ಪ್ರತಿದಿನ ಬಾಳೆ ಹಣ್ಣು ತಿಂದ್ರೆ ಕಣ್ಣಿಗೆ ಒಳ್ಳೇದು..! ಯಾಕೆ..? ಇಲ್ನೋಡಿ

First Published | Aug 28, 2020, 6:24 PM IST

ಸುಲಭವಾಗಿ ಸಾಮಾನ್ಯ ಎಲ್ಲ ತಿಂಗಳಲ್ಲೂ ಸಿಗುವ ಹಣ್ಣು ಅಂದ್ರೆ ಅದು ಬಾಳೆ ಹಣ್ಣು. ಡೊಡ್ಡದೊಂದು ಗೊನೆ ಬಿಟ್ಟರೆ ಮನೆಯವರಿಗೆಲ್ಲ ವಾರ ಪೂರ್ತಿ ಸಾಕು. ಈ ಬಾಳೆ ಹಣ್ಣು ನಿಮ್ಮ ಕಣ್ಣಿನ ಆರೋಗ್ಯವನ್ನೂ ಕಾಪಾಡುತ್ತೆ. ಹೇಗೆ..? ಇಲ್ಲಿ ನೋಡಿ

ಸುಲಭವಾಗಿ ಸಾಮಾನ್ಯ ಎಲ್ಲ ತಿಂಗಳಲ್ಲೂ ಸಿಗುವ ಹಣ್ಣು ಅಂದ್ರೆ ಅದು ಬಾಳೆ ಹಣ್ಣು. ಡೊಡ್ಡದೊಂದು ಗೊನೆ ಬಿಟ್ಟರೆ ಮನೆಯವರಿಗೆಲ್ಲ ವಾರ ಪೂರ್ತಿ ಸಾಕು. ಈ ಬಾಳೆ ಹಣ್ಣು ನಿಮ್ಮ ಕಣ್ಣಿನ ಆರೋಗ್ಯವನ್ನೂ ಕಾಪಾಡುತ್ತೆ.
ಕ್ವೀನ್ಸ್‌ಲ್ಯಾಂಡ್‌ನಲ್ಲಿ ನಡೆದ ಅಧ್ಯಯನದಲ್ಲಿ ಬಾಳೆ ಹಣ್ಣು ಸೇವನೆ ಕಣ್ಣಿನ ಆರೋಗ್ಯಕ್ಕೆ ಸಹಕಾರಿ ಎಂಬುದು ತಿಳಿದುಬಂದಿದೆ.
Tap to resize

ಬಾಳೆಹಣ್ಣಿನಲ್ಲಿರುವ ಕೆರೊಟೆನಾಯ್ಡ್‌ ಕಣ್ಣಿನ ದೃಷ್ಟಿಗೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ.
ಕೆರೊಟೆನಾಯ್ಡ್‌ ಎಂದರೆ ಹಣ್ಣಿನಲ್ಲಿ ಹಳದಿ, ಕೆಂಪು, ಕೇಸರಿ ಬಣ್ಣಕ್ಕೆ ಕಾರಣವಾಗುವ ಒಂದು ಅಂಶ. ಅವುಗಳು ಸಸ್ಯದ ಆರೋಗ್ಯಕ್ಕೂ ಬಹಳ ಸಹಕಾರಿ.
ಕೆರೊಟೆನಾಯ್ಡ್‌ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವವರು ಹೆಚ್ಚಿನ ಆರೋಗ್ಯ ಪ್ರಯೋಜನ ಪಡೆಯುತ್ತಾರೆ ಎಂಬುದು ಆಹಾರ ತಜ್ಞರ ಅಭಿಪ್ರಾಯ.
ಬಾಳೆಹಣ್ಣುಗಳನ್ನು 107 ದೇಶಗಳಲ್ಲಿ ಬೆಳೆಯಲಾಗುತ್ತದೆ ಮತ್ತು ವಿಶ್ವದ ಅತ್ಯುತ್ತಮ ಆಹಾರ ಬೆಳೆಗಳಲ್ಲಿ ಒಂದಾಗಿದೆ ಬಾಳೆ ಹಣ್ಣು.
ಬಾಳೆಹಣ್ಣಿನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದು ದೃಷ್ಟಿಯ ಆರೋಗ್ಯಕ್ಕೆ ಅತ್ಯುತ್ತಮ.
ಬಾಳೆಹಣ್ಣಿನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದು ದೃಷ್ಟಿಯ ಆರೋಗ್ಯಕ್ಕೆ ಅತ್ಯುತ್ತಮ.
ಕೆಲವು ಆಹಾರಗಳಲ್ಲಿ ಹೆಚ್ಚಿನ ಕೆರೊಟೆನಾಯ್ಡ್‌ ಎಂದು ಹೇಳಲಾಗುತ್ತದೆ. ಇದು ಕ್ಯಾನ್ಸರ್, ಮಧುಮೇಹ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಂತಹ ದೀರ್ಘಕಾಲದ ಕಾಯಿಲೆಗಳ ವಿರುದ್ಧ ಹೋರಾಡಲು ನಮ್ಮ ದೇಹಕ್ಕೆ ಸಹಕಾರಿ

Latest Videos

click me!