Health Tips: ಫ್ರೋಜನ್ ಆಹಾರ ಬಳಸೋದ್ರಿಂದ ಕಾಡುತ್ತೆ ಗಂಭೀರ ಸಮಸ್ಯೆ

Published : Mar 15, 2023, 07:00 AM IST

ನಮ್ಮಲ್ಲಿ ಹೆಚ್ಚಿನವರು ಮನೆಯಲ್ಲಿ ಅಡುಗೆ ಮಾಡುತ್ತಾರೆ. ಆದರೆ ಸಮಯ ಉಳಿಸಲು ಫ್ರೋಜನ್ ಆಹಾರ ಪದಾರ್ಥಗಳನ್ನು ಬಳಸಲು ಪ್ರಾರಂಭಿಸುತ್ತಾರೆ. ಫ್ರೋಜನ್ ಆಹಾರಗಳು ಅನೇಕ ವಿಷಯಗಳನ್ನು ಒಳಗೊಂಡಿರುತ್ತವೆ, ಕೆಲವೊಮ್ಮೆ ಅವು ಸಿದ್ಧವಾಗಿರುತ್ತವೆ ಮತ್ತು ಕೆಲವೊಮ್ಮೆ ಬೇಯಿಸಿದ ಆಹಾರ ಆಗಿರೋದಿಲ್ಲ. ಈ ಫ್ರೋಜನ್ ಆಹಾರ ಸೇವಿಸೋದ್ರಿಂದ ಆಗುವ ಅನಾನುಕೂಲಗಳನ್ನು ತಿಳಿದುಕೊಳ್ಳೋಣ.

PREV
110
Health Tips: ಫ್ರೋಜನ್ ಆಹಾರ ಬಳಸೋದ್ರಿಂದ ಕಾಡುತ್ತೆ ಗಂಭೀರ ಸಮಸ್ಯೆ

ಇಂದಿನ ವೇಗದ ಜೀವನದಲ್ಲಿ, ಪ್ರತಿಯೊಬ್ಬರೂ ಶಾರ್ಟ್ ಕಟ್ಸ್ ಅಳವಡಿಸಿಕೊಳ್ಳಲು ಬಯಸುತ್ತಾರೆ. ಆದರೊಂದಿಗೆ ಆರೋಗ್ಯವಾಗಿರೋದು ಸಹ ಅಗತ್ಯ. ನಾವು ಮನೆಯಲ್ಲಿ ತಯಾರಿಸಿದ ಆಹಾರ ಬಳಸಿದ್ರೆ ಮಾತ್ರ ಹೆಚ್ಚು ಆರೋಗ್ಯದಿಂದ ಇರಲು ಸಾಧ್ಯ. ಆದರೆ ನಮ್ಮಲ್ಲಿ ಹೆಚ್ಚಿನವರು ಮನೆಯಲ್ಲಿ ಅಡುಗೆ ಮಾಡುತ್ತಾರೆ ಆದರೆ ಸಮಯ ಉಳಿಸಲು ಫ್ರೋಜನ್ ಆಹಾರ (frozen food) ಪದಾರ್ಥಗಳನ್ನು ಖರೀದಿಸುತ್ತಾರೆ. ಫ್ರೋಜನ್ ಆಹಾರಗಳು ತರಕಾರಿಗಳಂತಹ ಅನೇಕ ಆಹಾರಗಳನ್ನು ಒಳಗೊಂಡಿರುತ್ತವೆ. ಕೆಲವೊಮ್ಮೆ ಅವು ಬೇಯಿಸಿದ ವಸ್ತುವಾಗಿರುತ್ತೆ ಮತ್ತು ಕೆಲವೊಮ್ಮೆ ಅವು ಬೆಂದಿರೋದಿಲ್ಲ.

210

ನಾವು ಕೆಲವೊಂದು ಆಹಾರಗಳನ್ನು ನಿಯಮಿತವಾಗಿ ತಿನ್ನಬಾರದು ಎಂದು ನಿಮಗೆ ತಿಳಿದಿದೆಯೇ? ಏಕೆಂದರೆ ಅವು ನಿಮ್ಮ ಆರೋಗ್ಯದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರಬಹುದು. ಫ್ರೋಜನ್ ಆಹಾರಗಳು ಉಪ್ಪು, ಸಕ್ಕರೆ ಮತ್ತು ಟ್ರಾನ್ಸ್ ಕೊಬ್ಬುಗಳನ್ನು (trans fat) ಹೊಂದಿರುತ್ತವೆ, ಇದು ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ. ಆದ್ದರಿಂದ ನೀವು ಎಂದಿಗೂ ಫ್ರೋಜನ್ ಆಹಾರ ಪದಾರ್ಥಗಳನ್ನು ಖರೀದಿಸಬಾರದು.

