ಕತ್ತೆ ಹಾಲಿನ ಪನೀರ್ ಗೆ ಚಿನ್ನದಷ್ಟೇ ಬೆಲೆ! ಅಷ್ಟಕ್ಕೂ ಏಕೀ ಡಿಮ್ಯಾಂಡ್?

First Published Oct 24, 2020, 2:13 PM IST

ನಾವು ಹೆಚ್ಚಾಗಿ ದನದ ಮತ್ತು ಎಮ್ಮೆ ಹಾಲಿನ ಪನೀರ್ ಸೇವಿಸುತ್ತೇವೆ. ಅದರ ಬೆಲೆ ಒಂದು ಕೆಜಿಗೆ 300 ರಿಂದ 600 ರೂಪಾಯಿಗಳಷ್ಟು ಇರುತ್ತದೆ. ಆದರೆ ಜಗತ್ತಿನ ಕೆಲವೊಂದು ಪ್ರದೇಶಗಳಲ್ಲಿ ಕತ್ತೆ ಹಾಲಿನ ಪನೀರ್ ಮಾಡಲಾಗುತ್ತದೆ. ಕತ್ತೆ ಹಾಲಿನ ಪನೀರ್ ಎಷ್ಟೊಂದು ದುಬಾರಿ ಎಂದರೆ ಅದರಿಂದ 15 ಗ್ರಾಮ್ ಚಿನ್ನವನ್ನೇ ಖರೀದಿಸಬಹುದು. ಈ ಪನೀರ್ ನ ವಿಶೇಷ ಗುಣದ ಬಗ್ಗೆ ತಿಳಿದು ಪ್ರಪಂಚದೆಲ್ಲೆಡೆ ಇದರ ಡಿಮಾಂಡ್ ಕೂಡ ಹೆಚ್ಚಾಗಿದೆ. 

