ಹಾಲಿನ ಮೊಸರಿನಿಂದಾಗುವ ಆರೋಗ್ಯ ಸಮಸ್ಯೆಗಳಿಗೆ ಈ ಮೊಸರು ಉತ್ತಮ ಪರ್ಯಾಯವಾಗಿದೆ. ನೆನೆಸಿ, ರುಬ್ಬಿ, ಪ್ರೋಬಯಾಟಿಕ್ ಸೇರಿಸಿ ಹುದುಗಲು ಬಿಡುವ ಮೂಲಕ ಮನೆಯಲ್ಲೇ ರುಚಿಕರ ಮತ್ತು ಆರೋಗ್ಯಕರ ಮೊಸರನ್ನು ತಯಾರಿಸುವ ವಿಧಾನವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಮೊಸರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದ್ರೆ ಕೆಲವರಿಗೆ ಮೊಸರು ಸೇವಿಸುತ್ತಿದ್ದಂತೆ ಹೊಟ್ಟೆನೋವು ಸೇರಿದಂತೆ ಕೆಲ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವರು ಆರೋಗ್ಯದ ಕಾರಣದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ದೂರವಿರುತ್ತಾರೆ. ಇಂತಹ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ರೆ ಗೋಡಂಬಿಯಿಂದ ರುಚಿಯಾದ ಮತ್ತು ಆರೋಗ್ಯಕರ ಮೊಸರು ಮಾಡಿಕೊಳ್ಳಬಹುದು.
25
ಗೋಡಂಬಿ ಮೊಸರು ಮಾಡಲು ಬೇಕಾಗುವ ಸಾಮಾಗ್ರಿಗಳು
ಗೋಡಂಬಿ: 1 ಕಪ್, ನಿಂಬೆ ಅಥವಾ ಆಪಲ್ ಸೈಡರ್ ವಿನೆಗರ್: 1 ಅಥವಾ 2 ಟೀ ಸ್ಪೂನ್, ಮೆಪಲ್ ಸಿರಪ್: 1 ಟೀ ಸ್ಪೂನ್, ಚಿಟಿಕೆಯಷ್ಟು ಉಪ್ಪು (ಪ್ರೊಬಯೋಟಿಕ್ ಕ್ಯಾಪ್ಸುಲ್ ಮತ್ತು ಮೊಸರು ಸ್ಟಾರ್ಟರ್ ಕಲ್ಚರ್ ಬೇಕಾಗುತ್ತದೆ)
35
ಗೋಡಂಬಿ ಮೊಸರು ಮಾಡೋದು ಹೇಗೆ?
ಗೋಡಂಬಿಯನ್ನು ಎರಡ್ಮೂರು ಬಾರಿ ತೊಳೆದುಕೊಂಡು ಸ್ವಚ್ಛವಾದ ನೀರಿನಲ್ಲಿ ಎರಡರಿಂದ ಮೂರು ಗಂಟೆ ನೆನೆಸಿಟ್ಟುಕೊಳ್ಳಿ. (ಇಡೀ ರಾತ್ರಿಯವರೆಗೂ ನೆನಸಿಟ್ಟುಕೊಳ್ಳಬಹುದು). ತದನಂತರ ನೀರಿನಿಂದ ಗೋಡಂಬಿ ಬೇರ್ಪಡಿಸಿಕೊಂಡು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
ನುಣ್ಣಗೆ ರುಬ್ಬಿಕೊಂಡು ಗೋಡಂಬಿ ಪೇಸ್ಟ್‌ಗೆ ಮೇಪಲ್ ಸಿರಪ್ ಅಥವಾ ಜೇನುತುಪ್ಪ, ನಿಂಬೆರಸ, ಚಿಟಿಕೆ ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಪೇಸ್ಟ್ ತುಂಬಾ ಗಾಢವಾದ್ರೆ ಸ್ವಲ್ಪ ಪ್ರಮಾಣದಲ್ಲಿ ನೀರು ಸೇರಿಸಿಕೊಳ್ಳಬಹುದು. ಈಗ ಪ್ರೋಬಯಾಟಿಕ್ ಕ್ಯಾಪ್ಸುಲ್ ಅಥವಾ ಸ್ಟಾರ್ಟರ್ ಕಲ್ಚರ್ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಬೌಲ್‌ಗೆ ಶಿಫ್ಟ್ ಮಾಡಿಕೊಳ್ಳಿ. ಈಗ ಬೌಲ್ ಮೇಲ್ಭಾಗಕ್ಕೆ ಬಟ್ಟೆಯನ್ನು ಮುಚ್ಚಿ, ಭಾರವಾದ ಮುಚ್ಚಳವನ್ನಿಟ್ಟು ಸುಮಾರು 8 ರಿಂದ 10 ಗಂಟೆಗಳ ಕಾಲ ಎತ್ತಿಟ್ಟುಕೊಳ್ಳಬೇಕು.
55
ಮೊಸರಿನಿಂದ ಮಜ್ಜಿಗೆಯನ್ನು ಸಹ ಮಾಡಬಹುದ
ಸುಮಾರು 8 ಗಂಟೆಗಳ ಬಳಿಕ ಮುಚ್ಚಳ ತೆಗೆದ್ರೆ ನಿಮಗೆ ಶುದ್ಧವಾದ ಮೊಸರು ಸಿದ್ಧವಾಗುತ್ತದೆ. ಈ ಮೊಸರನ್ನು ನೇರವಾಗಿ ಅಥವಾ ತರಕಾರಿ, ಹಣ್ಣುಗಳ ಜೊತೆ ಸವಿಯಬಹುದು. ಬೇಕಿದ್ರೆ ಈ ಮೊಸರಿನಿಂದ ಮಜ್ಜಿಗೆಯನ್ನು ಸಹ ಮಾಡಿಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.