ಕ್ರಿಸ್ಮಸ್ ಸೀಸನ್ ಸನಿಹವಾಗಿದೆ. ಈ ಟೈಂನಲ್ಲಿ ರೋಸ್ಟೆಡ್ ಗೂಸ್, ಜಿಂಜರ್ ಬ್ರೆಡ್, ಎಗ್ನೋಗ್, ಸಾಫ್ಟ್ ಫ್ರುಟ್ ಕೇಕ್, ಬಣ್ಣ ಬಣ್ಣದ ಕ್ಯಾಂಡಿ ತಿನ್ನಬೇಕನಿಸುತ್ತಿದೆಯಾ..?
ಕ್ರಿಸ್ಮಸ್ ಸಂಪ್ರದಾಯಿಕ ತಿನಿಸುಗಳ ಹಿಂದಿನ ಕಥೆ ನಿಮಗೆ ಗೊತ್ತಾ..? ಪ್ರತಿ ಆಹಾರದ ಹಿಂದೆ ಕಥೆಗಳೇ ಇವೆ. ಬನ್ನಿ ತಿಳ್ಕೊಳೋಣ
ಜಿಂಜರ್ ಬ್ರೆಡ್: ಜಿಂಜರ್ ಬ್ರೆಡ್ ಕುಕೀಸ್ ಮಾಡುವುದು ಮತ್ತು ಜಿಂಜರ್ ಬ್ರೆಸ್ ಹೌಸ್ ಮಾಡುವುದು ಕ್ರಿಸ್ಮಸ್ ಆಚರಣೆಯ ಭಾಗವೇ ಆಗಿದೆ. ಈ ಆಚರಣೆ ಪ್ರಸಿದ್ಧ ಮಾಡಿದ್ದು ಮೊದಲನೇ ಕ್ವೀನ್ ಎಲಿಝಬೆತ್ ಎಂಬುದು ನಿಮಗೆ ಗೊತ್ತಾ..?
ಡಿಗ್ನಿಫೈಡ್ ಗೆಸ್ಟ್‌ಗಳಿಗಾಗಿ ಜಿಂಜರ್ ಬ್ರೆಡ್ ಮಾಡಿಕೊಡಲಾಗುತ್ತಿತ್ತು. ರಾಣಿ ಅತಿಥಿಗಳ ನೆಚ್ಚಿನ ರೀತಿಯಲ್ಲಿ ಜಿಂಜರ್ ಬ್ರೆಡ್ ನೀಡುತ್ತಿದ್ದರಂತೆ. ಗ್ರಿಮ್ ಸಹೋದರರು ಬರೆದ ಕಥೆಯಲ್ಲಿ ಬರುವ ದುಷ್ಟ ಜಿಂಜರ್‌ಬ್ರೆಡ್ ಮನೆಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.
ಕ್ಯಾಂಡಿ ಕೇನ್ಸ್: ಸ್ವೀಟ್ ಪೆಪ್ಪರ್‌ಮಿಂಟ್‌ನ ಕ್ಯಾಂಡಿ ಕೇನ್ ಇಲ್ಲದೆ ಕ್ರಿಸ್ಮಸ್ ಅಪೂರ್ಣ. ಕ್ಯಾಂಡಿ ಕೇನ್ ಜೆ ಶೇಪ್‌ನಲ್ಲಿ ಮಾಡಲಾಗುತ್ತದೆ ಎನ್ನುತ್ತಾರೆ. ಇದು ಜೀಸಸ್‌ನ ಮೊದಲ ಅಕ್ಷರ.
ಕ್ಯಾಂಡಿಯ ಬಿಳಿ ಬಣ್ಣ ಜೀಸಸ್‌ನ ಪರಿಶುದ್ಧದತೆಯನ್ನು ಬಿಂಬಿಸುತ್ತದೆ ಎನ್ನಲಾಗುತ್ತದೆ. ಕ್ಯಾಂಡಿಯನ್ನು ಜರ್ಮನಿಯ ಚರ್ಚ್‌ನಲ್ಲಿ ಮೊದಲು ಮಾಡಲಾಗಿತ್ತು ಎನ್ನಲಾಗಿದೆ. ಅಲ್ಲಿದ್ದ ಮಾಸ್ಟರ್ ಒಬ್ಬರು ಕ್ಯಾಂಡಿ ಸ್ಟಿಕ್ ಬೆಂಡ್ ಮಾಡಿ ಮಕ್ಕಳು ಕ್ರಿಸ್ಮಸ್ ಆಚರಣೆ ಸಂದರ್ಭ ಗಲಾಟೆ ಮಾಡದೆ ನಿಲ್ಲಲು ನೀಡಲಾಗುತ್ತಿತ್ತು ಎನ್ನಲಾಗುತ್ತದೆ.
