ಬೆಣ್ಣೆ, ತುಪ್ಪ, ಕಡಲೆಕಾಯಿ ಚಳಿಗಾಲದಲ್ಲಿ ಬೇಕೇ ಬೇಕು ರೀ!

First Published | Oct 24, 2020, 6:14 PM IST

ನವೆಂಬರ್ ತಿಂಗಳು ಹತ್ರ ಬರ್ತಿದೆ, ಋತುಮಾನಕ್ಕೆ ಅನುಗುಣವಾಗಿ ಆಹಾರ ಸೇವಿಸಬೇಕು. ಚಳಿಗಾಲದ ಸಮಯದಲ್ಲಿ, ನೀವು ಹೊರಗಿನಿಂದ ಬೆಚ್ಚಗಿನ ಬಟ್ಟೆ ಧರಿಸಿದರೆ ಸಾಕಾಗೋದಿಲ್ಲ, ಬೆಚ್ಚಗಿರಲು ನಿಮ್ಮ ಆಹಾರದಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ನಮ್ಮಲ್ಲಿ ಹೆಚ್ಚಿನವರು ವರ್ಕ್ ಫ್ರಮ್ ಹೋಂ ಮಾಡುತ್ತಿರುವ  ಈ ಸಮಯದಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸುವ ಅಗತ್ಯವನ್ನು ನಾವು ಚೆನ್ನಾಗಿ ಅರಿತುಕೊಳ್ಳಬೇಕು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಪೌಷ್ಠಿಕಾಂಶಯುಕ್ತ ಆಹಾರಗಳನ್ನು ಖಂಡಿತ ಸೇವಿಸಿ. 

ಬಜ್ರಾ ಅಥವಾ ಸಜ್ಜೆ ಬಾರ್ಲಿ : ಮೂಳೆ ಕೊರೆಯುವಷ್ಟು ಶೀತದ ದಿನದಲ್ಲಿ, "ಭಕ್ರಿ, ಲಡ್ಡೂ, ಖಿಚ್ಡಿ, ಥಾಲಿಪೀತ್, ಇತ್ಯಾದಿ" ರೂಪದಲ್ಲಿ ಬೆಚ್ಚಗಿನ ಬಾರ್ಲಿ ಅಥವಾ ಸಜ್ಜೆಯನ್ನು ತಿನ್ನುವುದಕ್ಕಿಂತ ಉತ್ತಮ ಬೇರೊಂದಿಲ್ಲ. ಈ ಆಹಾರದಲ್ಲಿ ವಿಟಮಿನ್-ಬಿ ಮತ್ತು ನಾರಿನಂಶವಿದೆ. ಇದು ಸ್ನಾಯುಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ಗೊಂದ್ ಅಥವಾ ಅಂಟು: ಈ ಸೂಪರ್ಫುಡ್ ಕೀಲುಗಳನ್ನು ಬಲಪಡಿಸಲು, ಜೀರ್ಣಕ್ರಿಯೆಯನ್ನು ಸುಧಾರಿಸಲು, ಮೂಳೆಗಳನ್ನು ಬಲಪಡಿಸಲು ಮತ್ತು ಕಾಮಾಸಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮುಟ್ಟಿನ ತೊಂದರೆಗಳು ಮತ್ತು ಗ್ಯಾಸ್ ಸಮಸ್ಯೆಗಳನ್ನು ಸಹ ನಿರ್ವಹಿಸುತ್ತದೆ. ಇದನ್ನು ಉಂಡೆ ಅಥವಾ ಗೊಂದ್ ಪಾನಿಯಾಗಿ ತಿನ್ನಿರಿ, ತುಪ್ಪದಲ್ಲಿ ಹುರಿದು ಸಕ್ಕರೆ ಚಿಮುಕಿಸಿ ಸೇವಿಸಲಾಗುತ್ತದೆ.
Tap to resize

