ರಾಜಸ್ಥಾನದಲ್ಲಿ ವಿಶ್ವದ ಅತ್ಯಂತ ದುಬಾರಿ ಮಾವು: ದೇಶದಲ್ಲಿ 1 ಕೆಜಿ ಹಣ್ಣಿಗೆ 21 ಸಾವಿರ ರೂಪಾಯಿ!

Published : Jul 22, 2022, 04:47 PM IST

ಜೈಪುರ (ಜುಲೈ 21):  ಶುಕ್ರವಾರ (ಜುಲೈ 22, 2022) ರಾಷ್ಟ್ರೀಯ ಮಾವಿನ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ, ರಾಜಸ್ಥಾನದಲ್ಲಿ ಬೆಳೆಯುವ ಅಂತಹ ಮಾವಿನ ಬಗ್ಗೆ ನಾವು ನಿಮಗೆ ಹೇಳುತ್ತೇವೆ ಅದು ಬಹಳ ವಿಶೇಷವಾದ ಮಾವಿನ ಹಣ್ಣು. ಈ ಮಾವು ಎಷ್ಟು ವಿಶೇಷ ಎಂದರೆ ಎರಡು ಕಿಲೋಗೆ ಮನೆ ಖರೀದಿಸಬಹುದು. ಕೋಟಾದಲ್ಲಿ ವಾಸವಾಗಿರುವ ರೈತ ಕಿಶನ್ ಸುಮನ್ ಅವರ ಹೊಲಗಳಲ್ಲಿ ಈ ವಿಶೇಷ ಮಾವು ಬೆಳೆಯಲಾಗುತ್ತಿದೆ. ಈ ಮಾವಿನ ಹೆಸರು ಮಿಯಾಜಾಕಿ ಮಾವು. ಇದು ವಿಶ್ವದ ಅತ್ಯಂತ ದುಬಾರಿ ಮಾವು ಎಂದು ಪರಿಗಣಿಸಲಾಗಿದೆ. ಕೋಟಾದಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ತನ್ನ ಗ್ರಾಮದಲ್ಲಿ ಕೃಷಿ ಮಾಡುತ್ತಿರುವ ಈ ರೈತ, ತನ್ನ ಕೃಷಿಯಿಂದ ರಾಜ್ಯದಲ್ಲಿ ಅನೇಕ ಬಹುಮಾನಗಳನ್ನು ಗೆದ್ದಿದ್ದಾನೆ. ಈ ರೈತ ಕೇವಲ ಎರಡು ವರ್ಷಗಳಲ್ಲಿ ಫಲ ನೀಡಲು ಆರಂಭಿಸುವ ಇಂತಹ ತಳಿಯನ್ನು ಸಿದ್ಧಪಡಿಸಿದ್ದಾನೆ. ರಾಷ್ಟ್ರೀಯ ಮಾವು ದಿನದಂದು ಈ ಮಿಯಾಜಾಕಿ ಮಾವು ಏಕೆ ವಿಶೇಷ ಇಲ್ಲಿದೆ ವರದಿ.

PREV
112
ರಾಜಸ್ಥಾನದಲ್ಲಿ ವಿಶ್ವದ ಅತ್ಯಂತ ದುಬಾರಿ ಮಾವು: ದೇಶದಲ್ಲಿ 1 ಕೆಜಿ ಹಣ್ಣಿಗೆ 21 ಸಾವಿರ ರೂಪಾಯಿ!

ಇದನ್ನು ತಳಿಯ ಮಾವನ್ನು ಸುಮಾರು ಮೂವತ್ತರಿಂದ ನಲವತ್ತು ವರ್ಷಗಳ ಹಿಂದೆ ಜಪಾನ್‌ನ ಮಿಯಾಜಾಕಿ ನಗರದಲ್ಲಿ ಕಂಡುಹಿಡಿಯಲಾಯಿತು, ಇದರಿಂದಾಗಿ ಇದಕ್ಕೆ ಮಿಯಾಜಾಕಿ ಎಂಬ ಹೆಸರು ಬಂದಿದೆ. ಆದರೆ ಅದನ್ನು ವಿಶೇಷ ಋತುವಿನಲ್ಲಿ ಮಾತ್ರವೇ ಈ ಮಾವು ಬೆಳೆಯುತ್ತದೆ. ಬಿಸಿಯಾದ ವಾತಾವರಣದಲ್ಲಿ ಈ ಮಾವು ಬೆಳೆಯೋದಿಲ್ಲ.
 