ಎಗ್ನೋಗ್: ಮೊಟ್ಟೆ, ಸಕ್ಕರೆ, ಮದ್ಯ ಸೇರಿಸಿ ಮಾಡುವ ಈ ಪೇಯ ವಾವ್ ಎಂಬಂತಿರುತ್ತದೆ. ಇದು ಕ್ರಿಸ್ಮಸ್‌ನ ವಿಶೇಷ ಡ್ರಿಂಕ್. ಹಿಂದೆ ಎಗ್ನೋಗ್ ಶ್ರೀಮಂತರ ಆಹಾರ ಎನ್ನಲಾಗುತ್ತಿತ್ತು. ಆ ಸಂದರ್ಭ ಮೊಟ್ಟೆ ಮತ್ತು ಹಾಲು ದುಬಾರಿಯಾಗಿತ್ತು.
ಈ ಡ್ರಿಂಕ್ ಬ್ರಿಟಿಷರ ಪೊಸೆಟ್ ಎಂಬ ಡ್ರಿಂಕ್ಸ್‌ನಿಂದ ಹುಟ್ಟಿತು. ಇದರಲ್ಲಿ ಬಿಸಿ ಹಾಲು, ಸ್ಪೈಸಸ್, ವೈನ್ ಕೂಡಾ ಬೆರೆಸಲಾಗುತ್ತಿತ್ತು. 18ನೇ ಶತಮಾನದಲ್ಲಿ ಎಗ್ನೋಗ್ ಅಮೆರಿಕದಲ್ಲಿಯೂ ಪ್ರಸಿದ್ಧವಾಯ್ತು, ಆಗಿನಿಂದ ಕ್ರಿಸ್ಮಸ್‌ನಲ್ಲಿ ಎಗ್ನೋಗ್ ಮಿಸ್ ಆಗಲ್ಲ.
ಫ್ರುಟ್ ಕೇಕ್: ಒಣಗಿದ ಹಣ್ಣು ಮತ್ತು ಸಕ್ಕರೆ ಹಿಂದಿನ ಕಾಲದಲ್ಲಿ ದುಬಾರಿ ಆಮದು ಪದಾರ್ಥಗಳಾಗಿದ್ದವು. ಅವುಗಳನ್ನು ಅಧಿಕವಾಗಿ ಬಳಸಿ ಮಾಡುವ ಆಹಾರವನ್ನು ವಿಶೇಷ ಸಂದರ್ಭಗಳಾದ ವಿವಾಹ, ಕ್ರಿಸ್ಮಸ್‌ನಲ್ಲಿ ಮಾತ್ರ ಬಳಸಲಾಗುತ್ತಿತ್ತು.
ಸಾಂಪ್ರದಾಯಿಕ ಫ್ರಟ್ ಕೇಕ್‌ನ್ನು ಮದ್ಯದಲ್ಲಿ ನೆನಸಲಾಗುತ್ತದೆ. ಇದು ಮದ್ಯಕ್ಕೆ ವೀಶೇಷ ರುಚಿ ನೀಡುವುದರ ಜೊತೆ ಕೆಡದಂತೆ ಕಾಪಾಡುತ್ತದೆ. ಫ್ರುಟ್ ಕೇಕ್ ಕ್ರಿಸ್ಮಸ್ ಆಚರಣೆಯಲ್ಲಿ ಹೆಚ್ಚು ಮಹತ್ವಪೂರ್ಣ. ಇದನ್ನು ಉಡುಗೊರೆಯಾಗಿಯೂ ನೀಡಲಾಗುತ್ತದೆ.
ಕ್ರಿಸ್ಮಸ್ ಗೂಸ್: ಇದು ಕ್ರಿಸ್ಮಸ್ ಸೆಲೆಬ್ರೇಷನ್‌ನ ಪ್ರಮುಖ ಆಹಾರ. ಈ ಆಹಾರ ಹಬ್ಬದ ಜೊತೆ ಸೇರಿಕೊಂಡಿರುವುದರ ಹಿಂದೆ ಕುತೂಹಲಕಾರಿಯಾದ ಕಥೆ ಇದೆ.
ಹಿಂದಿನ ಕಾಲದಲ್ಲಿ ನಾನ್‌ವೆಜ್ ಸೇವಿಸುವಾಗ ಪ್ರಾಣಿಯನ್ನು ಆಯ್ಕೆ ಮಾಡುವಾಗ ಹೆಚ್ಚು ಕೇರ್‌ಫುಲ್ ಆಗಿರಬೇಕಿತ್ತು. ಹಸು ಹಾಲು ನೀಡಿದರೆ, ಕೋಳಿ ಮೊಟ್ಟೆ ಕೊಡುತ್ತಿತ್ತು. ಹೀಗಾಗಿ ಸೀಸನಲ್ ಆಗಿ ಮಾತ್ರ ಮೊಟ್ಟೆ ಇಡುವ ಬಾತುಕೋಳಿಗಳನ್ನು ಕ್ರಿಸ್ಮಸ್ ಸಂದರ್ಭ ಅಡುಗೆ ಮಾಡಲಾಗುತ್ತಿತ್ತು. ನಂತರ ಅದುವೇ ಅಭ್ಯಾಸ ಮುಂದುವರಿಯಿತು.