310

ನೀವು ತಪ್ಪಿಸಲೇಬೇಕಾದ 5 ಫ್ರೋಜನ್ ಆಹಾರಗಳ ಬಗ್ಗೆ ತಿಳಿಯೋಣ :

ಫ್ರೋಜನ್ ಬ್ರೊಕೋಲಿ (frozen broccoli)
ಬ್ರೊಕೋಲಿಯನ್ನು ಆರೋಗ್ಯಕ್ಕೆ ಅತ್ಯುತ್ತಮವಾದ ಆಹಾರ. ಆದರೆ ಫ್ರೋಜನ್ ಬ್ರೊಕೋಲಿ ಅದರ ರುಚಿಯನ್ನು ಕಳೆದುಕೊಳ್ಳುವುದು ಮಾತ್ರವಲ್ಲದೆ ಅದರ ಪೌಷ್ಠಿಕಾಂಶದ ಅಂಶವನ್ನು ಕಡಿಮೆ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನ ಸಿಗೋದಿಲ್ಲ.

410

ಫ್ರೋಜನ್ ಫ್ರೆಂಚ್ ಫ್ರೈಸ್ (Frozen french fries)
ಫ್ರೋಜನ್ ಫ್ರೆಂಚ್ ಫ್ರೈಗಳನ್ನು ಅವುಗಳ ರುಚಿ ಮತ್ತು ಬೇಯಿಸಲು ಸುಲಭವಾದ ಕಾರಣ ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಅವು ಸಾಮಾನ್ಯ ಫ್ರೈಗಳಿಗಿಂತ ಹೆಚ್ಚು ಅನಾರೋಗ್ಯಕರವಾಗಿವೆ. ಏಕೆಂದರೆ ಅವು ಹೆಚ್ಚುವರಿ ಉಪ್ಪು ಮತ್ತು ಎಣ್ಣೆಯನ್ನು ಹೊಂದಿರುತ್ತವೆ. ಆದ್ದರಿಂದ, ಮುಂದಿನ ಬಾರಿ ನೀವು ಫ್ರೈಗಳನ್ನು ತಿನ್ನಬೇಕೆಂದು ಅನಿಸಿದಾಗ, ಫ್ರೋಜನ್ ಫ್ರೈಗಳನ್ನು ಸಂಪೂರ್ಣವಾಗಿ ತಪ್ಪಿಸಿ.
 

510

ಫ್ರೋಜನ್ ಸ್ಟ್ರಾಬೆರಿಗಳು (frozen strawberry)
ಸ್ಟ್ರಾಬೆರಿಗಳು ತುಂಬಾ ಆರೋಗ್ಯಕರವಾಗಿದ್ದರೂ, ನೀವು ಫ್ರೋಜನ್ ಸ್ಟ್ರಾಬೆರಿಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಅವುಗಳಲ್ಲಿ ಸೋಡಿಯಂ ಮತ್ತು ಸಕ್ಕರೆ ಅಧಿಕವಾಗಿರುತ್ತದೆ ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಸಹ ಹೊಂದಿರುತ್ತದೆ. ಇದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಮತ್ತು ಹೃದ್ರೋಗ ಅಥವಾ ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಆರೋಗ್ಯಕರವಾಗಿರಲು ಫ್ರೋಜನ್ ಸ್ಟ್ರಾಬೆರಿ ಬದಲಿಗೆ ತಾಜಾ ಸ್ಟ್ರಾಬೆರಿಗಳನ್ನು ಆರಿಸಿ.

610

ಫ್ರೋಜನ್ ರೆಡಿಮೇಡ್ ಆಹಾರ (frozen ready to eat)
ಸ್ಯಾಂಡ್ ವಿಚ್ ಗಳಂತಹ ಫ್ರೋಜನ್ ರೆಡಿಮೇಡ್ ತಿಂಡಿಗಳು ಆರೋಗ್ಯಕರವಲ್ಲ ಏಕೆಂದರೆ ಅವು ಹೆಚ್ಚಿನ ಕ್ಯಾಲೊರಿಗಳು, ಸೋಡಿಯಂ ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತವೆ. ಬೆಳಗಿನ ಉಪಾಹಾರಕ್ಕಾಗಿ, ಫ್ರೋಜನ್ ಆಹಾರಗಳ ಬದಲು ಬೇಯಿಸಿದ ಮೊಟ್ಟೆಗಳು ಅಥವಾ ಮನೆಯಲ್ಲಿ ತಯಾರಿಸಿದ ಉಪಾಹಾರ ಸೇವಿಸಿ. ಆದರೆ ನೀವು ಅವಸರದಲ್ಲಿದ್ದರೆ, ನೀವು ಹೊರಗೆ ಆರಾಮವಾಗಿ ತಿನ್ನಬಹುದಾದ ಕೆಲವು ಉಪಾಹಾರವನ್ನು ಪ್ಯಾಕ್ ಮಾಡಲು ಪ್ರಯತ್ನಿಸಿ.

