ಈ ಬಾಸ್ಮುತಿ ಅಕ್ಕಿಗೆ ಯಾಕೆ ಅಷ್ಟೊಂದು ದುಡ್ಡು?

First Published | Mar 8, 2023, 5:35 PM IST

ದುಬಾರಿ ಅಕ್ಕಿಯ ಬಗ್ಗೆ ಮಾತನಾಡುವಾಗಲೆಲ್ಲಾ, ಬಾಸ್ಮತಿ ಅಕ್ಕಿಯ ಹೆಸರನ್ನು ಖಂಡಿತವಾಗಿಯೂ ತೆಗೆದುಕೊಳ್ಳಲಾಗುತ್ತೆ. ಅದರ ಸುಗಂಧದ ಜೊತೆಗೆ, ಅದರ ಬೆಲೆಯೂ ಅದ್ಭುತವಾಗಿರುತ್ತೆ. ಈ ಅಕ್ಕಿ ಅಷ್ಟೊಂದು ದುಬಾರಿಯಾಗಿರೋದಕ್ಕೆ ಕಾರಣ ನಿಮಗೆ ತಿಳಿದಿದ್ಯಾ? ಅದರ ಬಗ್ಗೆ ತಿಳಿಯಲು ಮುಂದೆ ಓದಿ.  

ಭಾರತದಲ್ಲಿ ಅಕ್ಕಿಯ (Rice) ಬಳಕೆ ತುಂಬಾ ಹೆಚ್ಚು. ದೇಶದ ಪ್ರತಿಯೊಂದು ಪ್ರಾಂತ್ಯದಲ್ಲಿ, ಅಕ್ಕಿಯಿಂದ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಲಾಗುತ್ತೆ. ಭಾರತದಲ್ಲಿ ವಿವಿಧ ರೀತಿಯ ಅಕ್ಕಿ ವೆರೈಟಿಸ್ ಲಭ್ಯವಿದೆ, ಆದರೆ ಬಾಸ್ಮತಿ ಬೇರೆಯೇ ಆಗಿದೆ. ಭಾರತವು ಬಾಸ್ಮತಿ ಅಕ್ಕಿಯ ಅತಿದೊಡ್ಡ ಎಕ್ಸ್ಪೋರ್ಟ್ ರಾಷ್ಟ್ರ. ಈಗ ಈ ಅಕ್ಕಿಯ ವಿವಿಧ  ವರೈಟಿಸ್ ಸಹ ಹೊರಹೊಮ್ಮಿದೆ. ಭಾರತದಿಂದ ಅಕ್ಕಿಯನ್ನು ಯುರೋಪ್, ಮಧ್ಯಪ್ರಾಚ್ಯ, ಅಮೆರಿಕ ಇತ್ಯಾದಿಗಳಿಗೆ ಕಳುಹಿಸಲಾಗುತ್ತೆ . ಬಾಸ್ಮತಿ ಅಕ್ಕಿ ತುಂಬಾ ಒಳ್ಳೆಯದು, ಆದರೆ ಇದು ತುಂಬಾ ದುಬಾರಿ. ಜನರು ಸಾಮಾನ್ಯವಾಗಿ ಇದನ್ನು ಪ್ರತಿದಿನ ಬಳಸದಿರಲು ಇದು ಕಾರಣ. ಆದರೆ ಈ ಅಕ್ಕಿ ಯಾಕೆ ದುಬಾರಿ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? 

ಬಾಸ್ಮತಿ(Basmati) ದುಬಾರಿಯಾಗಲು ಒಂದಲ್ಲ ಎರಡಲ್ಲ, ಐದು ಕಾರಣಗಳಿವೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.