ಕತ್ತೆ ಹಾಲಿನಲ್ಲಿ ತಾಯಿಯ ಎದೆಹಾಲಿನಷ್ಟೇ ಸತ್ವವಿದೆ ಎಂದು ಹೇಳಲಾಗುತ್ತದೆ. ಇದರ ಹಾಲು ಕೆಲವೊಂದು ಸಮಸ್ಯೆಗಳನ್ನು ದೂರ ಮಾಡುತ್ತದೆ. ಆದುದರಿಂದ ಇದರ ಪನೀರ್ ತುಂಬಾನೇ ದುಬಾರಿಯಾಗಿದೆ. ಬನ್ನಿ ನಾವು ನಿಮಗೆ ಕತ್ತೆಯ ಹಾಲಿನ ಪನೀರ್ ಎಲ್ಲಿ ಸಿಗುತ್ತದೆ? ಇದರ ಬೆಲೆ ಎಷ್ಟು? ಪ್ರಯೋಜನವೇನು ಅನ್ನೋದರ ಬಗ್ಗೆ ತಿಳಿಸುತ್ತೇವೆ...
undefined
ಇದು ಸ್ಪೆಷಲ್ ಪನೀರ್ ಏನು ಅಲ್ಲ. ಸೆರ್ಬಿಯಾದಲ್ಲಿ ಸಿಗುವಂತಹ ಕತ್ತೆಯ ಹಾಲಿನಿಂದ ಮಾಡಿರುವ ಪನೀರ್ ಆಗಿದೆ. ಈ ಪನೀರನ್ನು ವಿಶ್ವದಲ್ಲಿ ಅತ್ಯಂತ ದುಬಾರಿಯಾದ ಪನೀರ್ ಎನ್ನಲಾಗುತ್ತದೆ. ಈ ಪನೀರ್ ಒಂದು ಕೆಜಿ ಬೆಲೆ ಸುಮಾರು 78 ಸಾವಿರ ರೂಪಾಯಿ ಆಗಿದೆ.
undefined
ನೀವು ಯೋಚಿಸಬಹುದು ಸಾಮಾನ್ಯವಾಗಿ ಉತ್ತಮ ಪನೀರ್ ಸುಮಾರು 300 ರಿಂದ 400 ರೂಪಾಯಿಗೆ ಒಂದು ಕೆಜಿ ಸಿಗುತ್ತದೆ. ಹಾಗಾದರೆ ಈ ಪನೀರಿನಲ್ಲಿ ಅಂತಹ ವಿಶೇಷತೆ ಏನಿದೆ ಎಂದು ಯೋಚಿಸುತ್ತಿದ್ದೀರಾ?
undefined
ಈ ಪನೀರ್ ಯಾಕೆ ವಿಶೇಷ ಎಂದರೆ, ಇದನ್ನು ದನ ಅಥವಾ ಎಮ್ಮೆಯಿಂದ ಮಾಡಿದ್ದಲ್ಲ, ಬದಲಾಗಿ ಇದನ್ನು ಕತ್ತೆಯ ಹಾಲಿನಿಂದ ಮಾಡಲಾಗುತ್ತದೆ, ಕತ್ತೆಯ ಹಾಲಿನಲ್ಲಿ ತಾಯಿಯ ಎದೆಹಾಲಿನಷ್ಟೇ ಸತ್ವವಿದೆ ಎಂದು ಹೇಳಲಾಗುತ್ತದೆ. ಅಲ್ಲದೆ ಕೆಲವು ಕಡೆಗಳಲ್ಲಿ ಮಕ್ಕಳಿಗೆ ಮೊದಲ ದಿನದಿಂದಲೇ ಇದರ ಹಾಲನ್ನು ನೀಡುತ್ತಾರೆ. ಕತ್ತೆಯ ಹಾಲು ಕೆಲವು ಅರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಆದುದರಿಂದ ಇದರಿಂದ ಮಾಡಲಾದ ಪನೀರ್ ಹೆಚ್ಚು ದುಬಾರಿಯಾಗಿರುತ್ತದೆ.
undefined
ಪ್ರಪಂಚದ ಅತ್ಯಂತ ದುಬಾರಿ ಪನೀರ್ ಯೂರೋಪ್ ದೇಶದ ಸರ್ಬಿಯಾ ಡಾ ಒಂದು ಫಾರ್ಮ್ ನಲ್ಲಿ ಮಾಡಲಾಗುತ್ತದೆ. ಈ ಫಾರ್ಮ್ ನ್ನು ಝಸವಿಕ ಎಂದು ಕರೆಯಲಾಗುತ್ತದೆ. ಇಲ್ಲಿ ಕಟ್ಟೆಗಳನ್ನು ಸಾಕಿ ಅವುಗಳಿಂದ ಹಾಲು ತೆಗೆದು ಪನೀರ್ ಮಾಡಲಾಗುತ್ತದೆ.
undefined
ಉತ್ತರ ಸರ್ಬಿಯಾದಲ್ಲಿ ಇರುವ ಝಸವಿಕ ಫಾರ್ಮ್ ನಲ್ಲಿ 200 ಕ್ಕೂ ಅಧಿಕ ಕಟ್ಟೆಯನ್ನು ಸಾಕಲಾಗುತ್ತದೆ. ಹಸು ಮತ್ತು ಎಮ್ಮೆಗೆ ಹೋಲಿಕೆ ಮಾಡಿದರೆ ಕತ್ತೆ ಕಡಿಮೆ ಹಾಲನ್ನು ಕೊಡುತ್ತದೆ. ಒಂದು ಕತ್ತೆಯಿಂದ ಒಂದು ಲೀಟರ್ ಹಾಲು ಸಹ ನೀಡುವುದಿಲ್ಲ. ಈ ಫಾರ್ಮ್ ನ ಎಲ್ಲಾ ಕತ್ತೆಗಳು ಒಟ್ಟಾಗಿ ಸೇರಿ ಸುಮಾರು 150ಕೆಜಿ ಪನೀರ್ ಮಾತ್ರ ನೀಡುತ್ತದೆ.
undefined
ಆದರೆ ಎಲ್ಲಾ ಕತ್ತೆಗಳಿಂದ ಇಷ್ಟೊಂದು ದುಬಾರಿ ಪನೀರ್ ಮಾಡಲು ಅಸಾಧ್ಯ, ಕೇವಲ ಬಾಲ್ಕನ್ ಪ್ರಜಾತಿಯ ಕತ್ತೆಯ ಹಾಲನ್ನು ಮಾತ್ರ ಪೌಷ್ಠಿಕ ಎಂದು ಹೇಳಲಾಗುತ್ತದೆ. ಇದು ಕೇವಲ ಮಾಂಟೆನೆಗ್ರೋ ನಲ್ಲಿ ಸಿಗುತ್ತದೆ.
undefined
ಈ ಕತ್ತೆಯ ಹಾಲಿನಲ್ಲಿ ಹಲವು ಪೌಷ್ಟಿಕ ತತ್ವಗಳಿವೆ. ಅಸ್ತಮಾ ಮತ್ತು ಬ್ರೋಕಾಯಿಟಿಸ್ ರೋಗಿಗಳು ಇದನ್ನು ಬಳಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯುತ್ತಾರೆ. ಜೊತೆಗೆ ದನದ ಹಾಲಿನಿಂದ ಅಲರ್ಜಿ ಉಂಟಾಗುವವರಿಗೂ ಈ ಕತ್ತೆ ಹಾಲಿನ ಪನೀರ್ ಬಳಕೆ ಮಾಡಬಹುದು.
undefined
ಈ ಪನೀರ್ನ ಉತ್ಪನ್ನ ಕಡಿಮೆಯಾಗಿರುವುದರಿಂದ ಇದರ ಬೆಲೆ ದುಬಾರಿಯಾಗಿದೆ. ಇದನ್ನು ಹೆಚ್ಚಾಗಿ ವಿದೇಶಿಯರೇ ಖರೀದಿ ಮಾಡುತ್ತಾರೆ. ಕತ್ತೆಯ ಹಾಲಿನಲ್ಲಿ ಸಾಬೂನು ಮತ್ತು ಶರಾಬನ್ನು ಸಹ ಉತ್ಪಾದಿಸುತ್ತಾರೆ ಎಂದು ಹೇಳಲಾಗುತ್ತದೆ.
undefined
ಈ ಪನೀರ್ 2012 ರಲ್ಲಿ ಚರ್ಚೆಗೆ ಬಂದಿತ್ತು, ಯಾಕೆಂದರೆ ಸರ್ಬಿಯಾದ ಟೆನಿಸ್ ಸ್ಟಾರ್ ನೊವಾಕ್ ಜೊಕೊವಿಚ್ ಈ ಪನೀರನ್ನು ಸೇವಿಸುತ್ತಿದ್ದಾಗ ಭಾರಿ ಚರ್ಚೆಯಾಗಿತ್ತು. ಆದರೆ ನೊವಾಕ್ ಇದು ಸುಳ್ಳು ಸುದ್ದಿ ಎಂದು ಹೇಳಿದ್ದರು.
undefined
click me!