ಹಾಲು ಕುಡಿದ ನಂತರ ನೀರು ಕುಡಿಯುವುದು ಸರಿಯೋ? ತಪ್ಪೋ?

First Published Dec 23, 2020, 5:17 PM IST

ಬಾಲ್ಯದಿಂದಲೂ ಮಕ್ಕಳು ಹಾಲನ್ನು ಕುಡಿದು ಕೊಂಡೇ ಬೆಳೆಯುತ್ತಾರೆ. ಹಾಲಿನಲ್ಲಿ ಕ್ಯಾಲ್ಸಿಯಂ ಇರುವುದರಿಂದ ಇದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂಬುದನ್ನು ಮಕ್ಕಳಿಗೆ ತಿಳಿಸುತ್ತಳೇ ಅವರನ್ನು ಬೆಳೆಸಲಾಗುತ್ತದೆ. ಆರೋಗ್ಯಕ್ಕೆ ಹಾಲು ತುಂಬಾ ಮುಖ್ಯ. ಇದು ಪ್ರತಿ ತಾಯಿಯ ಮೊದಲ ಆಯ್ಕೆಯಾಗಿದ್ದು, ಅದರ ಪೌಷ್ಟಿಕಾಂಶದ ಗುಣಗಳಿಂದಾಗಿ ಎಲ್ಲಾ ಮಕ್ಕಳಿಗೆ ಹಾಲು ನೀಡಲಾಗುತ್ತದೆ. ಕೇವಲ ಮಕ್ಕಳಿಗೆ ಮಾತ್ರವಲ್ಲ, ವಯಸ್ಸಾದವರಿಗೂ ಹಾಲು ತುಂಬಾ ಪ್ರಯೋಜನಕಾರಿ. 