ಬಾಸ್ಮತಿ ಗಾತ್ರದಲ್ಲಿ ತುಂಬಾ ದೊಡ್ಡದಾಗಿದೆ
ಮೊದಲ ಮತ್ತು ದೊಡ್ಡ ಕಾರಣವೆಂದರೆ ಬಾಸ್ಮತಿ ಅಕ್ಕಿಯ ಗಾತ್ರವು ಸಾಮಾನ್ಯ ಅಕ್ಕಿಗಿಂತ ತುಂಬಾ ದೊಡ್ಡ. ಒಂದು ಧಾನ್ಯವು 8.44 ಮಿಮೀ ಉದ್ದವಿರಬಹುದು. ಇದರ ಪರಿಪೂರ್ಣ ಗಾತ್ರವು ಬೇರೆ ಯಾವುದೇ ರೀತಿಯ ಅಕ್ಕಿಯಲ್ಲಿ ಕಂಡುಬರೋದಿಲ್ಲ. ಬಿರಿಯಾನಿ, ಪುಲಾವ್ ಇತ್ಯಾದಿಗಳನ್ನು ತಯಾರಿಸುವಾಗ ಬಾಸ್ಮತಿ ಅಕ್ಕಿಯನ್ನು ಬಳಸಲಾಗುತ್ತೆ. 

Tap to resize

ಈ ಏಜಿಂಗ್ ಪ್ರೋಸೆಸ್ ಗಾಗಿ(Aging process) ಕಂಪನಿಗಳು ನಿರ್ದಿಷ್ಟ ಗೋದಾಮುಗಳನ್ನು ನಿರ್ಮಿಸಬೇಕಾಗಿದೆ, ಇದರಿಂದ ಅಕ್ಕಿ ಏಜಿಂಗ್ ಡಿಫೆಕ್ಟ್ಸ್ ಇಲ್ಲದೆ ಮಾಡಬಹುದು. ಇದಕ್ಕಾಗಿ, ತಾಪಮಾನವನ್ನು ಸಹ ಹೊಂದಿಸಬೇಕಾಗುತ್ತೆ. ಇದೆಲ್ಲಾ ಮಾಡೋದಕ್ಕೆ ಹೆಚ್ಚು ಸಮಯ ಮತ್ತು ಖರ್ಚು ಇರೋದರಿಂದ, , ಬಾಸ್ಮತಿಯ ಬೆಲೆ ಸಾಕಷ್ಟು ಹೆಚ್ಚಾಗುತ್ತೆ.  

ಬಾಸ್ಮತಿಯ ಅದ್ಭುತ ಪರಿಮಳ (Good smell)
ಬಾಸ್ಮತಿ ಅಕ್ಕಿಯನ್ನು ಬೇಯಿಸಿದಾಗ, ಅದರ ಪರಿಮಳವು ತುಂಬಾ ಸೂಪರ್ ಆಗಿರುತ್ತೆ. ಜೊತೆಗೆ ಬೇಯಿಸಿದ ನಂತರ ಧಾನ್ಯಗಳು ಅರಳುತ್ತವೆ. ಬಾಸ್ಮತಿ ಅಕ್ಕಿಯಲ್ಲಿ '2-ಅಸಿಟೈಲ್-1-ಪೈರೋಲಿನ್' ಎಂಬ ಕಾಂಪೌಂಡ್ ಇದೆ, ಇದರಿಂದಾಗಿ ಇದು ಪರಿಮಳಯುಕ್ತವಾಗಿರುತ್ತೆ. ಅಡುಗೆಯ ನಂತರ ಬಾಸ್ಮತಿಯ ಸೈಜ್ ಎರಡು ಪಟ್ಟು ಹೆಚ್ಚಾಗುತ್ತೆ. ಅದಕ್ಕಾಗಿಯೇ ಅದರ ಬೇಡಿಕೆ ತುಂಬಾ ಹೆಚ್ಚಾಗಿದೆ.

