ಪ್ರಖ್ಯಾತ 'ಟೈಮ್ ಔಟ್' ನಿಯತಕಾಲಿಕೆಯು 2026ರ ವಿಶ್ವದ ಅತ್ಯುತ್ತಮ ಆಹಾರ ನಗರಗಳ ಪಟ್ಟಿಯನ್ನು ಪ್ರಕಟಿಸಿದ್ದು, ಬೆಂಗಳೂರು 13ನೇ ಸ್ಥಾನ ಪಡೆದಿದೆ. ಈ ಪ್ರತಿಷ್ಠಿತ ಟಾಪ್-20 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಗರ ಇದಾಗಿದ್ದು, ಸಾಂಪ್ರದಾಯಿಕ ಪಾಕಪದ್ಧತಿಯ ಸಮ್ಮಿಶ್ರಣಕ್ಕಾಗಿ ಈ ಮನ್ನಣೆ ಲಭಿಸಿದೆ.
ಬೆಂಗಳೂರು: ಭಾರತದ ಸಿಲಿಕಾನ್ ಸಿಟಿ ಬೆಂಗಳೂರು ಕೇವಲ ಐಟಿ ಹಬ್, ಸ್ಟಾರ್ಟ್‌ಅಪ್‌ಗಳು ಅಥವಾ ವಿಸ್ತಾರವಾದ ಟೆಕ್ ಪಾರ್ಕ್‌ಗಳಿಗೆ ಮಾತ್ರ ಹೆಸರಾಗಿಲ್ಲ, ಬದಲಿಗೆ ಇನ್ಮುಂದೆ ಜಾಗತಿಕ ಪಾಕಶಾಲೆಯ (Food Culture) ಪ್ರಮುಖ ರಾಜಧಾನಿಯಾಗಿಯೂ ಗುರುತಿಸಿಕೊಳ್ಳಲಿದೆ. ಜಗತ್ತಿನ ಪ್ರಖ್ಯಾತ ಪ್ರವಾಸೋದ್ಯಮ ಮತ್ತು ಜೀವನಶೈಲಿ ನಿಯತಕಾಲಿಕೆ 'ಟೈಮ್ ಔಟ್' (Time Out) ಪ್ರಕಟಿಸಿರುವ 2026ರ ವಿಶ್ವದ ಅತ್ಯುತ್ತಮ ಆಹಾರ ನಗರಗಳ (World's Best Food Cities 2026) ಪ್ರತಿಷ್ಠಿತ ಪಟ್ಟಿಯಲ್ಲಿ ಬೆಂಗಳೂರು ಭರ್ಜರಿ 13ನೇ ಸ್ಥಾನವನ್ನು ಮುಡಿಗೇರಿಸಿಕೊಂಡಿದೆ.
28
ಟಾಪ್-20 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಗರ ಬೆಂಗಳೂರು
ವಿಶೇಷವೆಂದರೆ, ವಿಶ್ವದಾದ್ಯಂತ ಭಾರಿ ಸಂಚಲನ ಮೂಡಿಸಿರುವ ಈ ಜಾಗತಿಕ ಟಾಪ್-20 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಗರ ಎಂಬ ಹೆಗ್ಗಳಿಕೆಗೆ ನಮ್ಮ ಹೆಮ್ಮೆಯ ಬೆಂಗಳೂರು ಪಾತ್ರವಾಗಿದೆ. ಪ್ರಪಂಚದಾದ್ಯಂತ ಸುಮಾರು 24,000ಕ್ಕೂ ಅಧಿಕ ಸ್ಥಳೀಯ ನಿವಾಸಿಗಳನ್ನು ಸಮೀಕ್ಷೆ ನಡೆಸಿ ಮತ್ತು ಆಹಾರ ತಜ್ಞರ ಅಂತಾರಾಷ್ಟ್ರೀಯ ಸಮಿತಿಯೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಈ ಶ್ರೇಯಾಂಕವನ್ನು ಪ್ರಕಟಿಸಲಾಗಿದೆ.
