ಎಲ್ಲರೂ ಊಟ ಮಾಡಿದ ನಂತರ ಮಿಕ್ಕ ಅನ್ನವನ್ನು ಏನು ಮಾಡಬೇಕೆಂಬುದು ಬಹುತೇಕರ ಸಮಸ್ಯೆ. ಕೆಲವರು ಆ ಅನ್ನವನ್ನು ಯಾರಿಗಾದರೂ ನೀಡಬಹುದು ಅಥವಾ ಅದು ಹಾಳಾಗಬಹುದು ಅಂದರೆ ಎಸೆಯಬಹುದು. ಆದರೆ ಇಂದು ನಾವು ಉಳಿದ ಅನ್ನದಿಂದ ಹೊಸ ಖಾದ್ಯವನ್ನು ತಯಾರಿಸುವುದನ್ನು ಹೇಳಿ ಕೊಡ್ತೇವೆ. ಅದನ್ನು ಮಾಡೋದು ಕೂಡ ಬಹಳ ಸುಲಭ.
26
ಉಳಿದ ಅನ್ನದಿಂದ ಈಗಾಗಲೇ ನೀವು ಬಹಳಷ್ಟು ರೆಸಿಪಿ ಟ್ರೈ ಮಾಡಿರುತ್ತೀರಿ. ಅದರೆ ದೋಸೆ ಟ್ರೈ ಮಾಡುವವರು ಬಲು ಅಪರೂಪ. ಹೌದು. ದೋಸೆಗೆ ಅಕ್ಕಿ ನೆನೆಸಿ, ರುಬ್ಬಿ, ಹುದುಗಿಸಿ ಮಾಡಬೇಕಿಂತಿಲ್ಲ. ಈ ರೀತಿಯೂ ಮಾಡಬಹುದು. ಇದು ಒಂದು ರುಚಿಕರವಾದ ಮತ್ತು ಪೌಷ್ಟಿಕ ಆಹಾರ ಅಂತಾನೆ ಹೇಳಬಹುದು.
36
ಇದನ್ನು ಮಾಡುವುದು ತುಂಬಾ ಸುಲಭ ಮತ್ತು ಅದರಲ್ಲಿ ಬಳಸುವ ಪದಾರ್ಥಗಳು ಸಹ ಈಸಿಯಾಗಿ ದೊರೆಯಲಿವೆ. ಆದ್ದರಿಂದ ಮುಂದಿನ ಬಾರಿ ನೀವು ಅನ್ನ ಉಳಿದಾಗ ದೋಸೆ ಮಾಡಲು, ಇಡೀ ಕುಟುಂಬದೊಂದಿಗೆ ರುಚಿಕರವಾದ ಖಾದ್ಯವನ್ನು ಆನಂದಿಸಲು ಮರೆಯಬೇಡಿ.
46
ಬೇಕಾಗುವ ಪದಾರ್ಥಗಳು 1 ಬಟ್ಟಲು ಉಳಿದ ಅನ್ನ 1 ಬಟ್ಟಲು ರವೆ 1 ಬಟ್ಟಲು ಮೊಸರು ರುಚಿಗೆ ತಕ್ಕಷ್ಟು ಉಪ್ಪು ಅಗತ್ಯವಿರುವಷ್ಟು ನೀರು 1/4 ಟೀಸ್ಪೂನ್ ಅಡುಗೆ ಸೋಡಾ
56
ತಯಾರಿಸುವ ವಿಧಾನ 1.ಉಳಿದ ಅನ್ನ, ರವೆ ಮತ್ತು ಮೊಸರನ್ನು ಒಂದು ದೊಡ್ಡ ಬಟ್ಟಲಿನಲ್ಲಿ ಒಟ್ಟಿಗೆ ತೆಗೆದುಕೊಳ್ಳಿ. 2.ಈಗ ಈ ಮಿಶ್ರಣವನ್ನು ಬ್ಲೆಂಡರ್ ಅಥವಾ ಮಿಕ್ಸರ್ ಜಾರ್‌ನಲ್ಲಿ ಹಾಕಿ. 3.ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ. 4.ನಯವಾದ ಮತ್ತು ದಪ್ಪವಾದ ಬ್ಯಾಟರ್ ಅಥವಾ ಹಿಟ್ಟು ರೂಪುಗೊಳ್ಳುವವರೆಗೆ ಅದನ್ನು ರುಬ್ಬಿ. 5.ರುಬ್ಬಿದ ಬ್ಯಾಟರ್ ಅನ್ನು ಮತ್ತೆ ಬಟ್ಟಲಿನಲ್ಲಿ ತೆಗೆದುಹಾಕಿಡಿ. 6.ಈಗ ಅಡುಗೆ ಸೋಡಾ ಸೇರಿಸಲು ಸರಿಯಾದ ಸಮಯ. ಇದಕ್ಕೆ ಈಗ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
66
ದೋಸೆ ಹುಯ್ಯಲು ನಾನ್-ಸ್ಟಿಕ್ ಗ್ರಿಡಲ್ ಅಥವಾ ಹಂಚನ್ನು ಬಿಸಿ ಮಾಡಿ. ಸ್ವಲ್ಪ ಎಣ್ಣೆ ಅಥವಾ ತುಪ್ಪ ಸವರಿ. ಹಂಚು ಬಿಸಿಯಾದಾಗ ಒಂದು ದೊಡ್ಡ ಚಮಚದಲ್ಲಿ ಹಿಟ್ಟು ತೆಗೆದುಕೊಂಡು ಹರಡಿ. ಇದಕ್ಕೆ ದುಂಡಗಿನ ಆಕಾರವನ್ನು ನೀಡಿದ ನಂತರ, ಅಂಚುಗಳಿಗೆ ಸ್ವಲ್ಪ ಎಣ್ಣೆಯನ್ನು ಹಚ್ಚಿ. ಒಂದು ಬದಿಯಿಂದ ಚಿನ್ನದ ಕಂದು ಬಣ್ಣ ಬರುವವರೆಗೆ ಮಧ್ಯಮ ಉರಿಯಲ್ಲಿ ಬೇಯಲು ಬಿಡಿ. ನಂತರ ಅದನ್ನು ತಿರುಗಿಸಿ ಇನ್ನೊಂದು ಬದಿಯೂ ಬೇಯಿಸಿ.