ಆಲೂಗಡ್ಡೆ ಸಿಪ್ಪೆ ಎಸೆಯಬೇಡಿ ಹೀಗೆ ಟೇಸ್ಟಿ ಚಿಪ್ಸ್ ಮಾಡಿ ನೋಡಿ!
First Published | May 20, 2021, 4:46 PM ISTಅಲೂಗೆಡ್ಡೆ ಸಾಮಾನ್ಯವಾಗಿ ಎಲ್ಲರ ಫೆವರೇಟ್ ತರಕಾರಿಯಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಆಲೂಗಡ್ಡೆಚಿಪ್ಸ್ ಯಾ ಪರೋಠಾ ಇಷ್ಷಪಡುತ್ತಾರೆ. ಹಾಗೂ ಇದು ಅತಿ ಬಳಕೆಯಾಗುವ ತರಕಾರಿಗಳಲ್ಲಿ ಒಂದಾಗಿದೆ. ಆದರೆ ಅಲೂಗೆಡ್ಡೆಯ ಸಿಪ್ಪೆಯನ್ನು ಎಸೆಯುತ್ತೇವೆ. ಆದರೆ ನಿಮಗೆ ತಿಳಿದಿದೆಯೇ, ಈ ಸಿಪ್ಪೆಗಳು ಬಹಳ ಪ್ರಯೋಜನಕಾರಿ. ಆಲೂಗೆಡ್ಡೆ ಸಿಪ್ಪೆಯಲ್ಲಿ ಹೇರಳವಾಗಿ ಕಬ್ಬಿಣದ ಅಂಶವಿದೆ. ಕಾರ್ಬ್ ಮತ್ತು ಪಿಷ್ಟವನ್ನು ಸಹ ಹೊಂದಿರುತ್ತದೆ. ಇದಲ್ಲದೆ, ವಿಟಮಿನ್ ಬಿ 3 ಆಲೂಗೆಡ್ಡೆ ಸಿಪ್ಪೆಗಳಲ್ಲಿ ಸಾಕಷ್ಟು ಕಂಡುಬರುತ್ತದೆ. ಜೊತೆಗೆ ಇದು ಎನರ್ಜಿಯನ್ನು ನೀಡುತ್ತದೆ. ಇಲ್ಲಿದೆ ನೋಡಿ ಅಲೂಗೆಡ್ಡೆ ಸಿಪ್ಪೆಯ ಉಪಯೋಗ ಮತ್ತು ಅದನ್ನು ಆಹಾರದಲ್ಲಿ ಬಳಸುವ ವಿಧಾನಗಳು.