212

ಆದರೆ, ಭಾರತ ಬಿಸಿ ವಾತಾವರಣದ ದೇಶ, ಅದರಲ್ಲೂ ರಾಜಸ್ಥಾನದಲ್ಲಿ ಆಗಸದಿಂದಲೇ ಬೆಂಕಿ ಬೀಳುವಂಥ ರಾಜ್ಯ. ಆದರೆ, ಇಲ್ಲಿನ ರೈತ ರಾಜಸ್ಥಾನದಲ್ಲಿ ಈ ವಿಶೇಷ ಮಾವನ್ನು ಬೆಳೆಯಲು ಆರಂಭಿಸಿದ್ದು, ಸಾವಿರಾರು ರೈತರು ಇದನ್ನು ನೋಡಲು ತೆರಳಿದ್ದಾರೆ.

312

ವರದಿಗಳ ಪ್ರಕಾರ, ಇದರ ಬೆಲೆ ಕೆಜಿಗೆ ಎರಡು ಲಕ್ಷದ ಐವತ್ತು ಸಾವಿರ ರೂಪಾಯಿಗಳಿಂದ ಎರಡು ಲಕ್ಷದ 75 ಸಾವಿರ ರೂಪಾಯಿಗಳವರೆಗೆ ಇರುತ್ತದೆ. ಇದರ ನಿರ್ವಹಣೆ ತುಂಬಾ ದುಬಾರಿಯಾಗಿದೆ. ಅದಲ್ಲದೆ, ಮನುಷ್ಯನಿಗೆ ಬೇಕಾದ ಅಗಾಧ ಪೋಷಕಾಂಶಗಳು ಈ ತಳಿಯ ಮಾವಿನ ಹಣ್ಣಿನಲ್ಲಿರುವ ಕಾರಣ ಇದಕ್ಕೆ ಇಷ್ಟು ಬೇಡಿಕೆ ಎನ್ನಲಾಗುತ್ತಿದೆ.
 

412

ಜಪಾನ್ ದೇಶದ ಬೆಲೆಗಳ ಪ್ರಕಾರ ಇದರ ಬೆಲೆ ತುಂಬಾ ದುಬಾರಿಯಾಗಿದೆ. ಭಾರತದಲ್ಲಿ ಬೆಲೆಗಳು ಕಡಿಮೆಯಾದರೂ, ಇದು ಭಾರತದಲ್ಲಿ ಅತ್ಯಂತ ದುಬಾರಿ ತಳಿಯಾಗಿದೆ.

512

ಮಧ್ಯಪ್ರದೇಶದಲ್ಲಿ ರೈತನೊಬ್ಬ ಕೆಜಿಗೆ 21000 ರೂ.ಗೆ ಮಾರಾಟ ಮಾಡಿದ್ದಾರೆ. ಬೆಲೆಗಳ ಕುರಿತು ಮಾತನಾಡುವುದಾದರೆ, ಪ್ರತಿ ಕೆಜಿಗೆ 2.5 ಲಕ್ಷ ರೂ. ಅಂದರೆ, ಅಂದಾಜು 2 ಕೆಜಿಗೆ ಈ ಹಣ್ಣಿನ ಬೆಲೆಗೆ ರಾಜಸ್ಥಾನದಲ್ಲಿ ಹೌಸಿಂಗ್ ಬೋರ್ಡ್‌ನ EWS ವರ್ಗದ ಫ್ಲಾಟ್ ಅನ್ನು ಖರೀದಿ ಮಾಡಬಹುದು.

612

ಎರಡು ವರ್ಷಗಳ ಹಿಂದೆ ಜೈಪುರದಲ್ಲಿ ಹೌಸಿಂಗ್ ಬೋರ್ಡ್ ಐದು ಲಕ್ಷದ ಐವತ್ತು ಸಾವಿರ ರೂಪಾಯಿಗಳಿಗೆ ಈ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಿತ್ತು. ಅದೇ ಲೆಕ್ಕಾಚಾರದಲ್ಲಿ ಹೋಗುವುದಾದರೆ, 2 ಕೆಜಿ ಮಾವಿನ ಹಣ್ಣಿನಲ್ಲಿ 1 ಫ್ಲ್ಯಾಟ್‌ ಖರೀದಿ ಮಾಡಬಹುದು.

