ಕಾಫಿಗೆ ಬೆಣ್ಣೆ ಎಂಬುದನ್ನು ಕೇಳಿ ನಿಮಗೆ ಶಾಕ್ ಆಗಬಹುದು. ಹೀಗೂ ಮಾಡಬಹುದೇ ಎಂದು ಅನಿಸಬಹುದು. ಆದರೆ ಇದರಿಂದ ಹಲಪ್ರಯೋಜನಗಳಿವೆ.ಕಾಫಿ ಜೊತೆ ಬೆಣ್ಣೆ ಬೆರೆಸಿ ಸೇವಿಸಿದರೆಅದು ರುಚಿಕರವಾಗಿರೋದಿಲ್ಲ. ಆದರೆಲಾಭ ಹೆಚ್ಚು.
ಹೊಸ ಪದ್ದತಿ ಅಲ್ಲ:ಹಿಮಾಲಯದ ಷರ್ಪಾಗಳು ಮತ್ತು ಇಥಿಯೋಪಿಯಾದ ಗುರೇಜ್ ಸೇರಿಅನೇಕ ಸಂಸ್ಕೃತಿಗಳು ಮತ್ತು ಸಮುದಾಯಗಳು ಶತಮಾನಗಳಿಂದ ಬೆಣ್ಣೆ ಕಾಫಿ ಮತ್ತು ಬೆಣ್ಣೆ ಚಹಾವನ್ನು ಕುಡಿಯುತ್ತಿವೆ. ಎತ್ತರದ ಪ್ರದೇಶಗಳಲ್ಲಿ ವಾಸಿಸುವ ಕೆಲವು ಜನರು ಹೆಚ್ಚು ಅಗತ್ಯವಿರುವ ಶಕ್ತಿಗಾಗಿ ತಮ್ಮ ಕಾಫಿ ಅಥವಾ ಚಹಾಕ್ಕೆ ಬೆಣ್ಣೆಸೇರಿಸುತ್ತಾರೆ,
ಎತ್ತರದ ಪ್ರದೇಶಗಳಲ್ಲಿ ವಾಸಿಸುವುದು ಮತ್ತು ಕೆಲಸ ಮಾಡುವುದು ಅವರ ಕ್ಯಾಲೊರಿ ಅಗತ್ಯಗಳನ್ನು ಹೆಚ್ಚಿಸುತ್ತದೆ . ಆದುದರಿಂದ ಅಲ್ಲಿನ ಜನ ಹೆಚ್ಚಾಗಿ ಕಾಫಿ ಜೊತೆ ಬೆಣ್ಣೆ ಬೆರೆಸಿ ಸೇವಿಸುತ್ತಾರೆ. ಇದಲ್ಲದೆ, ನೇಪಾಳ ಮತ್ತು ಭಾರತದ ಹಿಮಾಲಯ ಪ್ರದೇಶಗಳು ಮತ್ತು ಚೀನಾದ ಕೆಲವು ಪ್ರದೇಶಗಳ ಜನರು ಸಾಮಾನ್ಯವಾಗಿ ಯಾಕ್ ಬೆಣ್ಣೆಯಿಂದ ಮಾಡಿದ ಚಹಾಕುಡಿಯುತ್ತಾರೆ. ಟಿಬೆಟ್‌ನಲ್ಲಿ, ಬೆಣ್ಣೆ ಚಹಾ ಅಥವಾ ಕಾ, ಪ್ರತಿದಿನ ಸೇವಿಸುವ ಸಾಂಪ್ರದಾಯಿಕ ಪಾನೀಯ.
