ಜಂಕ್ ಫುಡ್…. ನೀವು ಅಂದ್ಕೊಂಡಿರೋವಷ್ಟು ಕೆಟ್ಟದೇನಲ್ಲ! ಆದರೆ ಒಳ್ಳೇದಂತೂ ಅಲ್ವೇ ಅಲ್ಲ

First Published | Jul 22, 2022, 5:47 PM IST

ಜಂಕ್ ಫುಡ್ ಅಂದರೆ ಪಿಜ್ಜಾ, ಬರ್ಗರ್, ಚಾಕೊಲೇಟ್, ಕೇಕ್ ತಿನ್ನಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಆದರೆ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಈ ಜಂಕ್ ಫುಡ್ ಸೇವಿಸೋದನ್ನು ತಪ್ಪಿಸಲು ಸೂಚಿಸಲಾಗಿದೆ. ಆದಾಗ್ಯೂ, ನಾವು ಜಂಕ್ ಫುಡ್ ಅನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ, ಅದು ನಮ್ಮ ಆರೋಗ್ಯಕ್ಕೆ ಹಾನಿ ಮಾಡೋದಿಲ್ಲ. ಇಂದು ನಾವು ನಿಮ್ಮ ಆರೋಗ್ಯಕ್ಕೆ ಹಾನಿಯಾಗದ ಅಂತಹ ಏಳು ಜಂಕ್ ಫುಡ್ ಗಳ ಬಗ್ಗೆ ನಿಮಗೆ ಹೇಳುತ್ತೇವೆ ಮತ್ತು ನೀವು ಅವುಗಳನ್ನು ಆರಾಮವಾಗಿ ತಿನ್ನಬಹುದು. ಅವುಗಳು ಯಾವುವು ಗೊತ್ತಾ?

ಪಾಪ್ ಕಾರ್ನ್

ಮೂವಿ ನೋಡೋ ಸಮಯದಲ್ಲಿ ಪಾಪ್ ಕಾರ್ನ್ (popcorn) ತಿನ್ನಲು ಯಾರು ಇಷ್ಟಪಡುವುದಿಲ್ಲ ಹೇಳಿ? ಆದರೆ ಆಹಾರ ಬಗ್ಗೆ ತಿಳುವಳಿಕೆ ಇರುವ ಜನರು ಹೆಚ್ಚಾಗಿ ಅದನ್ನು ತಿನ್ನುವುದನ್ನು ತಪ್ಪಿಸುತ್ತಾರೆ. ಆದರೆ ಮನೆಯಲ್ಲಿ ತಯಾರಿಸಿದ ಪಾಪ್ ಕಾರ್ನ್ ತುಂಬಾ ಪ್ರಯೋಜನಕಾರಿ ಅನ್ನೋದು ಗೊತ್ತಾ?, ಏಕೆಂದರೆ ಇದರಲ್ಲಿ ಬೆಣ್ಣೆ ಅಥವಾ ಎಣ್ಣೆಯನ್ನು ಸಣ್ಣ ಪ್ರಮಾಣದಲ್ಲಿ ಸೇರಿಸಲಾಗುತ್ತದೆ. ಪಾಪ್ಕಾರ್ನ್ ಬಿ ಕಾಂಪ್ಲೆಕ್ಸ್, ವಿಟಮಿನ್ ಇ ಮತ್ತು ಇತರ ಖನಿಜಗಳಿಂದ ಸಮೃದ್ಧವಾಗಿದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿ.

ಡಾರ್ಕ್ ಚಾಕೊಲೇಟ್

ಡಾರ್ಕ್ ಚಾಕೊಲೇಟ್ ತುಂಬಾ ಕಡಿಮೆ ಸಕ್ಕರೆ ಅಂಶವನ್ನು ಹೊಂದಿದೆ ಮತ್ತು ಇದನ್ನು ಹೃದಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತೆ. ಇಷ್ಟೇ ಅಲ್ಲ, ಡಾರ್ಕ್ ಚಾಕೊಲೇಟ್ (dark chocolate) ಸೇವನೆಯು ಮುಖದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ ಮತ್ತು ಅದರಲ್ಲಿರುವ ಉತ್ಕರ್ಷಣ ನಿರೋಧಕ ಅಂಶಗಳು ಒತ್ತಡವನ್ನು ಕಡಿಮೆ ಮಾಡುತ್ತೆ. ಡಾರ್ಕ್ ಚಾಕೊಲೇಟ್ ಸೇವಿಸೋದ್ರಿಂದ ಖಿನ್ನತೆ ಸಹ ದೂರವಾಗುತ್ತೆ.
 

Tap to resize

ಐಸ್ ಕ್ರೀಮ್

ಹೌದು, ಕೆಲವು ಐಸ್ ಕ್ರೀಮ್ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ. ಏಕೆಂದರೆ ಇದರಲ್ಲಿ ಹಾಲು ಮತ್ತು ಕೆನೆ ಹೆಚ್ಚಿನ ಪ್ರಮಾಣದಲ್ಲಿರುತ್ತೆ, ಇದು ಕ್ಯಾಲ್ಸಿಯಂ ಮತ್ತು ಪ್ರೋಟೀನ್ ನಿಂದ ಸಮೃದ್ಧವಾಗಿದೆ. ಜೊತೆಗೆ ಇದರಲ್ಲಿ ವಿಟಮಿನ್ ಎ ಸಹ ಕಂಡುಬರುತ್ತೆ, ಇದು ನಮ್ಮ ಚರ್ಮ, ಮೂಳೆಗಳ ರೋಗನಿರೋಧಕ ಶಕ್ತಿಯನ್ನು (immunity power) ಬಲಪಡಿಸುತ್ತದೆ.

