ಝಮ್ ಝಮ್ ನೀರಿನ ರಹಸ್ಯ: ನಿಂತು ಕುಡಿಯೋದ್ಯಾಕೆ? ವಿಶ್ವದ ಅತ್ಯಂತ ಶುದ್ಧ ಜಲ ಅಂತ ಕರೆಯೋದ್ಯಾಕೆ?

Published : Sep 22, 2025, 04:55 PM IST

ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಸಿಗುವ ಝಮ್ ಝಮ್ ನೀರನ್ನು ಇಸ್ಲಾಂನಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಈ ನೀರನ್ನು ನಿಂತುಕೊಂಡು ಕುಡಿಯುವ ಸಂಪ್ರದಾಯದ ಹಿಂದಿನ ಕಾರಣವನ್ನು ಪ್ರವಾದಿ ಮುಹಮ್ಮದ್ ಅವರ ಆಚರಣೆಗಳಲ್ಲಿ ವಿವರಿಸಲಾಗಿದೆ. 

PREV
19
ಝಮ್ ಝಮ್ ಪಾನಿ

ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಸಿಗುವ ನೀರನ್ನು ಝಮ್ ಝಮ್ ಪಾನಿ ಎಂದು ಕರೆಯಲಾಗುತ್ತದೆ. ಮೆಕ್ಕಾದಲ್ಲಿರುವ ಮಸ್ಜೀದ್‌ನಲ್ಲಿರುವ ಬಾವಿಯಲ್ಲಿ ಪವಿತ್ರವಾದ ಝಮ್ ಝಮ್ ನೀರು ಸಿಗುತ್ತದೆ. ಈ ನೀರನ್ನು ಅಲ್ಲಾಹುವಿನ ಕೊಡುಗೆ ಎಂದು ನಂಬಲಾಗಿದ್ದು, ಇಸ್ಲಾಂನಲ್ಲಿ ಇದಕ್ಕೆ ವಿಶೇಷ ಧಾರ್ಮಿಕ ಮಹತ್ವವನ್ನು ನೀಡಲಾಗುತ್ತದೆ. ಈ ನೀರು ಎಂದಿಗೂ ಹಾಳಾಗುವುದಿಲ್ಲ ಮತ್ತು ಒಣಗುವುದಿಲ್ಲ ಎಂದು ನಂಬಲಾಗಿದೆ.

29
ಝಮ್ ಝಮ್ ನೀರು

ಈ ಝಮ್ ಝಮ್ ನೀರು ಎಂದಿಗೂ ತನ್ನಲ್ಲಿ ಯಾವುದೇ ಕೀಟ ಅಥವಾ ಯಾವುದೇ ಬ್ಯಾಕ್ಟೀರಿಯಾಗಳಿಗೆ ಆಶ್ರಯ ನೀಡಲ್ಲ. ಹಾಗಾಗಿ ಈ ನೀರನ್ನು ಎಷ್ಟು ದಿನ ಶೇಖರಿಸಿಟ್ಟರೂ ಹಾಳಾಗಲ್ಲ. ಮತ್ತೊಂದು ವಿಶೇಷತೆ ಅಂದ್ರೆ ಝಮ್ ಝಮ್ ನೀರನ್ನು ನಿಂತುಕೊಂಡು ಕುಡಿಯುತ್ತಾರೆ. ಯಾಕೆ ಈ ಪವಿತ್ರ ನೀರನ್ನು ನಿಂತುಕೊಂಡು ಕುಡಿಯಲಾಗುತ್ತದೆ ಎಂದು ನೋಡೋಣ ಬನ್ನಿ.

39
ಝಮ್ ಝಮ್ ನೀರು ನಿಂತು ಕುಡಿಯೋದ್ಯಾಕೆ?

ಪ್ರವಾದಿ ಮುಹಮ್ಮದ್ ಅವರು ಝಮ್ ಝಮ್ ನೀರನ್ನು ನಿಂತುಕೊಂಡು ಕುಡಿದರು ಎಂದು ಹದೀಸ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರತೀತಿಯನ್ನು ಗೌರವಿಸುವ ಕಾರಣದಿಂದ ಝಮ್ ಝಮ್ ನೀರನ್ನು ನಿಂತುಕೊಂಡು ಕುಡಿಯಲಾಗುತ್ತದೆ ಎಂದು ನಂಬಲಾಗಿದೆ. ಸಾಮಾನ್ಯವಾಗಿ ಮುಸ್ಲಿಮರು ಕುಳಿತು ನೀರು ಕುಡಿಯೋದನ್ನು ಸುನ್ನತ್ ಎಂದು ಪರಿಗಣಿಸುತ್ತಾರೆ. ನಿಂತು ಕುಡಿಯೋದರಿಂದ ಝಮ್ ಝಮ್ ನೀರು ದೇಹದ ಎಲ್ಲಾ ಭಾಗಗಳಿಗೆ ತಲುಪಲಿದೆ ಎಂಬ ನಂಬಿಕೆಯೂ ಇದೆ.

