ಪನೀರ್ ಮಸಾಲಾ ಅಲ್ಲ, ಪನೀರ್ ಹಸಿಯಾಗಿ ಸೇವಿಸಿದರೂ ಇದೆ ಲಾಭ
First Published | May 17, 2021, 5:56 PM ISTಪನೀರ್ ಹೆಚ್ಚಿನ ಜನರು ತಿನ್ನಲು ಇಷ್ಟ ಪಡುತ್ತಾರೆ. ಆದರೆ ಕಚ್ಚಾ / ಹಸಿ ಪನೀರ್ ಸಹ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಕಚ್ಚಾ ಪನೀರ್ ಅನ್ನು ಪ್ರತಿದಿನ ತಿನ್ನುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ಏಕೆಂದರೆ ಪನೀರ್ನಲ್ಲಿ ಪ್ರೋಟೀನ್, ಕೊಬ್ಬು, ಕ್ಯಾಲ್ಸಿಯಂ, ಪ್ರೋಟೀನ್, ರಂಜಕ, ಫೋಲೇಟ್ ಮತ್ತು ಅನೇಕ ಪೋಷಕಾಂಶಗಳಿವೆ. ಆದ್ದರಿಂದ, ಇದರ ಸೇವನೆಯು ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಮಾನಸಿಕ ಒತ್ತಡವನ್ನು ಸಹ ತೆಗೆದುಹಾಕುತ್ತದೆ.