ಸಿಹಿ ಗೆಣಸಿನ ಚಿಪ್ಸ್

ಆಲೂಗಡ್ಡೆ ಚಿಪ್ಸ್ (Potato Chips) ಬದಲಿಗೆ, ನೀವು ಸಿಹಿ ಗೆಣಸಿನ ಚಿಪ್ಸ್ (sweet potato tips) ತಿಂದರೆ, ಅದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಏಕೆಂದರೆ ಇದು ಕಡಿಮೆ ಪ್ರಮಾಣದ ಸಕ್ಕರೆ ಹೊಂದಿರುತ್ತೆ ಮತ್ತು ಇದು ಆಲೂಗಡ್ಡೆಗೆ ಸ್ವಲ್ಪಮಟ್ಟಿಗೆ ಹೋಲುತ್ತದೆ. ಸಿಹಿ ಗೆಣಸನ್ನು ತಿನ್ನೋದ್ರಿಂದ ಕಣ್ಣುಗಳ ದೃಷ್ಟಿ ಸುಧಾರಿಸುತ್ತದೆ ಮತ್ತು ಹೃದ್ರೋಗದ ಭಯ ಇರೋದಿಲ್ಲ. 

ಪಾವ್ ಭಾಜಿ

ಪಾವ್ ಭಾಜಿ ಎಂಬುದು ಬಹುತೇಕ ಎಲ್ಲರೂ ಇಷ್ಟಪಡುವ ಇನ್ನೊಂದು ಫಾಸ್ಟ್ ಫುಡ್. ಇದು ನಿಮ್ಮನ್ನು ಬಾಯಿ ಚಪ್ಪರಿಸಿ ತಿನ್ನುವಂತೆ ಮಾಡೋದಂತೂ ನಿಜ. ಇದರ ಭಾಜಿಯಲ್ಲಿ, ಹಸಿರು ಬಟಾಣಿ, ಹೂಕೋಸು, ಆಲೂಗಡ್ಡೆ, ಕ್ಯಾರೆಟ್, ಫ್ರೆಂಚ್ ಬೀನ್ಸ್ ಇತ್ಯಾದಿಗಳನ್ನು ಬಳಸಲಾಗುತ್ತದೆ, ಇದು ಆರೋಗ್ಯಕಾರಿ. ನೀವು ಅದನ್ನು ಇನ್ನಷ್ಟು ಆರೋಗ್ಯಕರವಾಗಿಸಲು ಮೈದಾ ಬದಲಿಗೆ ಗೋಧಿ ಪಾವ್ ಅನ್ನು ಬಳಸಬಹುದು.

ಬೇಲ್ ಪುರಿ

ಆರೋಗ್ಯಕರ ಫಾಸ್ಟ್ ಫುಡ್‌ನಲ್ಲಿ ಬೇಲ್ ಪುರಿ ಮತ್ತೊಂದು ಉತ್ತಮ ಆಯ್ಕೆ. ಬೇಲ್ ಪುರಿಯನ್ನು ಉರಿ ಅಕ್ಕಿಯಿಂದ ತಯಾರಿಸಲಾಗುತ್ತದೆ, ಇದನ್ನು ಮುರ್ಮುರಾ ಎಂದು ಸಹ ಕರೆಯಲಾಗುತ್ತೆ. ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆಯಂತಹ ಸಾಕಷ್ಟು ತರಕಾರಿಗಳನ್ನು ಇದಕ್ಕೆ ಸೇರಿಸಲಾಗುತ್ತದೆ. ಇದು ಹಗುರವಾದ ಮತ್ತು ಆರೋಗ್ಯಕರವಾದ ತಿಂಡಿ..

ದಹಿ ಭಲ್ಲಾ

ದಹಿ ಭಲ್ಲಾ ಪ್ರತಿಯೊಬ್ಬರ ಅತ್ಯಂತ ಸಾಮಾನ್ಯ ಸ್ಟ್ರೀಟ್ ಫುಡ್‌ಗಳಲ್ಲಿ (street food) ಒಂದು. ಇದು ತಿನ್ನಲು ರುಚಿಕರವಾಗಿರುವ ಖಾದ್ಯ, ಜೊತೆಗೆ ಆರೋಗ್ಯಕರವೂ ಹೌದು. ಈ ಫಾಸ್ಟ್ ಫುಡ್ ಅನ್ನು ಮೊಸರು ಮತ್ತು ವಡಾದಿಂದ ತಯಾರಿಸಲಾಗುತ್ತದೆ ಮತ್ತು ತುರಿದ ಬೀಟ್ರೂಟ್, ಕೊತ್ತಂಬರಿ ಸೊಪ್ಪು, ದಾಳಿಂಬೆಯಿಂದ ಅಲಂಕರಿಸುತ್ತಾರೆ. ಈ ಭಕ್ಷ್ಯವು ಹೊಟ್ಟೆಗೆ ಸೌಮ್ಯವಾಗಿದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Latest Videos

click me!