ಪ್ರಪಂಚದಾದ್ಯಂತದ ಪಾಕಪದ್ಧತಿಗಳು ಮತ್ತು ಭಕ್ಷ್ಯಗಳನ್ನು ರೇಟಿಂಗ್ ಮಾಡಲು ಹೆಸರುವಾಸಿಯಾದ ಟೇಸ್ಟ್ ಅಟ್ಲಾಸ್ (Taste Atlas) ಇತ್ತೀಚೆಗೆ ತನ್ನ "ಅತ್ಯುತ್ತಮ ರೇಟಿಂಗ್ ಭಾರತೀಯ ಭಕ್ಷ್ಯಗಳ" (Best rating Indian food) ಪಟ್ಟಿಯನ್ನು ಬಿಡುಗಡೆ ಮಾಡಿದೆ, ಮ್ಯಾಂಗೊ ಲಸ್ಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ಹೈದರಾಬಾದ್ ಬಿರಿಯಾನಿ (Hyderabad Biriyani) ಒಂದು ವರ್ಷದ ನಂತರ ಮತ್ತೆ ಈ ಲಿಸ್ಟ್ ಸೇರಿದ್ದು, 6 ನೇ ಸ್ಥಾನ ಗಳಿಸಿದೆ. ಈ ಲಿಸ್ಟ್ ನಲ್ಲಿ ಚಾಯ್ ಮಸಾಲಾ ಎರಡನೇ ಸ್ಥಾನದಲ್ಲಿದ್ದರೆ.
ಮಾವಿನಹಣ್ಣಿನ ಲಸ್ಸಿ (Mango Lassi) : ಬೇರೆ ಬೇರೆ ವಿಧದ ಲಸ್ಸಿಗಳನ್ನ ಜನ ಇಷ್ಟಪಡ್ತಾರೆ. ಆದರೆ ಎಲ್ಲದಕ್ಕಿಂತ ಹೆಚ್ಚು ಇಷ್ಟ ಪಡೋದು ಅಂದ್ರೆ ಮಾವಿನ ಹಣ್ಣಿನ ಲಸ್ಸಿ. ಇದು ಬೆಸ್ಟ್ ರೇಟೆಡ್ ಫುಡ್ ಲಿಸ್ಟಲ್ಲಿ ಮೊದಲ ಸ್ಥಾನ ಪಡೆದೆ.
ಚಾಯ್ ಮಸಾಲ (Masala Chai): ಮಸಾಲ ಚಾಯ್ ಭಾರತೀಯ ಆಲ್ ಟೈಮ್ ಫೇವರಿಟ್ ಅಂದ್ರೆ ತಪ್ಪಲ್ಲ. ಬೆಳಗ್ಗೆ ಎದ್ದು ಮಸಾಲ ಚಾಯ್ ಕುಡಿದ್ರೆ, ಆ ದಿನ ಪೂರ್ತಿ ಬೆಸ್ಟ್ ಆಗಿರುತ್ತೆ ಅನ್ನೋ ಜಾಯಮಾನದ ಜನರು ನಮ್ಮ ಭಾರತೀಯರು.
ಬಟರ್ ಗಾರ್ಲಿಕ್ ನಾನ್ (Butter Garlic Naan): ಬೆಸ್ಟ್ ರೇಟೆಡ್ ಫುಡ್ ಲಿಸ್ಟಲ್ಲಿ ಬಟರ್ ಗಾರ್ಲಿಕ್ ನಾನ್ ಮೂರನೇ ಸ್ಥಾನದಲ್ಲಿದೆ. ಮೈದಾದಿಂದ ಮಾಡಿದ ಈ ನಾನ್ ಖಂಡಿತಾ ಹೆಚ್ಚಿನ ಜನರ ಫೇವರಿಟ್ ಡಿಶ್ ಹೌದು.
ಅಮೃತ್’ಸರಿ ಚಿಕನ್ : ರಿಚ್ ಕ್ರೀಮ್ ಗ್ರೇವಿಯಿಂದ ಮಾಡಲಾಗಿರೋ ಉತ್ತರ ಭಾರತದ ಜನಪ್ರಿಯ ಡಿಶ್ ಅಮೃತ್’ಸರಿ ಚಿಕನ್. ಇದಕ್ಕೆ ಫ್ರೆಶ್ ಕ್ರೀಮ್, ಟೊಮ್ಯಾಟೋ ಪ್ಯೂರಿ ಹಾಕಿ ಮಾಡ್ತಾರೆ. ಇದು ತುಂಬಾನೆ ಟೇಸ್ಟಿಯಾಗಿರುತ್ತೆ.