ಹಾಲನ್ನು ನಾವೆಲ್ಲರೂ ಕುಡಿಯುತ್ತೇವೆ ನಿಜ. ಆದರೆ ಹಾಲು ಕುಡಿಯುವ ಸರಿಯಾದ ವಿಧಾನ ಅನೇಕರಿಗೆ ತಿಳಿದಿಲ್ಲ. ಇದರಿಂದ ಹಾಲು ಕುಡಿಯುವುದು ಕೂಡ ಹಾನಿ ಉಂಟು ಮಾಡುತ್ತದೆ. ಇಂದು ನಾವು ನಿಮಗೆ ಹಾಲು ಕುಡಿಯುವ ಸರಿಯಾದ ವಿಧಾನವನ್ನು ತಿಳಿಸಲಿದ್ದೇವೆ. ಹಾಲಿನ ಎಲ್ಲಾ ಪೌಷ್ಟಿಕಾಂಶದ ಗುಣಗಳ ಜೊತೆಗೆ ನೀವು ಕೆಲವೊಂದು ಅಂಶಗಳನ್ನು ಗಮನಿಸಬೇಕು. ಇಲ್ಲದಿದ್ದರೆ, ಹಾಲು ಲಾಭದ ಬದಲು ಹಾನಿಮಾಡುತ್ತದೆ.
undefined
ಹಾಲು ಕುಡಿದ ನಂತರ ನೀರು ಕುಡಿಯಬಾರದು ಎಂದು ಹಿರಿಯರು ಹೇಳುವುದನ್ನು ನೀವು ಅನೇಕ ಬಾರಿ ಕೇಳಿರಬಹುದು. ಇದರ ಜೊತೆಗೆ ಹಾಲನ್ನು ಕುಡಿದ ನಂತರ ಸಿಟ್ರಸ್ ಹಣ್ಣುಗಳನ್ನು ಸೇವಿಸಬೇಡಿ ಎನ್ನುವುದನ್ನು ಕೇಳಿರಬಹುದು. ಇದಕ್ಕೆ ಒಂದು ವಿಶೇಷ ಕಾರಣವಿದೆ.
undefined
ಹಾಲು ಕುಡಿದ ತಕ್ಷಣ ನೀರು ಕುಡಿದರೆ ಹೊಟ್ಟೆಯನ್ನು ಕೆಡಿಸುತ್ತದೆ. ಅದೇ ಸಮಯದಲ್ಲಿ, ಹಾಲನ್ನು ಕುಡಿದ ತಕ್ಷಣ ನೀರು ಕುಡಿದರೆ, ಹಾಲಿನ ಪೌಷ್ಟಿಕಾಂಶದ ಗುಣಗಳು ದೇಹಕ್ಕೆ ಸೇರುವುದಿಲ್ಲ.
undefined
ಹಾಲು ಕುಡಿದ ತಕ್ಷಣ ನೀರು ಕುಡಿದರೆ ದೇಹದ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ಅಂದರೆ ನೀರು ಕುಡಿದರೆ ಹಾಲು ಬೇಗ ಕರಗುವುದಿಲ್ಲ. ಇದರಿಂದ ನಿಮಗೆ ಅಸಿಡಿಟಿ ಬರುತ್ತದೆ.
undefined
ಇನ್ನು ಮೀನು ತಿಂದ ಕೂಡಲೇ ಹಾಲು ಸೇವಿಸಬಾರದು ಎಂದು ಹೇಳಲಾಗುತ್ತದೆ. ಇದರಿಂದ ದೇಹದಲ್ಲಿ ಕೆಮಿಕಲ್ ಬದಲಾವಣೆಯಾಗುತ್ತದೆ. ಆದುದರಿಂದ ಅದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ.
undefined
ಯಾವತ್ತೂ ಔಷಧೀಯ ವಸ್ತುಗಳನ್ನು, ಟ್ಯಾಬ್ಲೆಟ್‌ಗಳನ್ನು ಹಾಲಿನ ಜೊತೆ ಸೇವಿಸಬೇಡಿ. ಇದರಿಂದ ಔಷಧಗಳು ವಿರುದ್ಧವಾಗಿ ರಿಯಾಕ್ಟ್ ಆಗಬಹುದು. ಆದುದರಿಂದ ಸಾಧ್ಯವಾದಷ್ಟು ಮಾತ್ರಗಳನ್ನು ನೀರಿನ ಜೊತೆಯೇ ಸೇವಿಸಿ.
undefined
ಹಾಲು ನಮಗೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಹಾಲು ಕುಡಿಯುವುದರಿಂದ ಹಲವಾರು ಆರೋಗ್ಯ ಲಾಭಗಳಿವೆ.
undefined
ಊಟ ಮಾಡಿದ ತಕ್ಷಣ ಹಾಲು ಕುಡಿಯಬೇಡಿ. ಇದರಿಂದ ಆಹಾರ ವಿಷ, ಗ್ಯಾಸ್, ಅಜೀರ್ಣ, ವಾಂತಿ, ಹೊಟ್ಟೆ ನೋವು, ಸಡಿಲವಾದ ಚಲನೆಯಂತಹ ಸಮಸ್ಯೆಗಳು ಉಂಟಾಗಬಹುದು. ಇದಕ್ಕೆ ಕಾರಣ ಆಹಾರದಲ್ಲಿ ಉಪ್ಪು ಮತ್ತು ಎಣ್ಣೆಯ ಅಂಶ ಇರುತ್ತದೆ. ಇವೆರಡು ಹಾಲಿಗೆ ವಿರುದ್ಧವಾಗಿರುತ್ತದೆ.
undefined
ಹಾಲು ಕುಡಿಯುವಾಗ ಇನ್ನೊಂದು ಪ್ರಮುಖ ಅಂಶ ನೆನಪಿನಲ್ಲಿಟ್ಟುಕೊಳ್ಳ ಬೇಕು ಎಂದರೆ ಹಾಲು ಯಾವಾಗಲೂ ಎದ್ದು ನಿಂತು ಕುಡಿಯಬೇಕು. ನೀರು ಯಾವಾಗಲೂ ಕುಳಿತು ಕುಡಿಯುವುದು ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳುವುದು ಕೂಡ ಮುಖ್ಯ.
undefined
ಹಾಲು ಕುಡಿಯುವ ವಿಧಾನಗಳು ಆಯುರ್ವೇದದಲ್ಲಿ ಉಲ್ಲೇಖವಾಗಿವೆ. ಹಾಲು ಕುಡಿಯುವಾಗ ಬರುವ ದೊಡ್ಡ ಸಮಸ್ಯೆ ಎಂದರೆ ಗ್ಯಾಸ್. ಆದರೆ ಮೇಲಿನ ವಿಧಾನಗಳನ್ನು ಅನುಸರಿಸಿದರೆ ಹಾಲನ್ನು ಸುಲಭವಾಗಿ ಜೀರ್ಣವಾಗುವುದು.
undefined
click me!