ಬೆಂಗಳೂರು ಶೈಲಿಯಲ್ಲಿ ರುಚಿಯಾದ ಉಪ್ಪಿಟ್ಟು ತಯಾರಿಸುವ ವಿಧಾನ

Published : Jul 06, 2025, 11:22 AM IST

Three secrets to making delicious: ಬೆಂಗಳೂರಿನ ವಿಶೇಷ ಉಪ್ಪಿಟ್ಟು ತಯಾರಿಕೆಯಲ್ಲಿ ಮೂರು ರಹಸ್ಯ: ಪದಾರ್ಥಗಳ ಬಳಕೆ. ಈ ಪದಾರ್ಥಗಳೇ ಉಪ್ಪಿಟ್ಟಿಗೆ ವಿಶಿಷ್ಟ ರುಚಿ ನೀಡುತ್ತವೆ. ಆ ಮೂರು ವಿಶೇಷ ಪದಾರ್ಥ ಸೇರಿಸಿ ಉಪ್ಪಿಟ್ಟು ತಯಾರಿಸುವ ವಿಧಾನ.

PREV
110
ಬೆಂಗಳೂರು ಶೈಲಿಯಲ್ಲಿ ಉಪ್ಪಿಟ್ಟು

ಬೆಳಗಿನ ತಿಂಡಿ ಉಪ್ಪಿಟ್ಟು ಅಂದ್ರೆ ಬಹುತೇಕರು ಮುಖ ಸಿಂಡರಿಸಿಕೊಳ್ಳುತ್ತಾರೆ. ಬೆಂಗಳೂರಿನ ಶೈಲಿಯಲ್ಲಿ ಉಪ್ಪಿಟ್ಟು ತಯಾರಿಸಿದ್ರೆ ಇಷ್ಟವಾಗದವರಿಗೂ ಉಪ್ಪಿಟ್ಟು ಇಷ್ಟವಾಗುತ್ತದೆ. ಬೆಂಗಳೂರಿನ ಶೈಲಿಯಲ್ಲಿ ಉಪ್ಪಿಟ್ಟು ತಯಾರಿಸೋದು ಹೇಗೆ ಅಂತ ನೋಡೋಣ ಬನ್ನಿ.

210
ಮೂರು ವಿಶೇಷ ಪದಾರ್ಥ

ಬೆಂಗಳೂರು ಅಥವಾ ಕರ್ನಾಟಕದ ದಕ್ಷಿಣ ಭಾಗದಲ್ಲಿ ಉಪ್ಪಿಟ್ಟು ಮಾಡುವಾಗ ಮೂರು ವಿಶೇಷ ಪದಾರ್ಥಗಳನ್ನು ಸೇರಿಸೋದನ್ನು ಎಂದಿಗೂ ಮರೆಯಲ್ಲ. ಈ ಮೂರು ಪದಾರ್ಥಗಳಿಂದಲೇ ಉಪ್ಪಿಟ್ಟು ವಿಶೇಷ ರುಚಿಯನ್ನು ಪಡೆದುಕೊಳ್ಳುತ್ತದೆ. ಆ ಮೂರು ಪದಾರ್ಥಗಳು ಏನು ಎಂಬುದನ್ನು ನೋಡೋಣ ಬನ್ನಿ.

410
ಇನ್ನಿತರ ಸಾಮಾಗ್ರಿಗಳು

ಚಿರೋಟಿ ರವೆ: 250 ಗ್ರಾಂ, ಹಸಿಮೆಣಸಿನಕಾಯಿ: 4, ಈರುಳ್ಳಿ: 1 (ಮಧ್ಯಮ ಗಾತ್ರದ್ದು), ಟೊಮೆಟೋ: 1, ಹುಣಸೆ ರಸ: 2 ಟೀ ಸ್ಪೂನ್, ಸಾಸವೆ-ಜೀರಿಗೆ: 1 ಟೀ ಸ್ಪೂನ್, ಕಡಲೆಬೇಳೆ: 1 ಟೀ ಸ್ಪೂನ್, ಕಡಲೆಬೀಜ (ಶೇಂಗಾ): 1 ಟೀ ಸ್ಪೂನ್, ಉದ್ದಿನಬೇಳೆ: 1 ಟೀ ಸ್ಪೂನ್, ಎಣ್ಣೆ: 4 ಟೀ ಸ್ಪೂನ್, ಕರೀಬೇವು: 6 ರಿಂದ 10 ಎಲೆ, ಕೋತಂಬರಿ ಸೊಪ್ಪು, ಉಪ್ಪು ರುಚಿಗೆ ತಕ್ಕಷ್ಟು (ಬೇಕಿದ್ರೆ ಸಕ್ಕರೆ: 1 ಟೀ ಸ್ಪೂನ್)

