ಬಾಳೆಕಾಯಿ ಸಿಪ್ಪೆಯ ಈ ಚಟ್ನಿ ಸವಿದ್ರೆ ಮತ್ಯಾವತ್ತೂ ನೀವು ಸಿಪ್ಪೆನಾ ಎಸೆಯೋಲ್ಲ

First Published | Nov 12, 2020, 5:22 PM IST

ತರಕಾರಿಗಳಲ್ಲಿ ಪೌಷ್ಟಿಕಾಂಶ ಹೆಚ್ಚಾಗಿರುತ್ತದೆ. ಇವುಗಳಿಂದ ನಾವು ಹಲವಾರು ತಿನಿಸುಗಳನ್ನು ಮಾಡುತ್ತೇವೆ. ಆದರೆ ತರಕಾರಿಯನ್ನು ಬಳಸಿ ನಾವು ಸಿಪ್ಪೆಯನ್ನು ತಿಪ್ಪೆಗೆ ಎಸೆಯುತ್ತೇವೆ. ಆದರೆ ಇಂದು ನಾವು ನಿಮಗೆ ಬಾಳೆಹಣ್ಣಿನ ಸಿಪ್ಪೆಯಿಂದ ಒಂದು ಟೇಸ್ಟಿ ಮತ್ತು ರುಚಿಕರವಾದ ಚಟ್ನಿ ಮಾಡೋದು ಹೇಗೆ ಅನ್ನೋದನ್ನು ತಿಳಿಸುತ್ತೇವೆ. ಇದನ್ನು ಒಮ್ಮೆ ತಿಂದರೆ ಮತ್ಯಾವತ್ತೂ ನೀವು ಬಾಳೆಕಾಯಿ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುವುದಿಲ್ಲ.

ಬಾಳೆಹಣ್ಣನ್ನು ಸ್ವಾಧಿಷ್ಟವಾದ ಫ಼ಲಗಳಲ್ಲಿ ಒಂದಾಗಿ ಗುರುತಿಸಲಾಗುತ್ತದೆ. ಬಾಳೆಹಣ್ಣು ದೇಹಕ್ಕೆ ಎನರ್ಜಿ ನೀಡುತ್ತದೆ. ನೀವು ಬಾಳೆಕಾಯಿಯಿಂದ ಮಾಡಿದ ಹಲವಾರು ರೆಸಿಪಿಗಳನ್ನು ಸವಿದಿರಬಹುದು. ಅದರ ಚಿಪ್ಸ್ ಕೂಡ ಸವಿದಿರಬಹುದು. ಇದರ ಕೋಫ್ತ ಮಾಡಿ ಸವಿದಿರಬಹುದು, ಬಜ್ಜಿ ಮಾಡಿ ತಿಂದಿರಬಹುದು, ಪಲ್ಯ, ಶ್ಯಾವಿಗೆ ಎಲ್ಲವನ್ನೂ ಮಾಡಿರಬಹುದು. ಆದರೆ ಯಾವತ್ತಾದರೂ ಬಾಳೆಕಾಯಿ ಸಿಪ್ಪೆಯ ಚಟ್ನಿ ಮಾಡಿ ಸವಿದಿದ್ದೀರೇ? ಇಲ್ಲ ಅನ್ನೋದು ಖಂಡಿತಾ ತಿಳಿದಿದೆ.
ಬಾಳೆಕಾಯಿ ಈ ರೀತಿ ಡಿಶ್ ಮಾಡಲು ಮೊದಲಿಗೆ ಅದರ ಸಿಪ್ಪಿಯನ್ನು ತೆಗೆಯಬೇಕು. ನಂತರ ಅದರಿಂದ ನಿಮಗೆ ಬೇಕಾಗುವ ಡಿಶ್ ತಯಾರಿಸಬಹುದು. ಇಂದು ನಾವು ನಿಮಗೆ ಇದರಿಂದ ತಯಾರಾಗುವಂತಹ ಟೇಸ್ಟಿಯಾದ ಚಟ್ನಿ ಮಾಡೋದು ಹೇಗೆ ಅನ್ನೋದನ್ನು ಹೇಳುತ್ತೇವೆ. ಇದನ್ನು ಮಾಡುವ ವಿಧಾನ ತಿಳಿದರೆ ಮತ್ತೆ ಯಾವತ್ತೂ ನೀವು ಬಾಳೆಕಾಯಿ ಸಿಪ್ಪೆ ಎಸೆಯೋದೆ ಇಲ್ಲ...
Tap to resize