38
ಸ್ಥಳೀಯರಿಂದ ಶೇ. 82ರಷ್ಟು ಬಂಪರ್ ರೇಟಿಂಗ್!
ಟೈಮ್ ಔಟ್ ವರದಿಯ ಪ್ರಕಾರ, ಬೆಂಗಳೂರಿನ ವೈವಿಧ್ಯಮಯ ಆಹಾರ ಸಂಸ್ಕೃತಿಗೆ ಆಹಾರ ತಜ್ಞರ ಸಮಿತಿಯು ಶೇಕಡಾ 60 ರಷ್ಟು ಅಂಕಗಳನ್ನು ನೀಡಿದ್ದರೆ, ಖುದ್ದು ಬೆಂಗಳೂರಿಗರು (ಸ್ಥಾನಿಕರು) ನಗರದ ಆಹಾರದ ಗುಣಮಟ್ಟಕ್ಕೆ ಬರೋಬ್ಬರಿ ಶೇಕಡಾ 82 ರಷ್ಟು ಅತ್ಯುತ್ತಮ ರೇಟಿಂಗ್ ನೀಡಿದ್ದಾರೆ.
ಬೆಂಗಳೂರಿನ ಸಾಂಪ್ರದಾಯಿಕ ಗರಿಗರಿಯಾದ ಮಸಾಲಾ ದೋಸೆ ಮತ್ತು ಫಿಲ್ಟರ್ ಕಾಫಿಯ ಪರಂಪರೆಯಿಂದ ಹಿಡಿದು, ಇಂದಿನ ಆಧುನಿಕ ಕ್ರಾಫ್ಟ್ ಕಾಫಿ ಸಂಸ್ಕೃತಿ, ಹುಳಿ ಪಿಜ್ಜಾ ಬಾರ್‌ಗಳು (Sourdough Pizza Bars), ನೈಸರ್ಗಿಕ ವೈನ್ ಸ್ಪಾಟ್‌ಗಳು ಹಾಗೂ ವಿನೈಲ್-ಬಾರ್-ಕಮ್-ಬ್ರೂವರೀಸ್‌ಗಳವರೆಗಿನ ಕಾಸ್ಮೋಪಾಲಿಟನ್ ಶೈಲಿಯು ಜಾಗತಿಕ ಮಟ್ಟದಲ್ಲಿ ತಜ್ಞರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಬೆಂಗಳೂರಿನ ಇಂದಿರಾನಗರ, ಕೋರಮಂಗಲ ಮತ್ತು ಎಂ.ಜಿ. ರಸ್ತೆಯಂತಹ ಪ್ರಮುಖ ಪ್ರದೇಶಗಳಲ್ಲಿರುವ ರೆಸ್ಟೋರೆಂಟ್‌ಗಳು ಸಾಂಪ್ರದಾಯಿಕ ರುಚಿ ಮತ್ತು ಸಮಕಾಲೀನ ಪಾಕಪದ್ಧತಿಯ (Contemporary Cuisine) ವಿಶಿಷ್ಟ ಸಮ್ಮಿಶ್ರಣಕ್ಕೆ ಹೆಸರುವಾಸಿಯಾಗಿವೆ. ಟೈಮ್ ಔಟ್ ಪ್ರತ್ಯೇಕವಾಗಿ ಉಲ್ಲೇಖಿಸಿರುವಂತೆ, ಬೆಂಗಳೂರಿಗೆ ಬರುವವರು ಖಂಡಿತವಾಗಿಯೂ ಸವಿಯಬೇಕಾದ ಭಕ್ಷ್ಯಗಳೆಂದರೆ.'ಪಿಜ್ಜಾ 4P'ಸ್' (Pizza 4P's) ರೆಸ್ಟೋರೆಂಟ್‌ನ ಪ್ರಸಿದ್ಧ ಗಾರ್ಲಿಕ್ ಸೀಗಡಿ (Garlic Shrimp, ಪ್ರಸಿದ್ಧ ಬುರ್ರಾಟಾ ಪಿಜ್ಜಾ (Burrata Pizza) ಇತ್ಯಾದಿ.