ಹಸಿರು ತರಕಾರಿಗಳು:ಹಸಿರು ಸಸ್ಯ ಯಾವಾಗಲೂ ಆರೋಗ್ಯ ಉತ್ತಮವಾಗುತ್ತದೆ, ಏಕೆಂದರೆ ಅವುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಕೈ ಮತ್ತು ಕಾಲುಗಳಲ್ಲಿನ ಬರ್ನಿಂಗ್ ಸೆನ್ಸೇಷನ್ ಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಪಾಲಕ್, ಮೆಥಿ (ಮೆಂತ್ಯ), ಸಾಸಿವೆ, ಪುದೀನ, ಮತ್ತು ಹಸಿರು ಬೆಳ್ಳುಳ್ಳಿ ನಿಮ್ಮ ಆಹಾರದಲ್ಲಿ ನೀವು ಸೇರಿಸಬಹುದಾದ ಕೆಲವು ಹಸಿರು ತರಕಾರಿಗಳು.
ಗೆಡ್ಡೆ ವೆಜೆಟೇಬಲ್ಸ್ : ನಿಮ್ಮ ದೈನಂದಿನ ಆಹಾರದಲ್ಲಿ, ವಿಶೇಷವಾಗಿ ಹಬ್ಬದ ಋತುವಿನಲ್ಲಿ ನೀವು ಎಲ್ಲಾ ರೀತಿಯ ಗೆದ್ದೇ ತರಕಾರಿಗಳನ್ನು ಸೇರಿಸಿಕೊಳ್ಳಬೇಕು(ಕ್ಯಾರಟ್, ಆಲೂಗಡ್ಡೆ, ಗೆಣಸು ಇತ್ಯಾದಿ). ಈ ತರಕಾರಿಯಲ್ಲಿ ಫೈಬರ್ ಮತ್ತು ಉತ್ತಮ ಬ್ಯಾಕ್ಟೀರಿಯಾಗಳು ತುಂಬಿರುವುದರಿಂದ ಇದು ಉತ್ತಮ ಆಹಾರವಾಗಿದೆ. ಇದು ತೂಕ ಕಡಿಮೆ ಮಾಡುವುದಲ್ಲದೆ ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ.
ಸೀಸನಲ್ ಫ್ರೂಟ್ಸ್ : ಚಳಿಗಾಲದ ಹಣ್ಣುಗಳಲ್ಲಿ ಸೂಕ್ಷ್ಮ ಪೋಷಕಾಂಶಗಳು ಮತ್ತು ಫೈಬರ್ ಅಧಿಕವಾಗಿದ್ದು, ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಚಳಿಗಾಲದ ದಿನದಂದು ಸೀತಾಫಲ, ಪೆರು, ಸೇಬು ಮತ್ತು ಖುರ್ಮಾನಿಯ ಸೇವಿಸಿ ಅರೋಗ್ಯ ಕಾಪಾಡಿ.
ಎಳ್ಳು: ಎಳ್ಳು ಬೀಜಗಳಲ್ಲಿ ಅಗತ್ಯವಾದ ಕೊಬ್ಬಿನಾಮ್ಲಗಳು, ವಿಟಮಿನ್ ಇ ಸಮೃದ್ಧವಾಗಿದೆ ಮತ್ತು ಇದು ನಿಮ್ಮ ಚರ್ಮ, ಕೂದಲು ಮತ್ತು ಮೂಳೆಗಳಿಗೆ ಅದ್ಭುತವಾಗಿದೆ. ನೀವು ಇದನ್ನು ಚಿಕ್ಕಿ, ಲಡ್ಡೂ, ಚಟ್ನಿ ಮತ್ತು ಮಸಾಲೆಗಳಾಗಿ ತಿನ್ನಬಹುದು.
ಕಡಲೆಕಾಯಿ:ಪ್ರೋಟೀನ್, ವಿಟಮಿನ್ ಬಿ, ಅಮೈನೋ ಆಮ್ಲಗಳು ಮತ್ತು ಪಾಲಿಫಿನಾಲ್ ಸಮೃದ್ಧವಾಗಿರುವ ಕಡಲೆಕಾಯಿಯನ್ನು ಚಟ್ನಿಯಂತೆ ಸೇವಿಸಬಹುದು ಅಥವಾ ನೀವು ಅವುಗಳನ್ನು ಸಲಾಡ್ ಮತ್ತು ಇತರ ಹಲವಾರು ಖಾದ್ಯಗಳಲ್ಲಿ ಸೇರಿಸಿಕೊಳ್ಳಬಹುದು.
ತುಪ್ಪ: ತುಪ್ಪ ಅಥವಾ ಕ್ಲಾರಿಫೈಡ್ ಬೆಣ್ಣೆಯು ಆರೋಗ್ಯಕರ ಆಹಾರಕ್ರಮಕ್ಕೆ ಅತ್ಯುತ್ತಮ ಸೇರ್ಪಡೆಯಾಗಿದೆ. ಜೀವಸತ್ವಗಳು, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾದ ನಿಮ್ಮ ಆಹಾರದಲ್ಲಿ ತುಪ್ಪವನ್ನು ಸುಲಭವಾಗಿ ಸೇರಿಸಬಹುದು. ನಿಮ್ಮ ದಾಲ್, ರೊಟ್ಟಿ ಇತ್ಯಾದಿಗಳನ್ನು ತುಪ್ಪದೊಂದಿಗೆ ಸೇವಿಸಿ.
ಬೆಣ್ಣೆ: ಬೆಣ್ಣೆಯನ್ನು ತಾಜಾ ಹಾಲು ಮತ್ತು ಕೆನೆಯಿಂದ ಇದನ್ನು ತಯಾರಿಸಲಾಗುತ್ತದೆ. ಇದು ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಜಾಯಿಂಟ್ ಲೂಬ್ರಿಕೇಷನ್, ಚರ್ಮವನ್ನು ಹೈಡ್ರೇಟ್ ಮಾಡುವುದು ಮತ್ತು ಕುತ್ತಿಗೆ ಮತ್ತು ಬೆನ್ನುಮೂಳೆಯ ನೋವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದನ್ನು ಪರೋಟ, ಭಕ್ರಿ, ಚಪಾತಿ ಮತ್ತು ದಾಲ್ಗಳೊಂದಿಗೆ ಸೇವಿಸಿ.

Latest Videos

click me!