ಒಂದು 8-ಔನ್ಸ್ (237-ಮಿಲೀ) ಕಪ್ ಕಾಫಿಯೊಂದಿಗೆ 2 ಟೇಬಲ್ ಚಮಚ ತೆಂಗಿನ ಎಣ್ಣೆ ಮತ್ತು ಉಪ್ಪು ರಹಿತ ಬೆಣ್ಣೆ ಎರಡೂ ಸೇರಿಸಿದಾಗ ಅದರಿಂದ ದೇಹಕ್ಕೆ ಏನೆಲ್ಲಾ ಸಿಗುತ್ತದೆ?ಕ್ಯಾಲೊರಿಗಳು: 445ಕಾರ್ಬ್ಸ್: 0 ಗ್ರಾಂಒಟ್ಟು ಕೊಬ್ಬು: 50 ಗ್ರಾಂಪ್ರೋಟೀನ್: 0 ಗ್ರಾಂಫೈಬರ್: 0 ಗ್ರಾಂಸೋಡಿಯಂ: 9% ದೈನಂದಿನ ಸೇವನೆ (ಆರ್ ಡಿಐ)ವಿಟಮಿನ್ ಎ: ಆರ್ ಡಿಐನ 20%
ಪ್ರಪಂಚದ ಹಲವಾರು ದೇಶಗಳಲ್ಲಿ ತಿನ್ನುವ ಆಹಾರಕ್ಕೆ ಸಂಬಂಧಿಸಿದಂತೆ ರುಚಿ ಹೆಚ್ಚಿಸಲು ಹಲವಾರು ಪ್ರಯೋಗಗಳನ್ನು ಮಾಡಲಾಗುತ್ತದೆ. ಇದರಲ್ಲಿ ಕಾಫಿ ಕೂಡ ಸೇರಿದೆ. ಕಾಫಿಗೆ ಬೆಣ್ಣೆ ಬೆರೆಸಿ ಸೇವನೆ ಮಾಡೋದು ಕಷ್ಟವಾದರೂ ಇದು ಆರೋಗ್ಯಕ್ಕೆ ಇಷ್ಟವಾಗುತ್ತದೆ. ಏನೇನು ಲಾಭ ಇದೆ ನೋಡೋಣ...
ಕಾಫಿಯಲ್ಲಿ ಬೆಣ್ಣೆ ಬೆರೆಸಿ ಅದರಲ್ಲೂ ದನದ ಶುದ್ಧ ಹಾಲಿನಿಂದ ತಯಾರು ಮಾಡಿದ ಬೆಣ್ಣೆ ಮಿಕ್ಸ್ ಮಾಡಿ ಸೇವಿಸಿದರೆ ಬೊಜ್ಜು ಕರಗುತ್ತದೆ. ಇದು ದೇಹಕ್ಕೆ ಅನಗತ್ಯವಾದ ಕೊಬ್ಬನ್ನು ನಿವಾರಿಸುತ್ತದೆ.
ಇದರಲ್ಲಿ ಒಮೇಗಾ 3 ಮತ್ತು ಒಮೇಗಾ 6 ಜೊತೆ ಜೊತೆಗೆ ವಿಟಾಮಿನ್ ಕೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಜೊತೆಗೆ ಹಾರ್ಟ್ ಅಟ್ಯಾಕ್ ಸಮಸ್ಯೆಯನ್ನು ದೂರ ಮಾಡುತ್ತದೆ.
ಬೆಳಗ್ಗೆ ಕಾಫಿ ಜೊತೆ ಬೆಣ್ಣೆ ಬೆರೆಸಿ ಸೇವಿಸಿದರೆ ತೂಕ ಕಡಿಮೆಯಾಗುತ್ತದೆ. ಇದು ದಿನ ಪೂರ್ತಿ ಬೊಜ್ಜು ಕರಗಿಸುತ್ತದೆ. ಜೊತೆಗೆ ಇದರಿಂದ ದಿನವಿಡೀ ದೇಹಕ್ಕೆ ಬೇಕಾದ ಶಕ್ತಿಯೂ ಸಿಗುತ್ತದೆ.ಅಲ್ಲದೆ ಚಳಿಗಾಲದಲ್ಲಿ ದೇಹಕ್ಕೆ ಹೆಚ್ಚು ಶೀತವಾಗದಂತೆ ಕಾಪಾಡುತ್ತದೆ.
ಇದು ಮೆದುಳಿಗೂ ಉತ್ತಮ ಪಾನೀಯ. ಕಾಫಿ ಸೇವನೆ ಮೆದುಳನ್ನು ಚುರುಕಾಗಿಸುತ್ತದೆ. ಜೊತೆಗೆ ಚೆನ್ನಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.
ಬೆಣ್ಣೆ ಕಾಫಿಯು ರಕ್ತದಲ್ಲಿನ ಸಕ್ಕರೆ ತುಂಬಾ ಕಡಿಮೆ ಮಾಡದೆ ಸ್ಥಿರವಾದ, ದೀರ್ಘಕಾಲೀನ ಶಕ್ತಿಯನ್ನು ಒದಗಿಸುತ್ತದೆ ಎಂದು ನಂಬಲಾಗಿದೆ. ಇದರಲ್ಲಿರುವ ಕೊಬ್ಬು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಕಾಫಿಯಲ್ಲಿರುವ ಕೆಫೀನ್ ನಿಧಾನವಾಗಿ ಹೀರಿಕೊಳ್ಳುತ್ತದೆ ಮತ್ತು ದೀರ್ಘಕಾಲದ ಶಕ್ತಿಯನ್ನು ಒದಗಿಸುತ್ತದೆ.