ಆಷಾಢ ಏಕಾದಶಿಗೆ ಸಬ್ಬಕ್ಕಿ ಕಿಚಡಿ ಮಾಡ್ತಿದ್ದೀರಾ? ಹಾಗಾದ್ರೆ ಹೀಗೆ ಮಾಡಿ, ಅಂಟಿಕೊಳ್ಳಲ್ಲ, ರುಚಿಯಾಗೂ ಇರುತ್ತೆ!

Published : Jul 06, 2025, 12:18 PM IST

ಇಂದು ಇಲ್ಲಿ ಸಬ್ಬಕ್ಕಿ ಸ್ವಲ್ಪವೂ ಅಂಟದಂತೆ ಸುಲಭವಾಗಿ ರುಚಿಕರವಾದ ಕಿಚಡಿ ಮಾಡುವುದು ಹೇಗೆಂದು ನೋಡೋಣ...

PREV
15
ರುಚಿಕರವಾದ ಕಿಚಡಿ

ದೇವಶಯನಿ ಏಕಾದಶಿಯನ್ನು ಆಷಾಢ ಏಕಾದಶಿ ಎಂದೂ ಕರೆಯಲಾಗುತ್ತದೆ. ಏಕೆಂದರೆ ಈ ಏಕಾದಶಿಯು ಆಷಾಢ ಶುಕ್ಲ ಪಕ್ಷದಲ್ಲಿ ಬರುತ್ತದೆ. ಆಷಾಢ ಏಕಾದಶಿಗೆ ಸನಾತನ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ. ಇದನ್ನು ಚಾತುರ್ಮಾಸ ಎಂದೂ ಕರೆಯಲಾಗುತ್ತದೆ. ಈ ವರ್ಷ ಆಷಾಢ ಏಕಾದಶಿಯನ್ನು ಜುಲೈ 6 ರಂದು ಆಚರಿಸಲಾಗುತ್ತಿದ್ದು, ಈ ದಿನದಂದು ಉಪವಾಸ ಮಾಡುವುದರಿಂದ ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆ ಮತ್ತು ಪಾಪಗಳು ನಾಶವಾಗುತ್ತವೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಭಕ್ತರು ಹಣ್ಣುಗಳನ್ನು ಮಾತ್ರ ತಿನ್ನುತ್ತಾರೆ. ಸಬ್ಬಕ್ಕಿಯನ್ನು ಸಹ ಕೀರು, ಕಿಚಡಿಯಾಗಿ ಸೇವಿಸಲಾಗುತ್ತದೆ. ಹಾಗಾಗಿ ಇಂದು ಇಲ್ಲಿ ಸಬ್ಬಕ್ಕಿ ಸ್ವಲ್ಪವೂ ಅಂಟದಂತೆ ಸುಲಭವಾಗಿ ರುಚಿಕರವಾದ ಕಿಚಡಿ ಮಾಡುವುದು ಹೇಗೆಂದು ನೋಡೋಣ...

25
ಸಬ್ಬಕ್ಕಿ ಕಿಚಡಿ ಮಾಡಲು ಬೇಕಾಗುವ ಪದಾರ್ಥಗಳು

ಸಬ್ಬಕ್ಕಿ-1 ಕಪ್

ಶೇಂಗಾಬೀಜ-ಅರ್ಧ ಕಪ್

ಸಕ್ಕರೆ-ರುಚಿಗೆ ತಕ್ಕಷ್ಟು

ಉಪ್ಪು-ರುಚಿಗೆ ತಕ್ಕಷ್ಟು

ಜೀರಿಗೆ- ಒಂದು ಟೀ ಸ್ಪೂನ್

ತುಪ್ಪ-ಒಗ್ಗರಣೆಗೆ

ಕರಿಬೇವು-ಒಂದು ಎಸಳು

ಶುಂಠಿ-ಒಂದು ಇಂಚು

ಹಸಿರುಮೆಣಸಿನಕಾಯಿ-ಎರಡು

ಬೆಂದ, ಕತ್ತರಿಸಿಟ್ಟುಕೊಂಡ ಆಲುಗಡ್ಡೆ ಒಂದು

ನಿಂಬೆಹಣ್ಣು, ಕೊತ್ತಂಬರಿ-ಅಗತ್ಯಕ್ಕೆ ತಕ್ಕಂತೆ

35
ಮಾಡುವ ವಿಧಾನ

*ಮೊದಲಿಗೆ ಸಬ್ಬಕ್ಕಿ ಕೊಳೆ ಹೋಗುವ ಹಾಗೆ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.

