ತಯಾರಿಸುವ ವಿಧಾನ
- ಮೊದಲು ಅಕ್ಕಿಯನ್ನು ತೊಳೆದು, 20 ನಿಮಿಷ ನೀರಿನಲ್ಲಿ ನೆನೆಸಿಡಿ.
- ಸೀಗಡಿಯನ್ನು ಸ್ವಚ್ಛ ಮಾಡಿ, ಅರಿಶಿನ ಪುಡಿ, ಖಾರದ ಪುಡಿ, ಉಪ್ಪು ಸೇರಿಸಿ 10 ನಿಮಿಷ ನೆನೆಸಿಡಿ.
- ದೊಡ್ಡ ಪಾತ್ರೆಯಲ್ಲಿ ಎಣ್ಣೆ, ತುಪ್ಪ ಸೇರಿಸಿ ಬಿಸಿ ಮಾಡಿ, ಲವಂಗ, ಏಲಕ್ಕಿ, ಚಕ್ಕೆ ಹಾಕಿ ಒಗ್ಗರಣೆ ಹಾಕಿ.
- ಈರುಳ್ಳಿಯನ್ನು ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಹುರಿಯಿರಿ.
- ಕತ್ತರಿಸಿದ ಟೊಮೆಟೊ, ಮೊಸರು, ಪುದೀನಾ, ಕೊತ್ತಂಬರಿ ಸೇರಿಸಿ ಕಲಕಿ, ಅದು ಮೆತ್ತಗಾದ ನಂತರ ಸೀಗಡಿ ಸೇರಿಸಿ.
- ಸೀಗಡಿ ಚೆನ್ನಾಗಿ ಬೆಂದ ನಂತರ, ತೆಂಗಿನ ಹಾಲು ಸೇರಿಸಿ ಮಧ್ಯಮ ಉರಿಯಲ್ಲಿ 2 ನಿಮಿಷ ಕುದಿಸಿ.
- ನೆನೆಸಿದ ಅಕ್ಕಿಯನ್ನು, ಬೇಕಾದಷ್ಟು ನೀರು ಮತ್ತು ಉಪ್ಪು ಸೇರಿಸಿ ಮುಚ್ಚಿಡಿ.
- ಮಧ್ಯಮ ಉರಿಯಲ್ಲಿ 10-12 ನಿಮಿಷದ ನಂತರ, ಬಿರಿಯಾನಿ ಚೆನ್ನಾಗಿ ಬೆಂದ ನಂತರ ಒಲೆಯಿಂದ ಇಳಿಸಿರಿ.
- ಬಿಸಿಯಾಗಿ ಬಡಿಸುವಾಗ ಮೇಲೆ ಕೊತ್ತಂಬರಿ, ತುಪ್ಪ ಸೇರಿಸಿ ಪರಿಮಳವಾಗಿ ಬಡಿಸಿ.