58
'ಟೈಮ್ ಔಟ್' ಜಾಗತಿಕ ಟಾಪ್-20 ಆಹಾರ ನಗರಗಳ ಸಂಪೂರ್ಣ ಪಟ್ಟಿ:
2026ರ ಜಾಗತಿಕ ಪಾಕಶಾಲೆಯ ವೈವಿಧ್ಯತೆ ಮತ್ತು ನಾವೀನ್ಯತೆಯನ್ನು ಪ್ರತಿಬಿಂಬಿಸುವ ವಿಶ್ವದ ಟಾಪ್ 20 ನಗರಗಳ ಶ್ರೇಯಾಂಕ ಪಟ್ಟಿ ಇಲ್ಲಿದೆ:
1 ಲಿಮಾ (ಪೆರು): ಫರ್ನಾಂಡಿನಿ ಮತ್ತು ಜಾಗತಿಕ ಪ್ರಶಸ್ತಿ ವಿಜೇತ 'ಸೆಂಟ್ರಲ್' ರೆಸ್ಟೋರೆಂಟ್‌ಗಳ ಮೂಲಕ ಅಗ್ರಸ್ಥಾನದಲ್ಲಿದೆ.
2ಬ್ಯಾಂಕಾಕ್ (ಥೈಲ್ಯಾಂಡ್): ಯುವ ಬಾಣಸಿಗರ ಅಲೆಯಿಂದಾಗಿ ಬೀದಿ ಆಹಾರ (Street Food) ಮತ್ತು ಫೈನ್ ಡೈನಿಂಗ್‌ನಲ್ಲಿ ಕ್ರಾಂತಿ ಸೃಷ್ಟಿಸಿದೆ.
3 ಮೆಕ್ಸಿಕೋ ಸಿಟಿ (ಮೆಕ್ಸಿಕೋ):ಮೆಡಿಟರೇನಿಯನ್, ಏಷ್ಯನ್ ಮತ್ತು ಫ್ರೆಂಚ್ ಪಾಕಪದ್ಧತಿಯ ಪ್ರಭಾವದ ಜಾಗತಿಕ ಸಂಗಮ.
4 ಲಂಡನ್ (ಯುನೈಟೆಡ್ ಕಿಂಗ್‌ಡಮ್): ಕ್ಯಾಸಿಯೊ ಇ ಪೆಪೆ ಸೇರಿದಂತೆ ಅದ್ದೂರಿ ಇಟಾಲಿಯನ್ ರೆಸ್ಟೋರೆಂಟ್‌ಗಳ ಭಾರಿ ಏರಿಕೆಯಿಂದ ಉತ್ತುಂಗದಲ್ಲಿದೆ.
5 ಬಾರ್ಸಿಲೋನಾ (ಸ್ಪೇನ್): ಮೈಕೆಲಿನ್-ಸ್ಟಾರ್ ಮತ್ತು ಕನಿಷ್ಠ ಉನ್ನತ-ಮಟ್ಟದ ಏಷ್ಯನ್ ತಿನಿಸುಗಳ ಆಕರ್ಷಕ ಸಂಯೋಜನೆ.
68
ಸಾಂಪ್ರದಾಯಿಕ ಸ್ಟ್ರೀಟ್ ಫುಡ್
6 ಹೋ ಚಿ ಮಿನ್ಹ್ ಸಿಟಿ (ವಿಯೆಟ್ನಾಂ): ಸಾಂಪ್ರದಾಯಿಕ ಸ್ಟ್ರೀಟ್ ಫುಡ್ ಜಾಯಿಂಟ್‌ಗಳು ಮತ್ತು ಹೈ-ಎಂಡ್ ರೆಸ್ಟೋರೆಂಟ್‌ಗಳ ವಿಶಿಷ್ಟ ಮಿಶ್ರಣ.