ಬಟರ್ ಚಿಕನ್ (Butter Chicken): ಸಾಂಪ್ರದಾಯಿಕವಾಗಿ ಮುರ್ಗ್ ಮಖಾನಿ ಎಂದು ಕರೆಯಲ್ಪಡುವ ಬಟರ್ ಚಿಕನ್ ದೆಹಲಿಯಲ್ಲಿ ಹುಟ್ಟಿಕೊಂಡ ಭಾರತೀಯ ಖಾದ್ಯ. ಇದು ಮಸಾಲೆಯುಕ್ತ ಟೊಮೆಟೊ ಮತ್ತು ಬಟರ್ ಸಾಸ್ ಜೊತೆ ಚಿಕನ್ ಸೇರಿಸಿ ತಯಾರಿಸುವಂತಹ ಟೇಸ್ಟಿಯಾದ ಡಿಶ್ ಆಗಿದೆ.
ಹೈದರಾಬಾದಿ ಬಿರಿಯಾನಿ (Hyderabadi Biriyani): ಹೈದರಾಬಾದಿ ಬಿರಿಯಾನಿ ಭಾರತದ ಹೈದರಾಬಾದ್ ಮೂಲದ ಬಿರಿಯಾನಿಯ ಒಂದು ವಿಧ, ಇದನ್ನು ಬಾಸ್ಮತಿ ಅಕ್ಕಿ ಮತ್ತು ಮಾಂಸದಿಂದ ತಯಾರಿಸಲಾಗುತ್ತದೆ. ಹೈದರಾಬಾದಿನ ನಿಜಾಮನ ಕಿಚನ್ ನಲ್ಲಿ ತಯಾರಿಸಿದ ಹೈದರಾಬಾದ್ ಮತ್ತು ಮೊಘಲಾಯಿ ರೆಸಿಪಿ ಇದು.
ಶಾಹಿ ಪನೀರ್ : ಶಾಹಿ ಪನೀರ್ ಅಥವಾ ಪನೀರ್ ರಾಜ್ವಾಡಿ ಅಥವಾ ಛೇನಾ ರಾಜ್ವಾಡಿ ಅಥವಾ ರಾಜ್ಸಿ ಛೇನಾ ಎಂಬುದು ಟೇಸ್ಟಿಯಾದ ಭಾರತೀಯ ಖಾದ್ಯ, ಇದು ಕ್ರೀಂ, ಟೊಮೆಟೊ ಮತ್ತು ಭಾರತೀಯ ಮಸಾಲೆಗಳ ದಪ್ಪ ಗ್ರೇವಿಯಿಂದ ತಯಾರಿಸಲಾಗುವ ಡಿಶ್.
ಚೋಲೆ ಭತುರೆ : ಚೋಲೆ ಭತುರೆ ಉತ್ತರ ಪ್ರದೇಶದ ಜನಪ್ರಿಯ ಆಹಾರ ಖಾದ್ಯ. ಇದು ಚನಾ ಮಸಾಲಾ ಮತ್ತು ಭತುರಾ / ಪುರಿ, ಮೈದಾದಿಂದ ತಯಾರಿಸಿದ ಡೀಪ್ ಫ್ರೈಡ್ ಪುರಿ. ಇದನ್ನ ಬ್ರೇಕ್ ಫಾಸ್ಟ್‌ಗೆ ಹೆಚ್ಚಾಗಿ ಸೇವಿಸ್ತಾರೆ. ಇದು ಬೆಸ್ಟ್ ಫುಡ್ ಲಿಸ್ಟಲ್ಲಿ 8ನೇ ಸ್ಥಾನ ಪಡೆದಿದೆ.
ತಂದೂರಿ ಚಿಕನ್ (Tandoori Chicken): ತಂದೂರಿ ಚಿಕನ್ ಎಂಬುದು ಮೊಸರು ಮತ್ತು ಮಸಾಲೆಗಳಲ್ಲಿ ಮ್ಯಾರಿನೇಟ್ ಮಾಡಿ, ತಂದೂರ್‌ನಲ್ಲಿ ತಯಾರಿಸಿದಂತಹ ಚಿಕನ್ ಇದು. ತುಂಬಾ ರುಚಿಯಾದ ಡಿಶ್ ಇದು.
ಕುರ್ಮಾ (Kurma): ಇದು ವೆಜ್ ಮತ್ತು ನಾನ್ ವೆಜ್ ಎರಡರಲ್ಲೂ ತಯಾರಿಸುವಂತಹ ತಿನಿಸು. ಇದನ್ನ ಹೆಚ್ಚಾಗಿ ಗೀ ರೈಸ್, ಚಪಾತಿ ಜೊತೆ ತಿಂತಾರೆ. ಇದು ಬೆಸ್ಟ್ ಡಿಶ್ ಲಿಸ್ಟಲ್ಲಿ 10 ಸ್ಥಾನ ಪಡೆದಿದೆ.