ಚಪಾತಿ ಸ್ಮೂತ್ ಆಗಬೇಕಾ? Scratch meaning ಆಗದಂತೆ ಹೊಸ ಪಾತ್ರೆಯ ಸ್ಟಿಕ್ಕರ್ ತೆಗೀಬೇಕಾ?

First Published | May 26, 2021, 3:13 PM IST

ಮಹಿಳೆಯರು ಹೆಚ್ಚಾಗಿ ತಮ್ಮ ಸಮಯವನ್ನು ಕಿಚನ್ ನಲ್ಲೇ ಕಳೆಯುತ್ತಾರೆ. ಏನು ತಿಂಡಿ ಮಾಡೋದು, ಸಾಂಬಾರ್ ಏನು ಮಾಡೋದು? ಅಡುಗೆಯ ರುಚಿ ಹೆಚ್ಚಿಸೋದು ಹೇಗೇ? ಉಪ್ಪು, ಖಾರ ಜಾಸ್ತಿ ಆದ್ರೆ ಏನು ಮಾಡೋದು? ಹೀಗೆ ಕಿಚನ್ಗೆ ಕಾಲಿಟ್ಟರೆ ಅವರ ತಲೆಯಲ್ಲಿ ನೂರಾರು ಆಲೋಚನೆಗಳು ಮೂಡುತ್ತವೆ. ಈ ಆಲೋಚನೆಗಳಿಗೆ ಸಣ್ಣ ಬ್ರೇಕ್ ನೀಡಿ, ಈ ಕಿಚನ್ ಟಿಪ್ಸ್ ಕಡೆಗೆ ಗಮನ ಹರಿಸಿ, ಇವು ರುಚಿಯಾದ ಅಡುಗೆ ಮಾಡುವುದರ ಜೊತೆಗೆ, ಕಿಚನ್ನ ಕೆಲವು ಸಮಸ್ಯೆ ನಿವಾರಿಸುತ್ತೆ.

ಸ್ಟೀಲ್ ಪಾತ್ರೆಯಿಂದ ಸ್ಟಿಕ್ಕರ್ ತೆಗೆಯಲು: ಹೊಸದಾಗಿ ತಂಡ ಸಾಮಾನುಗಳಲ್ಲಿ ಸ್ಟಿಕ್ಕರ್ ಅಂಟಿಸಿರುತ್ತಾರೆ. ಅದನ್ನು ತೆಗೆಯುವುದು ಕಷ್ಟ. ಇಂತಹ ಸಂದರ್ಭದಲ್ಲಿ ಸ್ಟೀಲ್ ಪಾತ್ರೆಯನ್ನು ಸ್ಟವ್ ಮೇಲೆ 30-40 ಸೆಕೆಂಡುಗಳ ಕಾಲ ಬಿಸಿ ಮಾಡಿ. ಕೂಡಲೇ ಸ್ಟಿಕ್ಕರ್ ತೆಗೆಯಿರಿ. ಸುಲಭವಾಗಿ ಸ್ಟಿಕ್ಕರ್ ಪಾತ್ರೆಗಳಿಂದ ಎದ್ದು ಬರುತ್ತದೆ. ಹೆಚ್ಚು ಕಷ್ಟಪಡಬೇಕಾಗಿಲ್ಲ.
ಮೃದುವಾದ ಚಪಾತಿ : ಚಪಾತಿ ಮಾಡುವಾಗ ತುಂಬಾ ಸ್ಮೂತ್ ಆಗಿ ಬರಲು ಹಿಟ್ಟು ಮಾಡಿ ಅರ್ಧ ಗಂಟೆ ಇಡಬೇಕೆಂದೇನೂ ಇಲ್ಲ. ಅದರ ಬದಲಾಗಿ ಹಿಟ್ಟು ಕಲಿಸುವಾಗ ಅದಕ್ಕೆ ಬಿಸಿಯಾದ ಒಂದು ಕಪ್ ಹಾಲು ಸೇರಿಸಿ ಹಿಟ್ಟು ತಯಾರಿಸಿ. ಇದರಿಂದ ಕೂಡಲೇ ಚಪಾತಿತಯಾರಿಸಬಹುದು. ಚಪಾತಿ ತುಂಬಾಸ್ಮೂತ್ ಆಗಿ ಬರುತ್ತದೆ.
Tap to resize