ಇದಕ್ಕೆ ಬೇಕಾಗುವ ಸಾಮಾಗ್ರಿಗಳ ವಿವರ ಹೀಗಿದೆ...8 ಬಾಳೆಕಾಯಿ ಸಿಪ್ಪೆ4 ಹಸಿಮೆಣಸಿನಕಾಯಿ1 ಬೆಳ್ಳುಳ್ಳಿ1 ತುಂಡು ಶುಂಠಿ2 ಚಮಚ ನಿಂಬೆ ರಸ12 ಚಮಚ ಜೀರಿಗೆ12 ಚಮಚ ಸಾಸಿವೆ2 ಚಮಚ ಎಣ್ಣೆರುಚಿಗೆ ತಕ್ಕಷ್ಟು ಉಪ್ಪು
ಬನ್ನಿ ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ನೋಡೋಣ...ಮೊದಲಿಗೆ ಬಾಳೆಕಾಯಿ ಸಿಪ್ಪೆಯನ್ನು ನಿಧಾನವಾಗಿ ತೆಗೆಯಿರಿ. ನಂತರ ಸಿಪ್ಪೆಯನ್ನು ಕುಕ್ಕರ್ ನಲ್ಲಿ ಹಾಕಿ ಅದಕ್ಕೆ ಒಂದು ಕಪ್ ನೀರು ಹಾಕಿ ಮೂರು ವಿಸಿಲ್ ಬರುವ ತನಕ ಕುದಿಸಿ.
ಕುಕ್ಕರ್ ಇಳಿಸಿದ ಬಳಿಕ ಸಿಪ್ಪೆಯನ್ನು ತೆಗೆದು ಒಂದು ಪಾತ್ರೆಯಲ್ಲಿ ಹಾಕಿ ತಣ್ಣಗಾಗಲು ಬಿಡಿ. ಈಗ ಅದನ್ನು ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.
ಈ ಸಿಪ್ಪೆಯನ್ನು ಮಿಕ್ಸಿಯಲ್ಲಿ ಹಾಕಿ, ಅದಕ್ಕೆ ಉಪ್ಪು, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಎಲ್ಲಾ ಹಾಕಿ. ಸ್ವಲ್ಪ ನೀರು ಹಾಕಿ ಮಿಕ್ಸಿ ಮಾಡಿ.
ಮಿಕ್ಸಿ ಮಾಡಿರುವ ಮಿಶ್ರಣವನ್ನು ಒಂದು ಬೌಲ್ ಗೆ ಹಾಕಿ. ಈಗ ಅದಕ್ಕೆ ನಿಂಬೆ ರಸ ಬೆರೆಸಿ. ಜೊತೆಗೆ ಎಣ್ಣೆ ಬಿಸಿ ಮಾಡಿ ಅದರಲ್ಲಿ ಸಾಸಿವೆ ಮತ್ತು ಜೀರಿಗೆ ಒಗ್ಗರಣೆ ಕೊಟ್ಟು ಚಟ್ನಿಗೆ ಹಾಕಿ.
ಈಗ ತಯಾರಾಗುತ್ತದೆ ಬಾಳೆಕಾಯಿ ಚಿಪ್ಪೆಯ ರುಚಿಕರವಾದ ಚಟ್ನಿ. ಇದು ತಿನ್ನಲು ತುಂಬಾ ಟೇಸ್ಟಿಯಾಗಿರುತ್ತದೆ. ಇದನ್ನು ಒಂದು ಸಲ ಟ್ರೈ ಮಾಡಿದರೆ ಮತ್ತೆ ನೀವು ಇಂದಿಗೂ ಬಾಳೆಕಾಯಿ ಸಿಪ್ಪೆ ಎಸೆಯುವುದಿಲ್ಲ.
ಸವಿದು ನೋಡಿ...

Latest Videos

click me!