ಪ್ರೆಗ್ನೆನ್ಸಿಯಲ್ಲಿ ಕರೀನಾಗೆ ಕಹಿ ತಿನ್ನೋ ಬಯಕೆ..! ಗರ್ಭಿಣಿಯರು ಕಹಿ ತಿನ್ನಬಹುದಾ..?

First Published | Oct 10, 2020, 7:01 PM IST

ಕರೀನಾಗೆ ಕಹಿ ತಿನ್ನೋ ಬಯಕೆ | ಬಸುರಿ ಬಯಕೆಗಳ ಅರ್ಥವೇನು..? | ಕಹಿ ತಿನ್ನೋದು ಸೂಕ್ತವೇ..?

40ನೇ ಹುಟ್ಟುಹಬ್ಬವನ್ನು ಇತ್ತೀಚೆಗಷ್ಟೇ ಆಚರಿಸಿಕೊಂಡ ಬಾಲಿವುಡ್ ನಟಿ ಕರೀನಾಕಪೂರ್ ಈಗ 5 ತಿಂಗಳ ಗರ್ಭಿಣಿ. ಅವರಿಗೆ ಕಹಿ ತಿನ್ನೋ ಬಯಕೆ ಅಗಿದೆಯಂತೆ.
ಗರ್ಭಿಣಿಯರು ಕಹಿ ಸೇವಿಸಬಹುದಾ..? ಏನಿದರ ಅರ್ಥ..? 40ರಲ್ಲಿ ಎರಡನೇ ಬಾರಿ ಗರ್ಭಿಣಿಯಾಗಿರೋ ಕರೀನಾ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಬಹಿಸುತ್ತಿದ್ದಾರೆ.
Tap to resize