ಬೆಂಡೆಕಾಯಿಯ ಗುಳ ತೆಗೆಯೋದು ಹೇಗೆ? : ಬೆಂಡೆಕಾಯಿ ಗುಳದ ಹಲವರು ಅದನ್ನು ತಿನ್ನಲು ಇಷ್ಟ ಪಡೋದಿಲ್ಲ. ಈ ಅಂಟನ್ನು ನಿವಾರಿಸಲುಬೆಂಡೆಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಮೊದಲಿಗೆ ಅವುಗಳನ್ನು ಎಣ್ಣೆಯಲ್ಲಿ 4-5 ನಿಮಿಷಗಳ ಕಾಲ ಲೋ ಫ್ಲೇಮ್‌ನಲ್ಲಿ ಹುರಿಯಿರಿ. ಇದರಿಂದ ಅಂಟು ನಿವಾರಣೆಯಾಗುತ್ತದೆ.
ಎಣ್ಣೆಯನ್ನು ಅವಾಯ್ಡ್ ಮಾಡಲು ಬಯಸಿದರೆ ಒಂದು ಪ್ಯಾನ್ ಸ್ಟವ್ ನಲ್ಲಿ ಇಡಿ. ಅದಕ್ಕೆ ನೀರು ಹಾಕಿ ಕುದಿಸಿ, ನಂತರ ಅದಕ್ಕೆ ಬೆಂಡೆಕಾಯಿ ಹಾಕಿ 5 ನಿಮಿಷ ಬಿಸಿ ಮಾಡಿ. ಹೀಗೆ ಮಾಡಿದರೆ ಬೆಂಡೆಕಾಯಿ ಅಂಟುವುದು ಕಡಿಮೆಯಾಗುತ್ತದೆ. ಐದು ನಿಮಿಷದ ಬಳಿಕ ಅದಕ್ಕೆ ನೀರುಳ್ಳಿ, ಟೊಮೇಟೊ ಹಾಕಿ, ಹಾಗೆ ನಿಮಗೆ ಬೇಕಾದ ಆಹಾರ ತಯಾರಿಕೊಳ್ಳಬಹುದು.
ಅಡುಗೆ ಮಾಡುವಾಗ ಟೊಮೇಟೊದಿಂದ ಸ್ಕಿನ್ ರಿಮೂವ್ ಮಾಡಲು, ಫೋರ್ಕ್ ಸಹಾಯದಿಂದ ಟೊಮ್ಯಾಟೊವನ್ನು ಬೆಂಕಿಗೆ 4-5 ನಿಮಿಷಗಳ ಕಾಲ ಹಿಡಿಯಿರಿ. ಅವಾಗ ಟೊಮ್ಯಾಟೊದ ಸ್ಕಿನ್ ಸುಲಭವಾಗಿ ತೆಗೆಯಬಹುದು.
ಆಹಾರಕ್ಕೆ ನ್ಯಾಚುರಲ್ ಕಲರ್ ನೀಡಲು ಕಷ್ಟಪಡಬೇಕಾಗಿಲ್ಲ,. ಯಾವುದೇ ಮಸಾಲಾ ತಯಾರಿಸುವಾಗ ಟೊಮೇಟೊ ಜೊತೆಗೆ ಒಂದು ಸಣ್ಣ ತುಂಡು ಬೀಟ್ ರೂಟ್ ಸೇರಿಸಿ ಮಿಕ್ಸಿ ಮಾಡಿ, ಇದನ್ನು ಅಡುಗೆಗೆ ಬಳಸಿದರೆ ಅಡುಗೆಯ ಬಣ್ಣ ಕೆಂಪಾಗಿ, ಸುಂದರವಾಗಿ ಕಾಣಿಸುತ್ತದೆ.
ದಪ್ಪ ಮೊಸರನ್ನು ಸಬ್ಜಿ ತಯಾರಿಸಲು ಬಳಸಲಾಗುತ್ತದೆ. ಮಸಲಾಗಳನ್ನು ತಯಾರಿಸುವಾಗ ಕ್ರೀಂ ಟೆಕ್ಚರ್ ಬರಲು ಇದನ್ನು ಬಳಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಮೊಸರನ್ನು ಹಾಗೆ ಹಾಕುವ ಬದಲು, ಮೊದಲು ಮೊಸರನ್ನು ಸರಿಯಾಗಿ ಬ್ಲೆಂಡ್ ಮಾಡಿ ನಂತರ ಅದಕ್ಕೆ ಗೋಧಿ ಅಥವಾ ಮೈದಾ ಹುಡಿ ಬೆರೆಸಿ ಮತ್ತೆ ಚೆನ್ನಾಗಿ ಬ್ಲೆಂಡ್ ಮಾಡಿ. ಇದನ್ನು ಮಸಾಲೆಯಲ್ಲಿ ಬಳಕೆ ಮಾಡಿದರೆ ಉತ್ತಮ ರುಚಿ ಜೊತೆಗೆ ಫ಼್ಲೇವರ್ ಬರುತ್ತದೆ.
ಯಾವುದೆ ಸಾರು ಅಥವಾ ಮಸಾಲೆ ತಯಾರಿಸುವಾಗ ತಿಳಿಯದೆ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು ಬೆರೆಸಿದರೆ, ಯೋಚಿಸಬೇಡಿ. ಒಂದು ಚಪಾತಿ ಹಿಟ್ಟನ್ನುನೆಲ್ಲಿಕಾಯಿ ಗಾತ್ರದ ಉಂಡೆ ಮಾಡಿ ಸಾಂಬಾರ್‌ಗೆ ಹಾಕಿ ಅಥವಾ ಆಲೂಗಡ್ಡೆಯನ್ನು ಹಸಿಯಾಗಿ ಕತ್ತರಿಸಿ ಸಾಂಬಾರ್‌ ಸೇರಿಸಿದರೂ ನಡೆಯುತ್ತೆ. ಸ್ವಲ್ಪ ಸಮಯದ ನಂತರ ತೆಗೆಯಿರಿ. ಇದು ಹೆಚ್ಚಿನ ಉಪ್ಪನ್ನು ಹೀರುತ್ತದೆ.
ಬ್ರೆಡ್ ರೆಸಿಪಿ ಮಾಡಿದ ಮೇಲೆ ಬ್ರೆಡ್‌ನ ಅಂಚುಗಳನ್ನು ಬಿಸಾಕುತ್ತೇವೆ. ಆದರೆ ಇನ್ನು ಮುಂದೆ ಹಾಗೆ ಮಾಡಬೇಡಿ. ಬದಲಾಗಿ ಅದನ್ನು ಲೈಟ್ ಆಗಿ ರೋಸ್ಟ್ ಮಾಡಿಕೊಂಡು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ಇದನ್ನು ಕಟ್ಲೇಟ್, ನುಗ್ಗೆಟ್ಸ್ ಏನಾದರೂ ಕರಿದ ತಿಂಡಿ ಮಾಡಲು ಬಳಕೆ ಮಾಡಬಹುದು.

Latest Videos

click me!