*ಆ ನಂತರ ಸಬ್ಬಕ್ಕಿಯ ಗುಣಮಟ್ಟ ನೋಡಿಕೊಂಡು ನೀವು ನೀರಿನಲ್ಲಿ ನೆನೆಸಿಡಬೇಕಾಗುತ್ತದೆ.

*ಹಾಗೆಯೇ 1 ಕಪ್ ಸಬ್ಬಕ್ಕಿ ತೆಗೆದುಕೊಂಡರೆ 3/4 ನೀರಿನಲ್ಲಿ ನೆನೆಸಬೇಕಾಗುತ್ತದೆ. ನಂತರ ಒಂದು ಡಬ್ಬಿಯಲ್ಲಿ ಮುಚ್ಚಳ ಮುಚ್ಚಿಡಿ.

* ಸ್ವಲ್ಪ ಸಮಯದ ನಂತರ ನೆನಸಿಟ್ಟ ಸಬ್ಬಕ್ಕಿ ಸ್ವಲ್ಪವೂ ನೀರಿರದೆ ಬಿಡಿಬಿಡಿಯಾಗಿ ಬಂದಿರುತ್ತದೆ(ಮತ್ತೆ ನೀರನ್ನು ಸೇರಿಸಬೇಡಿ)

45
ತರಿತರಿಯಾಗಿ ರುಬ್ಬಿಕೊಳ್ಳಿ

ನಂತರ ಒಂದು ಪ್ಯಾನ್‌ ತೆಗೆದುಕೊಳ್ಳಿ. ಶೇಂಗಾಬೀಜ ತೆಗೆದುಕೊಂಡು ಚೆನ್ನಾಗಿ ಹುರಿಯಿರಿ. ಇದು ತಣ್ಣಗಾದ ಮೇಲೆ ನುಣ್ಣಗೆ ರುಬ್ಬದೆ ತರಿತರಿಯಾಗಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಪುಡಿಯನ್ನು ನೆನಸಿಟ್ಟ ಸಬ್ಬಕ್ಕಿಗೆ ಸೇರಿಸಿ, ಸ್ವಲ್ಪ ಸಕ್ಕರೆ, ಉಪ್ಪು ಸಹ ಸೇರಿಸಿ.

55
ರುಚಿಕರವಾದ ಕಿಚಡಿ ರೆಡಿ

ಒಗ್ಗರಣೆ ಹಾಕಲು ಮತ್ತೊಂದು ಪ್ಯಾನ್ ತೆಗೆದುಕೊಂಡು ಇದಕ್ಕೆ ತುಪ್ಪ ಹಾಕಿ. ಬಿಸಿಯಾದ ಮೇಲೆ ಜೀರಿಗೆ, ಕರಿಬೇವು, ಕಟ್ ಮಾಡಿಟ್ಟುಕೊಂಡ ಶುಂಠಿ, ಹಸಿರುಮೆಣಸಿನಕಾಯಿ, ಆಲುಗಡ್ಡೆ ತುಂಡು ಹಾಕಿ ಫ್ರೈ ಮಾಡಿಕೊಂಡು ಇದಕ್ಕೆ ಸಬ್ಬಕ್ಕಿ ಮಿಶ್ರಣವನ್ನು ಸೇರಿಸಿ. ಕೊನೆಯಲ್ಲಿ ನಿಂಬೆರಸ ಸೇರಿಸಿ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ. ರುಚಿಕರವಾದ ಕಿಚಡಿ ರೆಡಿಯಾಗುತ್ತದೆ.

Read more Photos on
click me!

Recommended Stories