510
ಉಪ್ಪಿಟ್ಟು ಮಾಡುವ ವಿಧಾನ

ಮೊದಲಿಗೆ ಕ್ಯಾರಟ್ ಮತ್ತು ಬೀನ್ಸ್ ತೊಳೆದುಕೊಂಡು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ನಂತರ ಪಾತ್ರೆಯೊಂದನ್ನು ಒಲೆ ಮೇಲೆ ಇರಿಸಿಕೊಂಡು ಒಂದು ಗ್ಲಾಸ್ ನೀರಿನಲ್ಲಿ ಕ್ಯಾರಟ್, ಬೀನ್ಸ್ ಮತ್ತು ಹಸಿ ಬಟಾಣಿಯನ್ನು 5 ನಿಮಿಷ ಬೇಯಿಸಿಕೊಳ್ಳಿ. ನಂತರ ತರಕಾರಿಯನ್ನು ತೆಗೆದು ಎತ್ತಿಟ್ಟುಕೊಳ್ಳಿ. ತರಕಾರಿ ಬೇಯಿಸಿದ ನೀರು ಚೆಲ್ಲದೇ ತೆಗದಿಟ್ಟುಕೊಳ್ಳಿ.

610
ಮಧ್ಯಮ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ

ಈಗ ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೆಟೋ, ಕೋತಂಬರಿ ಸೊಪ್ಪು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಈಗ ಕಡಿಮೆ ಉರಿಯಲ್ಲಿ ಚಿರೋಟಿ ರವೆಯನ್ನು 5 ನಿಮಿಷ ಹುರಿದುಕೊಳ್ಳಬೇಕು. ಈಗ ಒಲೆ ಮೇಲೆ ದೊಡ್ಡದಾದ ಬಾಣಲೆ ಇರಿಸಿಕೊಳ್ಳಿ. ಉಪ್ಪಿಟ್ಟು ರೆಡಿಯಾಗುವರೆಗೂ ಒಲೆ ಮೀಡಿಯಂ ಫ್ಲೇಮ್‌ನಲ್ಲಿರಿಸಿಕೊಳ್ಳಬೇಕು. ಇಲ್ಲವಾದ್ರೆ ರುಚಿ ಕೆಡುತ್ತದೆ.

710
ಒಗ್ಗರಣೆ

ಬಾಣಲೆಗೆ ಎಣ್ಣೆ ಹಾಕಿಕೊಳ್ಳಬೇಕು. ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸವೆ-ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ಕಡಲೆ ಬೀಜ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಆನಂತರ ಈರುಳ್ಳಿ ಸೇರಿಸಿಕೊಂಡು ಹಸಿ ವಾಸನೆ ಹೋಗುವರೆಗೂ ಬೇಯಿಸಿಕೊಳ್ಳಬೇಕು. ಆ ಬಳಿಕ ಹಸಿಮೆಣಸಿನಕಾಯಿ, ಕರೀಬೇವು ಸೇರಿಸಿಕೊಳ್ಳಿ. ತದನಂತರ ಬೇಯಿಸಿಕೊಂಡಿರುವ ಕ್ಯಾರಟ್, ಬೀನ್ಸ್, ಬಟಾಣಿ ಸೇರಿಸಿಕೊಂಡು ಎಣ್ಣೆಯಲ್ಲಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಿ.

810
ಬೇಕಿದ್ದರೆ ಸಕ್ಕರೆ ಹಾಕಿಕೊಳ್ಳಿ

ತದನಂತರ ಇದಕ್ಕೆ ಹುಣಸೆ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ. ಈ ಸಮಯದಲ್ಲಿ ಬೇಕಿದ್ರೆ ಸಕ್ಕರೆ ಸೇರಿಸಿಕೊಳ್ಳಬೇಕು. ಈಗ ತರಕಾರಿ ಬೇಯಿಸಿಕೊಂಡಿರುವ ನೀರು ಸೇರಿಸಬೇಕು. ಇದರ ಜೊತೆಯಲ್ಲಿ ರವೆ ಪ್ರಮಾಣ ನೋಡಿಕೊಂಡು ಹೆಚ್ಚವರಿಯಾಗಿ ನೀರು ಸೇರಿಸಿಕೊಳ್ಳಬೇಕು.

910
ಕೊನೆಯಲ್ಲಿ ಸ್ಪಲ್ಪ ಕೋತಂಬರಿ ಸೊಪ್ಪು

ನೀರು ಕುದಿಯಲು ಆರಂಭಿಸುತ್ತಿದ್ದಂತೆ ಒಲೆ ಫ್ಲೇಮ್ ಕಡಿಮೆ ಮಾಡಿಕೊಂಡು ಹುರಿದಿಟ್ಟುಕೊಂಡಿರುವ ರವೆ ಸೇರಿಸಿಕೊಂಡು ಚಮಚದಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ. 

1010
ರುಚಿಯಾದ ಬೆಂಗಳೂರು ಶೈಲಿಯ ಉಪ್ಪಿಟ್ಟು

ಐದು ನಿಮಿಷದ ಬಳಿಕ ಮುಚ್ಚಳ ತೆಗೆದು ಕೋತಂಬರಿ ಸೊಪ್ಪು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ ಎರಡು ನಿಮಿಷ ಬೇಯಿಸಿದ್ರೆ ಸವಿಯಲು ರುಚಿಯಾದ ಬೆಂಗಳೂರು ಶೈಲಿಯ ಉಪ್ಪಿಟ್ಟು ರೆಡಿಯಾಗುತ್ತದೆ.

Read more Photos on
click me!

Recommended Stories