ಬೆಂಗಳೂರಲ್ಲಿ ಬನಾರಸಿ ಫಾಸ್ಟ್ ಫುಡ್ ತಿನ್ಬೇಕಾದ್ರೆ ಈ ಸ್ಥಳ ಬೆಸ್ಟ್

Published : Sep 27, 2023, 06:28 PM IST

ಬನಾರಸ್ ಅಥವಾ ಕಾಶಿಯ ರುಚಿಯಾದ ಆಹಾರಗಳ ಸ್ವಾಧ ನಿಮಗೆ ಬನಾರಸ್ ನಲ್ಲಿ ಹೊರತುಪಡಿಸಿ ಬೇರೆಲ್ಲಿಯೂ ಸಿಗೋದಕ್ಕೆ ಸಾಧ್ಯಾನೆ ಇಲ್ಲ ಅಂತಾರೆ. ಆದರೆ ಅದೇ ಸ್ವಾಧ ಈಗ ಬೆಂಗಳೂರಲ್ಲಿ ಸಿಗುತ್ತೆ.   

PREV
17
ಬೆಂಗಳೂರಲ್ಲಿ ಬನಾರಸಿ ಫಾಸ್ಟ್ ಫುಡ್ ತಿನ್ಬೇಕಾದ್ರೆ ಈ ಸ್ಥಳ ಬೆಸ್ಟ್

ಬನಾರಸಿ ಆಹಾರಗಳು (Banarasi food) ತುಂಬಾನೆ ಟೇಸ್ಟಿಯಾಗಿರುತ್ತಂತೆ. ಅವುಗಳನ್ನು ಒಮ್ಮೆ ಬಾಯಿಗೆ ಹಾಕಿದ್ರೆ, ಮತ್ತೆ ಮತ್ತೆ ತಿನ್ನಬೇಕೆನ್ನುವ ಸ್ವಾದ ಆ ಆಹಾರದಲ್ಲಿರುತ್ತೆ. ಅಂತಹ ಆಹಾರ ನೀವು ಬೆಂಗಳೂರಲ್ಲಿ ಟೇಸ್ಟ್ ಮಾಡಲು ಬಯಸಿದ್ರೆ ಇಲ್ಲಿದೆ ಬೆಸ್ಟ್ ತಾಣ. ಇಲ್ಲಿ ಆಹಾರಗಳನ್ನು ಎಂಜಾಯ್ ಮಾಡಬಹುದು. 

27

ಬನಾರಸ್ ನ ಸ್ವೀಟ್ಸ್, ಪರಾಟ, ಲಸ್ಸಿ, ಚಾಟ್ಸ್, ಪಾನಿಪುರಿ… ಎಷ್ಟೊಂದು ರುಚಿಕರವಾಗಿರುತ್ತೆ ಅಂದ್ರೆ, ಆ ರುಚಿಯನ್ನು ಸವಿದ ಮೇಲೆ ಬೇರೆ ಯಾವ ಆಹಾರವೂ ನಿಮಗೆ ರುಚಿಸಲು ಸಾಧ್ಯವಿಲ್ಲ. ಆದರೆ ಇದೀಗ ಬೆಂಗಳೂರಲ್ಲೂ ಬನಾರಸ್ ಸ್ವಾದವನ್ನು ಸವಿಯಬಹುದು. 
 

37

ಬೆಂಗಳೂರಲ್ಲಿ ಸ್ಟ್ರೀಟ್ ಫುಡ್ ಗಳಿಗೇನೂ (street food in bangalore) ಕಡಿಮೆ ಇಲ್ಲ. ಸ್ಟ್ರೀಟ್ ಫುಡ್, ಫಾಸ್ಟ್ ಫುಡ್ ಗಳಿಗೆ ಹೆಸರಾದ ಸ್ಟ್ರೀಟ್ ಗಳೇ ಇವೆ. ಇದೇ ಬೆಂಗಳೂರಿನ ಹಲವು ಜಾಗಗಳಲ್ಲಿ ಬನಾರಸ್ ಸ್ವಾಧ ಹೊಂದಿರುವ ಆಹಾರಗಳು ಸಹ ಲಭ್ಯವಿದೆ.

