ವಿಶ್ವದ ದುಬಾರಿ ಬಿರಿಯಾನಿ... ಕೊತ್ತಂಬರಿ ಸೊಪ್ಪಲ್ಲ, ಚಿನ್ನದಿಂದ ಅಲಂಕರಿಸುತ್ತಾರೆ

Suvarna News   | Asianet News
Published : Feb 12, 2021, 04:12 PM IST

ಜಗತ್ತಿನಲ್ಲಿ ಅನೇಕ ಬಗೆಯ ರುಚಿ ರುಚಿಯ ಬೇರೆ ಬೇರೆ ಬೆಲೆಯುಳ್ಳ ತಿನಿಸುಗಳು ಇರುತ್ತವೆ. ಇವುಗಳಲ್ಲಿ ಕೆಲವು ರುಚಿಗೆ ಹೆಸರುವಾಸಿಯಾಗಿವೆ, ಕೆಲವು ವಿಶಿಷ್ಟ ಪದಾರ್ಥದಿಂದ, ಕೆಲವು ಬೇರೆ ಯಾವುದೋ ಕಾರಣದಿಂದ ಜನಪ್ರಿಯವಾಗುತ್ತವೆ. ಅವುಗಳಲ್ಲಿ ಭಾರತದಲ್ಲಿ ಜನರು ಇಷ್ಟಪಟ್ಟು ತಿನ್ನುವ ತಿನಿಸು ಎಂದರೆ ಬಿರಿಯಾನಿ. ಬಾಸುಮತಿ ಅನ್ನವನ್ನು ಹಬೆಯಲ್ಲಿ ಬೇಯಿಸಿ ಚಿಕನ್ ಅಥವಾ ಮಟನ್ ಅಥವಾ ತರಕಾರಿಗಳೊಂದಿಗೆ ಬೇಯಿಸಲಾಗುತ್ತದೆ. ಹೈದರಾಬಾದಿ ಬಿರಿಯಾನಿ ತುಂಬಾ ಫೇಮಸ್. ಆದರಿದು ವಿಶ್ವದ ದುಬಾರಿ ಬಿರಿಯಾನಿ. ಏನೀದರ ವಿಶೇಷತೆ? 

PREV
18
ವಿಶ್ವದ ದುಬಾರಿ ಬಿರಿಯಾನಿ... ಕೊತ್ತಂಬರಿ ಸೊಪ್ಪಲ್ಲ, ಚಿನ್ನದಿಂದ ಅಲಂಕರಿಸುತ್ತಾರೆ

ಬಿರಿಯಾನಿ ಬೆಲೆ ಬಗ್ಗೆ ಹೇಳಿದರೆ ರಸ್ತೆ ಬದಿಯಲ್ಲಿ 50 ರೂಪಾಯಿಗೆ ಒಂದು ಪ್ಲೇಟ್ ಬಿರಿಯಾನಿ ಸಿಗುತ್ತದೆ, ದುಬಾರಿ ಹೋಟೆಲ್ ನಲ್ಲಿ ಒಂದರಿಂದ ಎರಡು ಸಾವಿರ ರೂ. ಅಗುತ್ತದೆ. ಆದರೆ ವಿಶ್ವದ ಅತ್ಯಂತ ದುಬಾರಿ ಬಿರಿಯಾನಿ ಬೆಲೆ ಎಷ್ಟು ಗೊತ್ತಾ? 20 ಸಾವಿರ ರೂಪಾಯಿ. ಈ ಬಿರಿಯಾನಿಯನ್ನು ಚಿಕನ್ ಮತ್ತು ಮಟನ್‌ನೊಂದಿಗೆ ಚಿನ್ನದೊಂದಿಗೆ ಬಡಿಸಲಾಗುತ್ತದೆ.

28

ನೀವು ಮಾಂಸಾಹಾರಿಯಾಗಿದ್ದರೆ ಬಿರಿಯಾನಿ ಖಂಡಿತಾ ಇದನ್ನು ಇಷ್ಟಪಡುತ್ತೀರಿ. ಇದು ಭಾರತದ ಜನರಿಗೆ ಚಿಕನ್ ಮತ್ತು ಮಟನ್ ಆಯ್ಕೆಯನ್ನು ನೀಡುತ್ತದೆ. ಆದರೆ, ವಿದೇಶಗಳಲ್ಲಿ ಅನೇಕ ಕಡೆಗಳಲ್ಲಿ ಗೋಮಾಂಸವನ್ನೂ ಬಳಸಲಾಗುತ್ತದೆ.

38

ಭಾರತದಲ್ಲಿ  5 ಸ್ಟಾರ್ ಹೋಟೆಲ್‌ಗೆ‌ ಹೋಗಿ ಬಿರಿಯಾನಿ ತಿಂದರೆ, ಸಾವಿರ, ಎರಡು ಸಾವಿರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಆದರೆ ವಿಶ್ವದ ಅತ್ಯಂತ ದುಬಾರಿ ಬಿರಿಯಾನಿ ತಟ್ಟೆ ಬೆಲೆ ಷ್ಟು ಗೊತ್ತಾ? ಇಷ್ಟು ಹಣದಲ್ಲಿ ಭಾರತೀಯ ಮೊಹಲ್ಲಾದಲ್ಲಿ ಬಿರಿಯಾನಿ ತಿನ್ನುತ್ತಾರೆ.

