ಪನೀರ್ ಗ್ರಾಮದಲ್ಲಿನ ವಿಶೇಷ ಪನೀರ್ ತುಂಬಾ ರುಚಿಯಾಗಿದ್ದು ಆರೋಗ್ಯಕರವಾಗಿದೆ. ಇದು ಉತ್ತರಾಖಂಡದಲ್ಲಿ ಸಾಕಷ್ಟು ಜನಪ್ರಿಯವಾಗಿದೆ.
ಈ ಪನೀರ್ ಅನ್ನು ಕಾರ್ಖಾನೆಯಲ್ಲಿ ಅಥವಾ ದೊಡ್ಡ ಡೈರಿಯಲ್ಲಿ ತಯಾರಿಸುವುದಿಲ್ಲ. ಮುಸ್ಸೂರಿ ಬಳಿಯ ತೆಹ್ರಿ ಜಿಲ್ಲೆಯ ರೌತು ಎಂಬಲ್ಲಿರುವ ಬೈಲಿ ಗ್ರಾಮದ ಪ್ರತಿಯೊಂದು ಮನೆಯಲ್ಲಿಯೂ ಇದನ್ನು ತಯಾರಿಸಲಾಗುತ್ತದೆ. ಪನೀರ್ ಮಾರಾಟ ಮಾಡುವುದು ಇಲ್ಲಿನ ಜನರ ಮುಖ್ಯ ಕಸುಬು.
ಈ ಹಳ್ಳಿಯ ಜನರ ಆದಾಯದ ಏಕೈಕ ಮಾರ್ಗವೆಂದರೆ ಕೃಷಿ ಮತ್ತು ಪಶುಸಂಗೋಪನೆ. ಇಲ್ಲಿನ ಜನರು ಹಾಲು ಮಾರಾಟ ಮಾಡಲು ಮುಸ್ಸೂರಿ ಮತ್ತು ಡೆಹ್ರಾಡೂನ್‌ಗೆ ಹೋಗುತ್ತಿದ್ದರು. ಆಗ ಕೆಲಸ ಹೆಚ್ಚು ಸಂಪಾದನೆ ಕಡಿಮೆಯಾಗುತ್ತಿತ್ತು.
ಮಸ್ಸೂರಿಯಲ್ಲಿ ಪನೀರ್ ಮಾರಾಟ ಮಾಡುವುದನ್ನು ನೋಡಿದ ಈ ಹಳ್ಳಿಯ ಜನರು ನಂತರ ಹಾಲಿಗೆ ಪನ್ನೀರ್ ತಯಾರಿಸಿ ಏಕೆ ಮಾರಾಟ ಮಾಡಬಾರದು ಎಂದು ಯೋಚಿಸಿದರು.
1980 ರಲ್ಲಿ, ಕುನ್ವರ್ ಸಿಂಗ್ ಪನ್ವಾರ್ ಮೊದಲು ಪನ್ನೀರ್ ತಯಾರಿಸಿ ಮಾರಾಟ ಮಾಡಲು ಪ್ರಾರಂಭಿಸಿದರು. ಒಂದು ಕಿಲೋಗೆ ನಾಲ್ಕರಿಂದ ಐದು ರೂಪಾಯಿಗೆ ಮಾರಾಟ ಮಾಡಲಾಯಿತು.
ಆದರೆ ಇಂದು ಈ ಪನ್ನೀರ್‌ನ ಬೆಲೆ 220 ರಿಂದ 240 ರೂಪಾಯಿಗೆ ಏರಿದೆ.ಇಲ್ಲಿರುವ ಪನ್ನೀರ್ ಮಾರುಕಟ್ಟೆಗಿಂತ ಹೆಚ್ಚು ಫ್ರೆಶ್‌ಮತ್ತು ಅಗ್ಗವಾಗಿದೆ.
ಕಡಿಮೆ ಜನಸಂಖ್ಯೆ ಹೊಂದಿರುವ ಈ ಗ್ರಾಮದ ಜನರು ತಯಾರಿಸುವ ಪನ್ನೀರ್ ಮುಸ್ಸೂರಿ ಮಾತ್ರವಲ್ಲದೆ ಡೆಹ್ರಾಡೂನ್ ಮತ್ತು ದೆಹಲಿಯ ಜನರಿಗೂ ಫೇವರೇಟ್. ಆರಂಭದಲ್ಲಿ, 35 ರಿಂದ 40 ಕುಟುಂಬಗಳು ಗ್ರಾಮದಲ್ಲಿ ಪನ್ನೀರ್ ಉತ್ಪಾದನೆ ಮಾಡುತ್ತಿದ್ದರು.ಆದರೆ ಈಗ ಗ್ರಾಮದ ಪ್ರತಿಯೊಂದು ಕುಟುಂಬವು ಪ್ರತಿದಿನ 2 ರಿಂದ 4 ಕಿಲೋ ಪನ್ನೀರ್ ತಯಾರಿಸುತ್ತವೆ.
250 ಕುಟುಂಬಗಳನ್ನು ಹೊಂದಿರುವ ಈ ಗ್ರಾಮದ ಜನಸಂಖ್ಯೆಯ ಸುಮಾರು 1500. ಆದರೆ ಈ ಸಣ್ಣ ಹಳ್ಳಿ ಇಡೀ ದೇಶದಲ್ಲಿ ಪನ್ನೀರ್ ಗ್ರಾಮ ಎಂದು ಫೇಮಸ್ ಆಗಿದೆ.
ಹಾಲು ಮಾರಾಟ ಮಾಡುವುದಕ್ಕಿಂತ ಪನೀರ್ ಮಾರಾಟ ಮಾಡುವುದರಿಂದ ಹೆಚ್ಚಿನ ಪ್ರಯೋಜನವಿದೆ. ಈ ಮೊದಲು, ವಲಸೆಯ ಸಮಸ್ಯೆಯಿಂದ ನಾವು ತೊಂದರೆ ಎದುರಿಸಿದ್ದೆವು, ಆದರೆ ಈಗ ಹಳ್ಳಿಯ ಯುವಕರು ಕೂಡ ಉದ್ಯೋಗಕ್ಕಾಗಿ ನಗರಕ್ಕೆ ಹೋಗುವುದಿಲ್ಲ. ಪನೀರ್ ಬ್ಯಸಿನೆಸ್‌ನಲ್ಲಿ ತೊಡಗುತ್ತಾರೆ. ಇದು ಹಳ್ಳಿಗೆ ಉತ್ತಮ ಸಂಕೇತವಾಗಿದೆ ಎಂದು ಇಲ್ಲಿನ ಗ್ರಾಮಸ್ಥರು ಹೇಳುತ್ತಾರೆ.