ತೈಮೂರ್‌ನನ್ನು ಗರ್ಭಿಣಿಯಾಗಿದ್ದಾಗ ಕರೀನಾಗೆ ಆದ ಬಯಕೆಗಳೆಲ್ಲ ಆರೋಗ್ಯಕರ ವಸ್ತುಗಳ ಬಗ್ಗೆಯೇ ಆಗಿತ್ತು.
ಹಾಗಲಕಾಯಿ ತಿನ್ನೋಕೆ ಸಿಕ್ಕಾಪಟ್ಟೆ ಬಯಕೆಯಾಗಿತ್ತಂತೆ ಕರೀನಾಗೆ. ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ನಟಿ, ಎಲ್ಲರೂ ಸ್ವಲ್ಪ ಸಿಹಿಯಾದರೂ ಸೇರಿಸಿ ತಿನ್ನು ಎನ್ನುತ್ತಿದ್ದರು. ಆದರೆ ನನಗೆ ಹಾಗಲಕಾಯಿಯ ನೈಸರ್ಗಿಕ ಕಹಿ ಹೆಚ್ಚು ಇಷ್ಟವಾಗುತ್ತಿತ್ತು ಎಂದಿದ್ದಾರೆ.
ಬಸುರಿ ಬಯಕೆಗಳ ಅರ್ಥವೇನು? : ಹಾಗಲಕಾಯಿ ಆರೋಗ್ಯಕರ ತರಕಾರಿ ಹೌದು. ಆದರೆ ಗರ್ಭಿಣಿಯರ ಬಯಕೆಯಲ್ಲಿ ಇದಕ್ಕೆ ದೊಡ್ಡ ಆದ್ಯತೆ ಏನಿಲ್ಲ. ಆದರೆ ಬಸುರಿಯಾಗಿದ್ದಾಗ ಕಹಿ ತಿನ್ನೋ ಆಸೆ ಅಪರೂಪ ಅಥವಾ ತಪ್ಪು ಎಂದಲ್ಲ.
ಹಾರ್ಮೋನುಗಳು ಕಾರ್ಯನಿರ್ವಹಿಸಿದಾಗ ಮತ್ತು ಮಗುವಿನ ಪೌಷ್ಠಿಕಾಂಶದ ಅಗತ್ಯಗಳನ್ನು ಪೋರೈಸುವಂತೆ ಸೂಚಿಸಿದಾಗ ಗರ್ಭಧಾರಣೆಯ ಕಡುಬಯಕೆಗಳು ಉಂಟಾಗುತ್ತವೆ. ಈ ಬಯಕೆ ಸೆನ್ಸ್ ಮತ್ತು ವಾಸನೆಯನ್ನೂ ಸೇರಿರುತ್ತದೆ. ಹಾಗಾಗಿಯೇ ಎಲ್ಲ ಗರ್ಭಿಣಿಯರ ಬಯಕೆ ಒಂದೇ ರೀತಿ ಇರದು.
ಆದರೆ ಈ ಕಹಿ ಪದಾರ್ಥಗಳೇಕೆ..?: ಕೆಲವೊಮ್ಮ ನಿಮ್ಮ ದೇಹ ಸೇರುವ ಅತಿಯಾದ ಸಿಹಿ ನಿಯಂತ್ರಿಸುವುದಕ್ಕೂ ಕಹಿ ತಿನ್ನುವ ಆಸೆಯಾಗಬಹುದು. ಸೊಪ್ಪು ತರಕಾರಿ ಮತ್ತು, ಕಹಿ ತಿನ್ನುವ ಆಸೆಯಾಗೋದು ಒಳ್ಳೆಯದು ಎನ್ನಲಾಗುತ್ತದೆ. ಇದರಲ್ಲಿ ಮಗುವಿಗೆ ಬೇಕಾದ ಪೌಷ್ಟಿಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
ಗರ್ಭಿಣಿಯಾಗಿದ್ದಾಗ ಕಹಿ ಸೇವಿಸಬಹುದೇ?: ಹಾಗಲಕಾಯಿಯಲ್ಲಿ ಆಂಟಿಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಯಾವುದೇ ಪೌಷ್ಟಿಕಾಂಶ ಕೊರತೆ, ಆರೋಗ್ಯ ಸಮಸ್ಯೆಯನ್ನೂ ಗುಣಮಾಡುತ್ತದೆ. ರಕ್ತದೊತ್ತಡವನ್ನೂ ನಿಯಂತ್ರಿಸುತ್ತದೆ.
ಕಹಿ ಆಹಾರ ಸೇವನೆ ಎಷ್ಟು ಆರೋಗ್ಯಕರ: ಕಹಿ ತಿನ್ನೋ ಬಯಕೆಯಾಗುವುದು ಸಹಜ. ಆದರೆ ಅದನ್ನೇ ನೇರವಾಗಿ ತಿನ್ನದೆ ಬೇರೆ ಆಹಾರ ವಸ್ತುಗಳಂತೇ ಖಾದ್ಯದ ರೂಪದಲ್ಲಿ ತಿನ್ನುವುದು ಉತ್ತಮ. ಗರ್ಭಿಣಿಯಾಗಿದ್ದಾಗ ಹಣ್ಣು, ಸಿಹಿ, ಖಾರ, ಹುಳಿ, ಕಹಿ ಎಲ್ಲವೂ ಸೇರಬೇಕು. ಯಾವುದೇ ಒಂದೇ ಆಹಾರವನ್ನು ಅವಲಂಬಿಸಬಾರದು. ಒಂದೇ ಆಹಾರ ತಿನ್ನಲು ಹೆಚ್ಚು ಸಮಯ ಬಯಕೆಯಾದರೆ ಅಲ್ಲಿ ಯಾವುದೋ ಪೌಷ್ಟಿಕಾಂಶದ ಕೊರತೆ ಇದೆ ಎಂದರ್ಥ.
ಯಾವುದಾದರೂ ಅಡ್ಡ ಪರಿಣಾಮಗಳಿವೆಯೇ: ಸ್ವಲ್ಪ ಕಹಿ ತಿಂದರೆ ಅದು ಹೆಚ್ಚು ಉತ್ತಮ. ಆದರೆ ಅದನ್ನೇ ಹೆಚ್ಚಾಗಿ ತಿನ್ನುವುದು ಅಷ್ಟು ಒಳ್ಳೆಯದಲ್ಲ. ಹೆಚ್ಚು ತಿಂದರೆ ಕಬ್ಬಿಣಂಶದ ಕೊರತೆಯಾಗುವುದು, ಕೆಂಪು ರಕ್ತ ಕಣಗಳಿಗೂ ಹಾನಿಯಾಗಬಹುದು.
ಹಾಗಲಕಾರಿಯ ಹೊರಭಾಗದ ಪದರ ಕೆಲವು ಗರ್ಭಿಣಿಯರಿಗೆ ಹೊಂದುವುದಿಲ್ಲ. ಹಾಗಲಕಾಯಿ ಜ್ಯೂಸ್ ಮತ್ತು ಬೀಜಗಳಿಂದಲೂ ಸಮಸ್ಯೆಯಾಗಬಹುದು.

Latest Videos

click me!