ಜನರು ಸಲಾಡ್ಸ್, ತರಕಾರಿಗಳು, ಬೇಳೆಕಾಳುಗಳು ಇತ್ಯಾದಿಗಳಲ್ಲಿ ನಿಂಬೆಯನ್ನು ಬಳಸುತ್ತಾರೆ, ಇದು ಆಹಾರದ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ, ವಿಟಮಿನ್-ಸಿ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದಲ್ಲದೆ, ಕ್ಯಾಲ್ಸಿಯಂ (Calcium), ಪೊಟ್ಯಾಸಿಯಮ್ (Potasium), ಫೈಬರ್ ನಂತಹ ಪೋಷಕಾಂಶಗಳು ನಿಂಬೆಯಲ್ಲಿ ಕಂಡುಬರುತ್ತವೆ. ಇದರಲ್ಲಿರುವ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಅನೇಕ ರೋಗಗಳಿಂದ ರಕ್ಷಿಸುತ್ತವೆ. ಆದರೆ, ನಿಂಬೆಯನ್ನು ಕೆಲವು ಆಹಾರ ವಸ್ತುಗಳೊಂದಿಗೆ ತಿನ್ನಬಾರದು. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ (bad effect on health) ಬೀರುತ್ತದೆ, ಇದು ಹೊಟ್ಟೆಯ ಸಮಸ್ಯೆಗಳಿಗೆ ಸಹ ಕಾರಣವಾಗಬಹುದು. ನಿಂಬೆಯನ್ನು ಯಾವ ಆಹಾರದೊಂದಿಗೆ ತಿನ್ನಬಾರದು ಎಂದು ತಿಳಿಯೋಣ.