710

ಫ್ರೋಜನ್ ಬೇಕರಿ ಐಟಂಗಳು (frozen bakery items)
ಫ್ರೋಜನ್ ಬೇಕರಿ ವಸ್ತುಗಳಾದ ಬಿಸ್ಕತ್ತು, ವಾಫಲ್ಸ್ ಅಥವಾ ಸಿಹಿತಿಂಡಿ ಅತ್ಯಂತ ಅನಾರೋಗ್ಯಕರವಾಗಿರುವುದರಿಂದ ಅವುಗಳನ್ನು ತಪ್ಪಿಸಬೇಕು. ಇತರ ಹೆಪ್ಪುಗಟ್ಟಿದ ಆಹಾರಗಳಂತೆ, ಅವು ಸಾಕಷ್ಟು ಉಪ್ಪು, ಸಕ್ಕರೆ ಮತ್ತು ಕೊಬ್ಬನ್ನು ಸಹ ಹೊಂದಿರುತ್ತವೆ.

810

ಫ್ರೋಜನ್ ಆಹಾರಗಳನ್ನು ಏಕೆ ತಪ್ಪಿಸಬೇಕು?
ರಕ್ತದೊತ್ತಡವನ್ನು ಹೆಚ್ಚಿಸಬಹುದು (high blood pressure)
ಫ್ರೋಜನ್ ಆಹಾರಗಳು ನಿಮ್ಮ ರಕ್ತದೊತ್ತಡ ಹೆಚ್ಚಿಸಬಹುದು. ಏಕೆಂದರೆ ಅವುಗಳಲ್ಲಿ ಸೋಡಿಯಂ ಅಧಿಕವಾಗಿರುತ್ತದೆ. ಅಲ್ಲದೆ, ಹೆಚ್ಚು ಸೋಡಿಯಂ ತಿನ್ನುವುದು ಹೃದ್ರೋಗ ಮತ್ತು ಪಾರ್ಶ್ವವಾಯುವಿನಂತಹ ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು.

910
thyroid

ಸಂರಕ್ಷಕದ ಪ್ರಮಾಣವು ಹೆಚ್ಚಾಗಿದೆ (high preservative)
ಫ್ರೋಜನ್ ಆಹಾರವು ಹೆಚ್ಚು ಕಾಲ ಉಳಿಯುವಂತೆ ಮಾಡಲು, ಸಂರಕ್ಷಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಇವು ಥೈರಾಯ್ಡ್ ಮತ್ತು ರಕ್ತದಿಂದ ಆಮ್ಲಜನಕವನ್ನು ಪಡೆಯುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಸಂರಕ್ಷಕಗಳಿಲ್ಲದ ಆಹಾರ ಪದಾರ್ಥಗಳನ್ನು ಸೇವಿಸಬೇಕು.

1010

ತೂಕ ಹೆಚ್ಚಿಸಬಹುದು (weight gain)
ಫ್ರೋಜನ್ ಆಹಾರಗಳು ನಿಮ್ಮ ತೂಕವನ್ನು ವೇಗವಾಗಿ ಹೆಚ್ಚಿಸುತ್ತವೆ ಏಕೆಂದರೆ ಅವು ಸಾಕಷ್ಟು ಕೊಬ್ಬನ್ನು ಹೊಂದಿರುತ್ತವೆ. ಈ ಆಹಾರಗಳಲ್ಲಿ ಹೆಚ್ಚಿನ ಕ್ಯಾಲೊರಿಗಳಿವೆ. ಹಾಗಾಗಿ ತೂಕ ಇಳಿಸಲು ಇಷ್ಟಪಡುವವರು ಖಂಡಿತವಾಗಿಯೂ ಇಂತಹ ಆಹಾರಗಳನ್ನು ಅವಾಯ್ಡ್ ಮಾಡಿದ್ರೆ ಬೆಸ್ಟ್.

Read more Photos on
click me!

Recommended Stories