ತಾಗಿರುತ್ತೆ.
ಭಾರತೀಯ ಸಿಂಗಲ್ ಗ್ರೈನ್ ವಿಸ್ಕಿ
ಕಾರ್ನ್, ಗೋಧಿ ಅಥವಾ ಬಾರ್ಲಿಯಂತಹ ಧಾನ್ಯಗಳಿಂದ ರಚಿಸಲಾದ ಭಾರತೀಯ ಏಕ ಧಾನ್ಯ (ಸಿಂಗಲ್ ಗ್ರೈನ್) ವಿಸ್ಕಿಗಳು ಅವುಗಳ ಅಂತರ್ಗತ ಮೃದುತ್ವ ಹಾಗೂ ಆಕರ್ಷಕವಾಗಿರುತ್ತದೆ. ಇದಕ್ಕೆ ಸೌತೆಕಾಯಿ ಸ್ಯಾಂಡ್‌ವಿಚ್‌ಗಳು ಅಥವಾ ಸುಶಿ ರೋಲ್‌ಗಳಂತಹ ಸ್ನ್ಯಾಕ್ಸ್ ಚೆನ್ನಾಗಿ ಹೊಂದುತ್ತದೆ. ಇನ್ನು, ವಿಸ್ಕಿಯ ಸಂಕೀರ್ಣತೆಯನ್ನು ಹೆಚ್ಚಿಸಲು ಬಯಸುವವರಿಗೆ, ಸ್ಪೈಸಿ ಪೊಟ್ಯಾಟೋ ವೆಡ್ಜಸ್ ಅನ್ನು ಜೋಡಿಸುವುದು ಸೂಕ್ತ ಆಯ್ಕೆಯಾಗಿದೆ.
ಹಣ್ಣುಗಳಿಂದ ತುಂಬಿದ ವಿಸ್ಕಿ
ಇತ್ತೀಚಿನ ದಿನಗಳಲ್ಲಿ, ಭಾರತವು ಫ್ರೂಟ್ ಇನ್ಫ್ಯೂಸ್ಡ್ ವಿಸ್ಕಿ ಮಾರಾಟದ ಏರಿಕೆಗೆ ಸಾಕ್ಷಿಯಾಗಿದೆ. ಈ ವಿಸ್ಕಿಗಳ ರೋಮಾಂಚಕ ಹಣ್ಣಿನ ಸಾರವನ್ನು ಹೆಚ್ಚಿಸಲು, ಅವುಗಳನ್ನು ತಾಜಾ ಮತ್ತು ರಸಭರಿತವಾದ ಹಣ್ಣುಗಳ ಸ್ಲೈಸ್ ಜತೆಗೆ ಸೇವಿಸಲು ಚೆನ್ನಾಗಿರುತ್ತದೆ.
ಭಾರತೀಯ ವಿಸ್ಕಿ ಕ್ಷೇತ್ರವು ಗಮನಾರ್ಹವಾದ ಕ್ರಾಂತಿಗೆ ಒಳಗಾಗಿದೆ. ಪ್ರಪಂಚದಾದ್ಯಂತದ ವಿಸ್ಕಿ ಉತ್ಸಾಹಿಗಳನ್ನು ತಮ್ಮ ಅಸಾಧಾರಣ ಕಲಾತ್ಮಕತೆ ಮತ್ತು ಆಕರ್ಷಕವಾದ ಸುವಾಸನೆಗಳಿಂದ ಆಕರ್ಷಿಸುತ್ತದೆ. ಹಾಗೆ, ವಿಸ್ಕಿ ಜತೆಗೆ ಸರಿಹೊಂದುವ ಸ್ನ್ಯಾಕ್ಸ್ ಇದ್ದರೆ, ಇದರಿಂದ ನಿಮ್ಮ ವಿಸ್ಕಿ ರುಚಿಯ ಅನುಭವವು ಹೊಸ ಎತ್ತರವನ್ನು ತಲುಪಬಹುದು. ಮುಂದಿನ ಬಾರಿ ನೀವು ಭಾರತೀಯ ವಿಸ್ಕಿಯನ್ನು ಸೇವಿಸುವಾಗ, ಈ ಸ್ನ್ಯಾಕ್ಸ್ ಸಂಯೋಜನೆಗಳನ್ನು ಪ್ರಯೋಗಿಸಲು ಮರೆಯಬೇಡಿ.