47

ವಾರಣಾಸಿ ಕೆಫೆ  (Varanasi Cafe)
ಇದು ಬೆಂಗಳೂರಿನಲ್ಲಿರುವ ಒಂದು ಕೆಫೆ. ಇಲ್ಲಿ ನೀವು ಬನಾರಸ್ ನ ಎಲ್ಲಾ ರುಚಿ ಸ್ವಾದ ಹೊಂದಿರುವ ಚಾಟ್ಸ್, ಸ್ವೀಟ್ಸ್, ಪರೋಟಾ ಸವಿಯಬಹುದು. ರುಚಿಯು ಅದ್ಭುತವಾಗಿರುತ್ತೆ. ಇದು ಜಯನಗರದಲ್ಲಿದೆ.
 

57

ಲಸ್ಸಿ ಘಾಟ್ (Lassi Ghat)
ಇಲ್ಲಿ ನಿಮಗೆ ಬನಾರಸಿ ಲಸ್ಸಿಯ ಸ್ವಾದ ಸವಿಯಲು ಸಿಗುತ್ತೆ. ಸಿಹಿಯಾದ ದಪ್ಪ ಮೊಸರಿನ ಲಸ್ಸಿ, ಮೇಲೆ ದಪ್ಪನಾದ ಕೆನೆ, ಅದರ ಮೇಲೆ ಕೇಸರಿ, ಡ್ರೈ ಫ್ರುಟ್ಸ್. ಬೆಂಗಳೂರಲ್ಲಿದ್ರೆ ಇಲ್ಲಿಗೆ ಖಂಡಿತವಾಗಿಯೂ ಹೋಗಿ. ಇದು ಸಹ ಜಯನಗರದಲ್ಲಿದೆ.

67

ಕಪೂರ್ಸ್ ಚಾಟ್ ಭಂಡಾರ್ (Kapoors chat Bhandar)
ಕಪೂರ್ಸ್ ಚಾಟ್ ಭಂಡಾರ್ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿದೆ. ಇಲ್ಲಿ ನೀವು ವಿವಿಧ ಚಾಟ್ಸ್ ಟ್ರೈ ಮಾಡಬಹುದು. ಅಷ್ಟೇ ಯಾಕೆ ಬನಾರಸಿ ಥಾಲಿ (ಅನ್ ಲಿಮಿಟೆಡ್) ಯೂ ಇಲ್ಲಿ ದೊರೆಯುತ್ತೆ. 
 

77

ಪಂಡಿತ್ ಜೀ ರಸ್ ಬನಾ ರಹೆ (Panditji Ras Bana Rahe)
ಬನಾರಸ್ ನ ವಿವಿಧ ಖಾದ್ಯಗಳಿಂದ ಹಿಡಿದು, ನಾರ್ಥ್ ಇಂಡಿಯನ್ ಬ್ರೇಕ್ ಫಾಸ್ಟ್ ಚಾಟ್ಸ್, ಸಮೋಸಾ, ಕಚೋರಿ, ಆಲೂ ವಾಡಿ ಸಬ್ಜಿ, ಜಲೇಬಿ, ಗುಲಾಬ್ ಜಾಮೂನ್, ಸಿಹಿ ಲಸ್ಸಿ (Sweet Lassi), ಕರಕ್ ಚಾಯ್ ಎಲ್ಲವನ್ನೂ ಇಲ್ಲಿ ಟ್ರೈ ಮಾಡಬಹುದು. ಇದು ಇಂದಿರಾನಗರದಲ್ಲಿದೆ. 
 

Read more Photos on
click me!

Recommended Stories