ಬಾಸ್ಮತಿಯಲ್ಲಿ ಪೌಷ್ಠಿಕಾಂಶದ(Nutrient) ಮಟ್ಟ ಹೆಚ್ಚು  
ಪೌಷ್ಠಿಕಾಂಶದ ಮಟ್ಟಕ್ಕೆ ಬಂದಾಗಲೆಲ್ಲಾ, ಬಾಸ್ಮತಿ ಅಕ್ಕಿ ಸಾಕಷ್ಟು ಪೌಷ್ಠಿಕಾಂಶದಿಂದ ಕೂಡಿದೆ. ಬಾಸ್ಮತಿ ಅಕ್ಕಿ ದುಬಾರಿಯಾಗಿರಬಹುದು, ಆದರೆ ಇದು ಆರೋಗ್ಯಕರ ಆಯ್ಕೆಯಾಗಿದೆ. ಬಾಸ್ಮತಿ ಅಕ್ಕಿ ಕಡಿಮೆ ಗ್ಲೈಸೆಮಿಕ್ ಮಟ್ಟವನ್ನು ಹೊಂದಿದೆ. ಮಧುಮೇಹ ರೋಗಿಗಳಿಗೆ ಇದು ಉತ್ತಮ ಆಯ್ಕೆ ಎಂದು ಪರಿಗಣಿಸಲು ಇದು ಕಾರಣವಾಗಿದೆ, ಇದರಿಂದಾಗಿ ಅವರ ಇನ್ಸುಲಿನ್ ಮಟ್ಟವು ಹೆಚ್ಚಾಗೋದಿಲ್ಲ.  

ಇದರಲ್ಲಿ ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೊರಿಗಳು ಸಹ ಕಡಿಮೆ. ಬಾಸ್ಮತಿ ಅಕ್ಕಿಯನ್ನು ತಿನ್ನುವ ಮೂಲಕ ಶಕ್ತಿಯ ಮಟ್ಟ ಹೆಚ್ಚಾಗುತ್ತೆ. ಯಾರಿಗಾದರೂ ಕೊಲೆಸ್ಟ್ರಾಲ್(Cholestrol) ಸಮಸ್ಯೆ ಇದ್ದರೆ, ಅವರಿಗೆ ಈ ಅಕ್ಕಿಯನ್ನು ತಿನ್ನಲು ಸಹ ಸಲಹೆ ನೀಡಲಾಗುತ್ತೆ. ಅದಕ್ಕಾಗಿಯೇ ಇದನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತೆ . 

ಬಾಸ್ಮತಿ ಅಕ್ಕಿ ಬೆಳೆಯೋದು ಸುಲಭವಲ್ಲ 
ಬಾಸ್ಮತಿ ಅಕ್ಕಿಯನ್ನು ಬೆಳೆಸುವ ವಿಷಯಕ್ಕೆ ಬಂದಾಗ, ಅದನ್ನು ಬೆಳೆಸೋದು ಅಷ್ಟು ಸುಲಭವಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ಇದು ಎಲ್ಲೆಡೆ ಬೆಳೆಯಲು ಸಾಧ್ಯವಿಲ್ಲ. ಇದಕ್ಕೆ ಸರಿಯಾದ ಹವಾಮಾನದ ಅಗತ್ಯವಿರುತ್ತೆ ಮತ್ತು ಗಾಳಿಯಿಂದಾಗಿ ಅದರ ಸಸ್ಯಗಳು ಹಾನಿಗೊಳಗಾಗಬಹುದು. ಬಾಸ್ಮತಿ ಅಕ್ಕಿಯ ಸಸ್ಯಗಳು ಸಾಮಾನ್ಯ ಅಕ್ಕಿಗಿಂತ ಎತ್ತರವಾಗಿರುತ್ತವೆ, ಆದ್ದರಿಂದ ಅವುಗಳನ್ನು ಸಹ ನೋಡಿಕೊಳ್ಳಬೇಕು.  ಈ ಎಲ್ಲಾ ಕಾರಣಗಳಿಂದಾಗಿ, ಬಾಸ್ಮತಿ ಅಕ್ಕಿಯ ಬೆಲೆ ಹೆಚ್ಚು(Costly).

Latest Videos

click me!