ಆಂಟಿಆಕ್ಸಿಡೆಂಟ್‌ಗಳು ತುಂಬಾ ಇವೆ: ಡಾರ್ಕ್ ಚಾಕೊಲೇಟ್‌ನಲ್ಲಿ ಆಂಟಿಆಕ್ಸಿಡೆಂಟ್‌ಗಳು, ಮುಖ್ಯವಾಗಿ ಎಪಿಕಟೆಚಿನ್ ಮತ್ತು ಕ್ಯಾಟೆಚಿನ್‌ಗಳು ಸಮೃದ್ಧವಾಗಿವೆ. ಇವು ಫ್ರೀ ರಾಡಿಕಲ್ಸ್‌ಗಳನ್ನು ತಟಸ್ಥಗೊಳಿಸುವ ಮೂಲಕ ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತವೆ. ಕಣಗಳನ್ನು ಹಾನಿಯಿಂದ ರಕ್ಷಿಸುತ್ತವೆ. ಹೃದ್ರೋಗಗಳು ಮತ್ತು ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಡಾರ್ಕ್ ಚಾಕೊಲೇಟ್‌ನಲ್ಲಿ ಪೋಷಕಾಂಶಗಳು: ಡಾರ್ಕ್ ಚಾಕೊಲೇಟ್‌ನಲ್ಲಿ ಐರನ್, ಮೆಗ್ನೀಸಿಯಮ್, ಕಾಪರ್, ಮ್ಯಾಂಗನೀಸ್ ಮತ್ತು ಫಾಸ್ಫರಸ್‌ನಂತಹ ಖನಿಜಗಳಿವೆ. ಈ ಖನಿಜಗಳು ರೋಗನಿರೋಧಕ ಶಕ್ತಿ, ಎಲುಬು ಮತ್ತು ಹಲ್ಲುಗಳ ಆರೋಗ್ಯಕ್ಕೆ ಮತ್ತು ಒಳ್ಳೆಯ ನಿದ್ರೆಗೆ ಸಹಾಯ ಮಾಡುತ್ತವೆ ಅಂತ ಕ್ಲೀವ್‌ಲ್ಯಾಂಡ್ ಕ್ಲಿನಿಕ್ ಆನ್‌ಲೈನ್‌ನಲ್ಲಿ ಪ್ರಕಟವಾದ ಅಧ್ಯಯನ ಹೇಳುತ್ತದೆ.