48

ದುಬೈನಲ್ಲಿ ಈ ಬಿರಿಯಾನಿ ಸಿಗುತ್ತದೆ. ಇಲ್ಲಿ ಬಿರಿಯಾನಿಯನ್ನು ಬೇರೆ ಬೇರೆ ರೀತಿಯಲ್ಲಿ ತಯಾರಿಸಲಾಗುತ್ತದೆ. ಜನರು ಮನೆಗಳಲ್ಲಿ ಮತ್ತು ಹೊರಗಿನ ರೆಸ್ಟೋರೆಂಟ್‌ನಲ್ಲಿ ಬಿರಿಯಾನಿ ಮಾಡಲು ಇಷ್ಟಪಡುತ್ತಾರೆ. ಅನೇಕ ರೆಸ್ಟೋರೆಂಟ್‌ಗಳು ತಮ್ಮ ಬಿರಿಯಾನಿಯ ರುಚಿಯಿಂದಾಗಿಯೇ ಪ್ರಸಿದ್ಧವಾಗಿವೆ.

58

ಅಂತಹ ಒಂದು ರೆಸ್ಟೋರೆಂಟ್ ಬಾಂಬೆ ಬ್ರೋಟ್ ರೆಸ್ಟೋರೆಂಟ್. ಇಲ್ಲಿದೆ ವಿಶ್ವದ ಅತ್ಯಂತ ದುಬಾರಿ ಬಿರಿಯಾನಿ.  ಒಂದು ತಟ್ಟೆಯ ಬೆಲೆ 20 ಸಾವಿರ ರೂಪಾಯಿ. ಈ ಬಿರಿಯಾನಿಯಲ್ಲಿ ಏನೆಲ್ಲಾ ವಿಶೇಷತೆ ಇದೆ ಎಂದು ತಿಳಿದರೆ ಆಶ್ಚರ್ಯಪಡಬಹುದು.

68

ವಾಸ್ತವವಾಗಿ ಈ ಬಿರಿಯಾನಿಯಲ್ಲಿ ಚಿನ್ನ ಬಡಿಸಲಾಗುತ್ತದೆ. ಶಾಕ್ ಆಗ್ಬೇಡಿ, ಆದರೆ ಇದು ನಿಜಾ, ಇತ್ತೀಚೆಗೆ ಗೋಲ್ಡ್ ರಾಯಲ್ ಬಿರಿಯಾನಿಯನ್ನು ಲಾಂಚ್ ಮಾಡಲಾಗಿದೆ. ಈ ಬಿರಿಯಾನಿಯನ್ನು 23 ಕ್ಯಾರೆಟ್ ಚಿನ್ನದಿಂದ ಅಲಂಕರಿಸಲಾಗುತ್ತದೆ.

78

ಒಂದು ತಟ್ಟೆಯಲ್ಲಿ 5 ಜನ ಬಿರಿಯಾನಿ ತಿನ್ನಬಹುದು. ಲಾಂಚ್ ಆದಾಗಿನಿಂದ ಈ ಬಿರಿಯಾನಿಯ ರುಚಿಯ ಬಗ್ಗೆಯೇ ಚರ್ಚೆ ಆಗುತ್ತಿದೆ. ಅದನ್ನು ತಿನ್ನಲೆಂದು ರೆಸ್ಟೋರೆಂಟ್‌ನಲ್ಲಿ ಜನಜಂಗುಳಿ ಇರುತ್ತದೆ. ಈಗ ಅದರ ಬೆಲೆಯಿಂದಾಗಿ ಬಿರಿಯಾನಿ ಪ್ರಿಯರ ಬಾಯಲ್ಲಿ ಇದೇ ಸುದ್ದಿ.

88

ರೆಸ್ಟೋರೆಂಟ್‌ನಲ್ಲಿ ಬಿರಿಯಾನಿ ಜೊತೆಗೆ ಗ್ರಾಹಕರಿಗೆ ವಿವಿಧ ರೀತಿಯ ಮುಘಲೈ ಆಹಾರ ಪದಾರ್ಥಗಳನ್ನೂ ಬಡಿಸಲಾಗುತ್ತದೆ. ಅದರಲ್ಲೂ ಮೆನುವಿನಲ್ಲಿ ಭಾರತೀಯ ಆಹಾರಗಳಾದ ದೆಹಲಿ ಮಟನ್ ಚಾಪ್ , ರಜಪೂತ ಚಿಕನ್ ಕಬಾಬ್,  ಮುಘಲೈ ಕೋಫ್ತಾಗಳು ಇವೆ. 

click me!

Recommended Stories