7 ಮೆಲ್ಬೋರ್ನ್ (ಆಸ್ಟ್ರೇಲಿಯಾ): ಅರ್ಮೇನಿಯನ್, ಈಜಿಪ್ಟ್, ಫ್ರೆಂಚ್, ಶ್ರೀಲಂಕಾ ಮತ್ತು ಸ್ಥಳೀಯ ಆಸ್ಟ್ರೇಲಿಯನ್ ರುಚಿಗಳ ಸಮ್ಮಿಶ್ರಣ.
8 ಬೀಜಿಂಗ್ (ಚೀನಾ): ಮಾಲ್ ಸಂಸ್ಕೃತಿಯಿಂದ ಹೊರಬಂದು ಪಾರ್ಕ್-ಸೈಡ್ ಬ್ರಂಚ್‌ಗಳು ಮತ್ತು ಓಪನ್ ಕೆಫೆಗಳ ಕಡೆಗೆ ಮುಖ ಮಾಡಿದೆ.
9 ಅಥೆನ್ಸ್ (ಗ್ರೀಸ್): ಶತಮಾನಗಳಷ್ಟು ಹಳೆಯದಾದ ಹೋಟೆಲುಗಳು ಮತ್ತು ಟ್ರೆಂಡಿ ಗ್ಯಾಸ್ಟ್ರೊ-ಹೋಟೆಲುಗಳ ಜುಗಲ್ಬಂದಿ.
10 ಲಿಸ್ಬನ್ (ಪೋರ್ಚುಗಲ್): ಮೈಕೆಲಿನ್ ಸ್ಟಾರ್‌ಗಳಿಂದ ಹಿಡಿದು ಅತ್ಯಂತ ಕೈಗೆಟುಕುವ ಆರಾಮದಾಯಕ ತಿನಿಸುಗಳ ತಾಣ.
78
ಅತ್ಯದ್ಭುತ ಭಕ್ಷ್ಯ
11 ಕೇಪ್ ಟೌನ್ (ದಕ್ಷಿಣ ಆಫ್ರಿಕಾ): ಸರಳವಾದ ಪದಾರ್ಥಗಳಿಂದಲೇ ಜೊಲ್ಲು ಸುರಿಸುವಂತಹ ಅತ್ಯದ್ಭುತ ಭಕ್ಷ್ಯಗಳನ್ನು ಸೃಷ್ಟಿಸುವ ಕಲೆ.
12 ಒಸಾಕಾ (ಜಪಾನ್): ಕೇವಲ ಬೀದಿ ಆಹಾರದ ರಾಜಧಾನಿ ಎಂಬ ಹಣೆಪಟ್ಟಿ ದಾಟಿ, ಗಂಭೀರ ಊಟದ ಅನುಭವ ನೀಡುತ್ತಿದೆ.
13 ಬೆಂಗಳೂರು (ಭಾರತ): ಸಾಂಪ್ರದಾಯಿಕ ದೋಸೆ-ಕಾಫಿ ಪರಂಪರೆ ಹಾಗೂ ಜಾಗತಿಕ ಕ್ರಾಫ್ಟ್ ಬ್ರೂವರೀಸ್‌ಗಳ ವಿಶಿಷ್ಟ ಸಂಗಮ.
14 ನೇಪಲ್ಸ್ (ಇಟಲಿ): ಪುರಾತನ ಸ್ಯಾಂಡ್‌ವಿಚ್ ಹಾಗೂ ಪಿಜ್ಜಾ ಜಾಯಿಂಟ್‌ಗಳು ತಮ್ಮ ಬೇರುಗಳನ್ನು ಬಿಡದೆ ತಂದಿರುವ ನಾವೀನ್ಯತೆ.