712

 ಮಿಯಾಜಾಕಿ ಮಾವಿನ ಹಣ್ಣಿನೊಂದಿಗೆ ಕಿಶನ್ ಸುಮನ್. ಎರಡು ಹೊಸ ತಳಿಯ ಮಾವಿನಕಾಯಿಯನ್ನೂ ಸಿದ್ಧಪಡಿಸಿದ್ದಾರೆ. ಈಗ ಕೋಟಾ ಸೇರಿದಂತೆ ರಾಜಸ್ಥಾನದಲ್ಲಿ ಚರ್ಚೆಯಾಗುತ್ತಿದೆ. ಕೋಟಾದಲ್ಲಿ ವಾಸವಾಗಿರುವ ರೈತ ಕಿಶನ್ ಸುಮನ್ ತನ್ನ ತಂದೆಯ ಹಾದಿಯಲ್ಲಿ ಸಾಗುತ್ತಿದ್ದು, ಕಳೆದ ಹದಿನೈದು ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಜಮೀನಿನಲ್ಲಿ ಹಲವು ಬಗೆಯ ಮಾವುಗಳನ್ನು ನಾಟಿ ಮಾಡಲಾಗಿದ್ದು, ಹೆಚ್ಚಿನ ದೇಶಿ ಗೊಬ್ಬರಗಳನ್ನು ನೀಡಲಾಗುತ್ತದೆ.

812

ಕಿಶನ್ ಸುಮನ್‌ಗೆ 2019 ರಲ್ಲಿ ಮಿಯಾಜಾಕಿ ಮಾವಿನ ಮೂರು ಗಿಡಗಳನ್ನು ಸ್ನೇಹಿತರೊಬ್ಬರು ಉಡುಗೊರೆಯಾಗಿ ನೀಡಿದ್ದರು, ಥೈಲ್ಯಾಂಡ್‌ನಿಂದ ತಂದ ಈ ಸಸ್ಯಗಳು, ಕಿಶನ್ ಸಹಾಯ್, ಇಂಟರ್ನೆಟ್ ಮತ್ತು ಯೂಟ್ಯೂಬ್‌ನ ಸಹಾಯವನ್ನು ಪಡೆದು ಕೃಷಿ ಪ್ರಾರಂಭಿಸಿದರು. ಮೂರು ವರ್ಷಗಳಲ್ಲಿ ಇದರ ಫಲ ಬರಲು ಆರಂಭಿಸಿವೆ. ಇದಕ್ಕಾಗಿ ಸಾಕಷ್ಟು ಗೌರವವನ್ನೂ ಪಡೆದುಕೊಂಡಿದ್ದಾರೆ.
 

912

ಈ ಮಾವುಗಳನ್ನು ಜಪಾನ್‌ನ ಕ್ಯುಶು ಪ್ರಿಫೆಕ್ಚರ್‌ನಲ್ಲಿರುವ ಮಿಯಾಜಾಕಿ ನಗರದಲ್ಲಿ ಬೆಳೆಯಲಾಗುತ್ತದೆ. ಈ ಮಾವಿನ ಹಣ್ಣುಗಳ ತೂಕ 350 ಗ್ರಾಂಗಿಂತ ಹೆಚ್ಚು. ಅವುಗಳಲ್ಲಿ 15% ಅಥವಾ ಹೆಚ್ಚಿನ ಸಕ್ಕರೆ ಅಂಶವಿದೆ.
 

1012

ಕಿಶನ್ ಸಹಾಯ್ ಹದಿನೈದು ವರ್ಷಗಳಿಂದ ಮಾವಿನ ತೋಟಗಾರಿಕೆ ಮಾಡುತ್ತಿದ್ದಾರೆ. ಎರಡು ಡಜನ್‌ಗಿಂತಲೂ ಹೆಚ್ಚು ತಳಿಗಳನ್ನು ಬೆಳೆಸಿದ್ದಾರೆ. ಹಿಂದೊಮ್ಮೆ ಮಾವು ಮೇಳದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರೈತ ಕಿಶನ್ ಸುಮನ್ ಮಾವಿನ ಹಣ್ಣುಗಳು ಹಾಗೂ ಅದರ ತಳಿಗಳ ಬಗ್ಗೆ ತಿಳಿಸಿದ್ದರು.

1112

ರೈತ ಕಿಶನ್ ಸುಮನ್ ರಾಜಸ್ಥಾನದಲ್ಲಿ ಹಲವು ಗೌರವಗಳನ್ನು ಪಡೆದಿದ್ದಾರೆ. ಅವರಿಗೆ 2019 ರಲ್ಲಿ ಕಿಸಾನ್ ವಿಜ್ಞಾನಿ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.

1212

ಜಪಾನಿನ ಮಾಧ್ಯಮ ವರದಿಗಳ ಪ್ರಕಾರ, ಮಿಯಾಜಿ ಮಾವು ವಿಶ್ವದ ಅತ್ಯಂತ ದುಬಾರಿ ಮಾವಿನಹಣ್ಣುಗಳಲ್ಲಿ ಒಂದಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಜಿಗೆ 2.70 ಲಕ್ಷ ರೂ.

click me!

Recommended Stories