49
ಇತರೆ ಕಾರಣಗಳು

ಹಜರತ್ ಇಬ್ನ್ ಅಬ್ಬಾಸ್ (ರ.ಅ) ಅವರು ಪ್ರವಾದಿ ಮುಹಮ್ಮದ್ ಅವರ ಸಹಚರರು. ಇವರ ಪ್ರಕಾರ ಪ್ರವಾದಿ ಮುಹಮ್ಮದ್ ಅವರು ನಿಂತುಕೊಂಡು ನೀರು ಕುಡಿದರು. ಇದನ್ನು ಅತ್ಯಂತ ಪವಿತ್ರವಾದ ನೀರು ಎಂದು ಪರಿಗಣಿಸಲಾಗುತ್ತದೆ. ನಿಂತು ಝಮ್ ಝಮ್ ನೀರು ಕುಡಿಯೋದರಿಂದ ದೇಹದ ಎಲ್ಲಾ ಭಾಗಕ್ಕೂ ತಲುಪಲಿದೆ

59
ಕುಳಿತು ನೀರು ಕುಡಿಯುವುದು ಸುನ್ನತ್

ಸಾಮಾನ್ಯವಾಗಿ ಕುಳಿತು ನೀರು ಕುಡಿಯುವುದು ಉತ್ತಮ ಎಂದು ಇಸ್ಲಾಂನಲ್ಲಿ ಪರಿಗಣಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದಿದ್ದಾಗ ಅಥವಾ ಇತರೆ ಯಾವುದೇ ಸನ್ನಿವೇಶಗಳಲ್ಲಿ ನಿಂತುಕೊಂಡು ಕೂಡ ನೀರು ಕುಡಿಯಬಹುದು.

69
ಜಗತ್ತಿನ ಅತ್ಯಂತ ಶುದ್ಧ ನೀರು

ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ, ಪ್ರವಾದಿ ಇಸ್ಮಾಯಿಲ್ ಮತ್ತು ಅವರ ತಾಯಿ ಹಾಗರ್ ಮೆಕ್ಕಾದ ಮರುಭೂಮಿಯಲ್ಲಿ ಬಾಯಾರಿದಾಗ ಅಲ್ಲಾಹನು ಈ ಬಾವಿಯನ್ನು ಅದ್ಭುತವಾಗಿ ಸೃಷ್ಟಿಸಿದನು ಎಂದು ಹೇಳಲಾಗುತ್ತದೆ. 

79
ಝಮ್ ಝಮ್ ನೀರಿನ ರಹಸ್ಯ

ಝಮ್ ಝಮ್ ನೀರಿನ ರಾಸಾಯನಿಕ ಗುಣಲಕ್ಷಣಗಳ ಬಗ್ಗೆ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖವಿದೆ. ಮೆಕ್ಕಾದ ಝಮ್ ಝಮ್ ಬಾವಿಯಿಂದ ಪವಿತ್ರವಾದ ನೀರು ಸಿಗುತ್ತದೆ. ಈ ನೀರು ಆರೋಗ್ಯಕರ ಖನಿಜಾಂಶಗಳಿಂದ ಸಮೃದ್ಧವಾಗಿದ್ದು, ಬೈಕಾರ್ಬನಟ್ ಮತ್ತು ಆರೋಗ್ಯ ವೃದ್ಧಿಸಲು ಸಹಾಯ ಮಾಡಲಾಗುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಇಸ್ಲಾಂನಲ್ಲಿ ಮುಸ್ಲಿಮರು ಮೃತ ದೇಹವನ್ನು ಏಕೆ ದಹನ ಮಾಡುವುದಿಲ್ಲ?

89
ಪವಿತ್ರ ನೀರು

ಮುಸ್ಲಿಮರಿಗೆ ಝಮ್ ಝಮ್ ಬಾವಿಯಿಂದ ಸಿಗುವ ಜಲವನ್ನು ಪವಿತ್ರ ನೀರು ಎಂದು ಪರಿಗಣಿಸುತ್ತಾರೆ. ಈ ವಿಶೇಷ ಮತ್ತು ಪವಿತ್ರವಾದ ಝಮ್ ಝಮ್ ನೀರನ್ನು ಗುಣಪಡಿಸುವ ಮೂಲವಾಗಿ ಬಳಸುತ್ತಾರೆ. ಈ ನೀರು ಅಲ್ಲಾಹನ ಕರುಣೆಯಿಂದ ತುಂಬಿದೆ ಎಂದು ಪರಿಗಣಿಸಲಾಗುತ್ತದೆ. ಬಹುತೇಕ ಎಲ್ಲಾ ಮುಸ್ಲಿಮರ ಮನೆಯಲ್ಲಿ ಕನಿಷ್ಠ 50 ಎಂಎಲ್ ಝಮ್ ಝಮ್ ನೀರು ಸಿಗುತ್ತದೆ.

ಇದನ್ನೂ ಓದಿ: ವಿಶ್ವದ ಏಕೈಕ ಹಿಂದೂ ರಾಷ್ಟ್ರವಾಗಿದ್ದ ನೇಪಾಳದಲ್ಲೀಗ ಮುಸ್ಲಿಂರ ಜನಸಂಖ್ಯೆ ಎಷ್ಟು?

99
ಹಸಿವನ್ನು ನೀಗಿಸುವ ಶಕ್ತಿ

ಯಾವುದೇ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳಿಂದ ಮುಕ್ತವಾಗಿರುದಕ್ಕೆ ಇದನ್ನು ವಿಶ್ವದ ಅತ್ಯಂತ ಶುದ್ಧ ನೀರು ಎಂದು ಕರೆಯಲಾಗುತ್ತದೆ. ಈ ನೀರು ಬಾಯಾರಿಕೆ ಜೊತೆ ಹಸಿವನ್ನು ನೀಗಿಸುವ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿದೆ.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

Read more Photos on
click me!

Recommended Stories