ರೆಸಿಪಿ: ಉಳಿದಿರುವ ಅನ್ನದಿಂದಲೂ ಮಾಡಬಹುದು ರಸಗುಲ್ಲಾ!

First Published | Oct 22, 2020, 8:54 PM IST

ಕೋಲ್ಕತ್ತಾದ ಪ್ರಸಿದ್ಧ ರಸಗುಲ್ಲಾ ಬಗ್ಗೆ  ನಮಗೆ ಗೊತ್ತು. ಹಾಲಿನಿಂದ ತಯಾರಿಸುವ ಈ ಸ್ವೀಟ್‌ ಎಲ್ಲರಿಗೂ ಇಷ್ಟ. ಆದರೆ ರಸಗುಲ್ಲಾಗಳನ್ನು ಉಳಿದ ಅನ್ನದಿಂದಲೂ ತಯಾರಿಸಬಹುದು ಎಂಬುದು ಗೊತ್ತಾ? ಇಲ್ಲಿದೆ ನೋಡಿ ರೆಸಿಪಿ.  ಬೇಕಾಗುವ ಸಾಮಾಗ್ರಿಗಳು :1 ಟೀಸ್ಪೂನ್ ಆರೋರೂಟ್ ಪುಡಿ, 1 ಟೀಸ್ಪೂನ್ ಮೈದಾ, 1 ಟೀಸ್ಪೂನ್ ಹಾಲಿನ ಪುಡಿ, 1 ಟೀಸ್ಪೂನ್ ತುಪ್ಪ, ಒಂದೂವರೆ ಕಪ್ ಸಕ್ಕರೆ, 3 ಕಪ್ ನೀರು, ಎರಡೂವರೆ ಕಪ್ ಅನ್ನ. 

ಅಡುಗೆ ಮನೆಯಲ್ಲಿ ಅನ್ನ ಉಳಿಯುವುದು ಸಾಮಾನ್ಯ. ಉಳಿದ ಅನ್ನವನ್ನು ಮತ್ತೆ ಉಪಯೋಗಿಸುತ್ತೇವೆ. ಅದರಿಂದ ಸಾಫ್ಟ್‌ ರಸಗುಲ್ಲಾ ಮಾಡುವುದು ನಿಮಗೆ ಗೊತ್ತಾ?
ಉಳಿದ ಅನ್ನದಿಂದ ಸ್ವೀಟ್‌ ಮಾಡುವ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಅದೂ ಕೋಲ್ಕತ್ತಾದ ಪ್ರಸಿದ್ಧ ರಸಗುಲ್ಲಾಗಳನ್ನು. ಕೇವಲ 15 ನಿಮಿಷಗಳಲ್ಲಿ ಮೃದುವಾದ ರಸಗುಲ್ಲಾ ತಯಾರಿಸುವ ವಿಧಾನ ಇಲ್ಲಿದೆ.
Tap to resize

ಹತ್ತಿಯಂತೆ ಮೃದುವಾದ ರಸಗುಲ್ಲಾಗಳನ್ನು ತಯಾರಿಸಲು, ಮೊದಲು ಉಳಿದ ಅನ್ನವನ್ನು ಮಿಕ್ಸರ್‌ಗೆ ಹಾಕಿ ಕೊಳ್ಳಿ. ತುಂಬಾ ನುಣ್ಣಗಿನ ಪೇಸ್ಟ್‌ ಮಾಡುವ ಅಗತ್ಯವಿಲ್ಲ.
ಅನ್ನವನ್ನು ರುಬ್ಬಿದ ನಂತರ, ತುಪ್ಪದಿಂದ ಗ್ರೀಸ್ ಮಾಡಿದ ತಟ್ಟೆಗೆ ಹಾಕಿ.
ಈಗ ಅನ್ನದ ಪೇಸ್ಟ್‌ಗೆ ಮೈದಾ, ಆರೋರೂಟ್ ಪುಡಿ ಮತ್ತು ಹಾಲಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಹಿಟ್ಟಿನಂತೆ ಕಲೆಸಿಕೊಳ್ಳಿ. ಹೆಚ್ಚು ನಾದಿದಷ್ಷು ರಸಗುಲ್ಲಾ ಮೃದುವಾಗಿ ಆಗುತ್ತದೆ ಎಂಬುದನ್ನು ಮರೆಯಬೇಡಿ.
ಹಿಟ್ಟು ಸಿದ್ಧವಾದ ನಂತರ, ಅದರಿಂದ ಸಣ್ಣ ಉಂಡೆಗಳನ್ನು ಮಾಡಿ. ಅವುಗಳು ಒಡೆದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಇನ್ನೊಂದು ಬಾಣಲೆಯಲ್ಲಿ ಒಂದೂವರೆ ಕಪ್ ಸಕ್ಕರೆ ಮತ್ತು 3 ಕಪ್ ನೀರು ಸೇರಿಸಿ ಕುದಿಸಿ ಸಿರಪ್ ತಯಾರಿಸಿ ಕೊಳ್ಳಿ.
ಪಾಕ ಸಿದ್ಧವಾದ ತಕ್ಷಣ, ರಸಗುಲ್ಲಾವನ್ನು ಪ್ಯಾನ್‌ಗೆ ಸುರಿದ್ದು ಅದನ್ನು ಮುಚ್ಚಿ ಮಧ್ಯಮ ಉರಿಯಲ್ಲಿ 2 ರಿಂದ 3 ನಿಮಿಷ ಬೇಯಿಸಿ. 2 ನಿಮಿಷಗಳ ನಂತರ, ರಸಗುಲ್ಲಾಗಳ ಇನ್ನೊಂದು ಬದಿಯನ್ನು ಬೇಯಿಸಿ. ಇದರ ನಂತರ, ಕಡಿಮೆ ಉರಿಯಲ್ಲಿ 10 ರಿಂದ 15 ನಿಮಿಷಗಳ ಕಾಲ ಬೇಯಿಸಿ.
ನಂತರ, ಕಡಿಮೆ ಉರಿಯಲ್ಲಿ 10 ರಿಂದ 15 ನಿಮಿಷಗಳ ಕಾಲ ಬೇಯಿಸಿದರೆ ಅನ್ನದ ರಸಗುಲ್ಲಾ ರೆಡಿ.
ಉಳಿದಿರುವ ಅನ್ನದಿಂದ ತಯಾರಿಸಿದ ಸಾಫ್ಟ್‌ ಟೇಸ್ಟಿರಸಗುಲ್ಲಾ ರೆಡಿ.

Latest Videos

click me!