ಮನೆಯಲ್ಲಿ ಫ್ರಿಡ್ಜ್ ಇದೆಯಾ? ಈ 8 ತಪ್ಪುಗಳನ್ನ ಮಾಡಬೇಡಿ!

Published : Jan 28, 2025, 11:44 PM IST

 ಫ್ರಿಡ್ಜ್ ಇಲ್ಲದ ಕಾಲದಲ್ಲಿ, ಎಲ್ಲವನ್ನೂ ಹೊರಗೆ ರೂಮ್ ಟೆಂಪರೇಚರ್‌ನಲ್ಲಿ ಇಡುತ್ತಿದ್ದರು, ಮತ್ತು ಅವು ಬೇಗನೆ ಹಾಳಾಗುತ್ತಿರಲಿಲ್ಲ. ಆದರೆ ಫ್ರಿಡ್ಜ್ ಬಂದಮೇಲೆ, ಎಲ್ಲವನ್ನೂ ಅದರಲ್ಲಿಟ್ಟುಬಿಡುತ್ತೇವೆ. ಹಣ್ಣು, ತರಕಾರಿ, ಮಸಾಲೆ, ಸಾಸ್ ಎಲ್ಲವೂ ಫ್ರಿಡ್ಜ್‌ನಲ್ಲಿ. ಆದರೆ ಕೆಲವು ವಸ್ತುಗಳನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅವುಗಳ ರುಚಿ ಹಾಳಾಗುವುದಲ್ಲದೆ, ಆರೋಗ್ಯಕ್ಕೂ ಹಾನಿಕಾರಕ. ಹಾಗಾದರೆ ಫ್ರಿಡ್ಜ್‌ನಲ್ಲಿ ಇಡಬಾರದ 8 ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ...

PREV
18
ಮನೆಯಲ್ಲಿ ಫ್ರಿಡ್ಜ್ ಇದೆಯಾ? ಈ 8 ತಪ್ಪುಗಳನ್ನ ಮಾಡಬೇಡಿ!
ಬ್ರೆಡ್

ಬ್ರೆಡ್ ಫ್ರಿಡ್ಜ್‌ನಲ್ಲಿಟ್ಟರೆ ಒಣಗಿ ಹಳಸುತ್ತದೆ. ತುಂಬಾ ಹೊತ್ತು ಇಟ್ಟರೆ ರಬ್ಬರ್ ತರ ಆಗುತ್ತದೆ. ಅದನ್ನು ತಿಂದರೆ ಆರೋಗ್ಯಕ್ಕಿಂತ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಫ್ರಿಡ್ಜ್‌ನಲ್ಲಿ ಬ್ರೆಡ್ ಇಡದಿರುವುದು ಒಳ್ಳೆಯದು.

28
ಕಾಫಿ ಪುಡಿ

ಕಾಫಿ ಪುಡಿಯನ್ನು ತಂಪಾದ, ಒಣ ಜಾಗದಲ್ಲಿಟ್ಟರೆ ಹೆಚ್ಚು ಕಾಲ ಫ್ರೆಶ್ ಆಗಿರುತ್ತದೆ. ಫ್ರಿಡ್ಜ್ ತುಂಬಾ ತಂಪಾಗಿರುವುದರಿಂದ ಕಾಫಿ ಪುಡಿ ಹಾಳಾಗುತ್ತದೆ.

38
ಬದನೆಕಾಯಿ

ಬದನೆಕಾಯಿ ತಾಪಮಾನಕ್ಕೆ ಸೂಕ್ಷ್ಮ. ಫ್ರಿಡ್ಜ್‌ನಲ್ಲಿಟ್ಟರೆ ಅದರ ರುಚಿ ಮತ್ತು ಹದ ಹಾಳಾಗುತ್ತದೆ. ರೂಮ್ ಟೆಂಪರೇಚರ್‌ನಲ್ಲಿ ಇಡಬೇಕು.

48
ಜೇನುತುಪ್ಪ

ಜೇನುತುಪ್ಪವನ್ನು ಫ್ರಿಡ್ಜ್‌ನಲ್ಲಿಟ್ಟರೆ ಗಟ್ಟಿಯಾಗುತ್ತದೆ. ರೂಮ್ ಟೆಂಪರೇಚರ್‌ನಲ್ಲಿ ಫ್ರೆಶ್ ಆಗಿರುತ್ತದೆ. ಹೀಗಾಗಿ ಜೇನು ತುಪ್ಪು ಸಾಮಾನ್ಯ ತಾಪಮಾನದಲ್ಲಿಟ್ಟರೆ ಒಳ್ಳೆಯದು.

58
ಟೊಮೆಟೊ ಸಾಸ್

ಅನೇಕರು ಟೊಮೆಟೊ ಸಾಸ್‌ ಪ್ರಿಡ್ಜ್‌ನಲ್ಲಿಟ್ಟಿರುತ್ತಾರೆ ಇದು ತಪ್ಪು. ಅದರಲ್ಲಿ ಪ್ರಿಸರ್ವೇಟಿವ್ಸ್ ಇರುವುದರಿಂದ ಫ್ರಿಡ್ಜ್‌ನಲ್ಲಿಡುವ ಅಗತ್ಯವಿಲ್ಲ.

68
ಸಿಟ್ರಸ್ ಹಣ್ಣುಗಳು

ಬಹುತೇಕರು ಸೇಬು ಹಣ್ಣುಗಳ ಜೊತೆಗೆ ಕಿತ್ತಳೆ, ನಿಂಬೆ ತರಹದ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಹಾಗೆ ಇಡುವುದರಿಂದ ಹಾಳಾಗುತ್ತವೆ. ರೂಮ್ ಟೆಂಪರೇಚರ್‌ನಲ್ಲಿ ಇಡಬೇಕು.

78
ಉಪ್ಪಿನಕಾಯಿ

ಉಪ್ಪಿನಕಾಯಿಯಲ್ಲಿ ಉಪ್ಪು ಹೆಚ್ಚಿರುವುದರಿಂದ ಫ್ರಿಡ್ಜ್‌ನಲ್ಲಿಡುವ ಅಗತ್ಯವಿಲ್ಲ. 

ಇದನ್ನೂ ಓದಿ:  ರುಚಿಕರವಾದ ಏಡಿ ರಸಂ : ಕೆಲವೇ ಸಮಯದಲ್ಲಿ ನೆಗಡಿ ಹೋಗಲಾಡಿಸುತ್ತದೆ.. ಸೂಪರ್ ರೆಸಿಪಿ!!

88
ಸೇಬು

ಸೇಬು, ಬಾಳೆಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಡುವ ಬದಲು ರೂಮ್ ಟೆಂಪರೇಚರ್‌ನಲ್ಲಿಟ್ಟರೆ ರುಚಿ ಮತ್ತು ಹದ ಚೆನ್ನಾಗಿರುತ್ತದೆ.

Read more Photos on
click me!

Recommended Stories