15 ನ್ಯೂಯಾರ್ಕ್ (ಅಮೆರಿಕ): ಸಾಂಪ್ರದಾಯಿಕ ಆಹಾರದ ತಾಣಗಳು, ಭೂಖಂಡದ ರೆಸ್ಟೋರೆಂಟ್‌ಗಳು ಮತ್ತು ವೈವಿಧ್ಯಮಯ ತಿಂಡಿ ಅಂಗಡಿಗಳು.
88
ಕೊರಿಯನ್ ಪಾಕಪದ್ಧತಿ
16 ಹಾಂಗ್ ಕಾಂಗ್ (ಚೀನಾ): ಇತ್ತೀಚಿನ ದಿನಗಳಲ್ಲಿ ನಿರ್ದಿಷ್ಟ ಆಹಾರ ಗುಂಪುಗಳಿಗೆ ಗಮನ ಹರಿಸುವ ವಿಶೇಷ ಕೊರಿಯನ್ ಪಾಕಪದ್ಧತಿಯಲ್ಲಿ ಏರಿಕೆ.
17 ಬ್ಯೂನಸ್ ಐರಿಸ್ (ಅರ್ಜೆಂಟೀನಾ): ಸಾಂಪ್ರದಾಯಿಕ ಸ್ಟೀಕ್‌ಹೌಸ್ ದಾಟಿ ತನ್ನ ವಲಸೆ ಬೇರುಗಳ ವೈವಿಧ್ಯಮಯ ಆಹಾರಕ್ಕೆ ಮರಳಿದೆ.
18 ಮಾರ್ಸಿಲ್ಲೆ (ಫ್ರಾನ್ಸ್): ಹೊಸ ಅಲೆಯ ಯುವ ಬಾಣಸಿಗರಿಂದ ವಿಶ್ವಪ್ರಸಿದ್ಧ ಪಾಕಶಾಲೆಯ ದೃಶ್ಯ ಮತ್ತಷ್ಟು ವಿಸ್ತರಣೆ.
19 ಕೋಪನ್ ಹ್ಯಾಗನ್ (ಡೆನ್ಮಾರ್ಕ್): ಚಿಂತನಶೀಲವಾಗಿ ಸಿದ್ಧಪಡಿಸಲಾಗುವ ಪ್ರಾಯೋಗಿಕ ಆಹಾರ ನೀಡುವ ಮೈಕೆಲಿನ್-ಸ್ಟಾರ್ ರೆಸ್ಟೋರೆಂಟ್‌ಗಳು.
20 ಮೆಡೆಲಿನ್ (ಕೊಲಂಬಿಯಾ): ತನ್ನ ಸಾಂಪ್ರದಾಯಿಕ ಶೈಲಿಯನ್ನು ಬದಿಗಿಟ್ಟು ಇದೀಗ ಹೊಸ ಪಾಕಶಾಲೆಯ ವೈವಿಧ್ಯತೆ ಮತ್ತು ನಾವೀನ್ಯತೆ ಆನಂದಿಸುತ್ತಿದೆ.
ಬೆಂಗಳೂರು ನಗರವು ಕೇವಲ ತಾಂತ್ರಿಕ ಜಗತ್ತಿನ ಮುಂಚೂಣಿಯಲ್ಲಿಲ್ಲ, ಬದಲಾಗಿ ಜಾಗತಿಕ ಆಹಾರ ಪ್ರಿಯರ (Foodies) ನೆಚ್ಚಿನ ತಾಣವಾಗಿ ಹೊರಹೊಮ್ಮುತ್ತಿದೆ ಎಂಬುದಕ್ಕೆ 'ಟೈಮ್ ಔಟ್ 2026'ರ ಈ ವರದಿಯೇ ಅತ್ಯಂತ ದೊಡ್ಡ ಸಾಕ್ಷಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.