ಕೆಲವು ರಾಶಿಯ ಮಹಿಳೆಯರು ಸಿಂಹದಂತಹ ಶಕ್ತಿ, ಧೈರ್ಯ ಮತ್ತು ದೃಢತೆಯನ್ನು ಹೊಂದಿರುತ್ತಾರೆ. ಸ್ತ್ರೀಯರು ತಮ್ಮ ನಾಯಕತ್ವ ಗುಣ, ಮಾನಸಿಕ ದೃಢತೆ ಮತ್ತು ಆತ್ಮವಿಶ್ವಾಸದಿಂದ ಸವಾಲುಗಳನ್ನು ಧೈರ್ಯವಾಗಿ ಎದುರಿಸುತ್ತಾರೆ.
ಪ್ರತಿಯೊಂದು ರಾಶಿಯು ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿರುತ್ತದೆ. ಈ ವಿಶಿಷ್ಟ ಗುಣಗಳಿಂದಲೇ ಈ ರಾಶಿಯವರು ಎಲ್ಲರಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ ಮತ್ತು ಇದುವೇ ಇವರ ಗುರುತು ಆಗಿರುತ್ತದೆ. 4 ರಾಶಿಯ ಮಹಿಳೆಯರು ಸಿಂಹದಂತಹ ಶಕ್ತಿ, ಧೈರ್ಯ ಮತ್ತು ದೃಢತೆಯನ್ನು ಹೊಂದಿರುತ್ತಾರೆ. ಸವಾಲುಗಳನ್ನು ಧೈರ್ಯವಾಗಿ ಎದುರಿಸುವ ಇವರು ತಮ್ಮಲ್ಲಿಯ ವಿಶಿಷ್ಟ ಗುಣದಿಂದ ಮಿಂಚುತ್ತಾರೆ. ಆ ನಾಲ್ಕು ರಾಶಿಯವರು ಯಾರು ಎಂದು ನೋಡೋಣ ಬನ್ನಿ.
25
ಮೇಷ ರಾಶಿ
ಮೇಷ ರಾಶಿಯವರಿಗೆ ಹುಟ್ಟಿನಿಂದಲೇ ನಾಯಕತ್ವ ಗುಣವನ್ನು ಹೊಂದಿರುತ್ತಾರೆ. ಸಾಲು ಸಾಲು ಸೋಲುಗಳನ್ನು ಕಂಡರೂ ನಾಯಕತ್ವದಿಂದ ಹಿಂದೆ ಸರಿಯದೇ ಗೆದ್ದು ತೋರಿಸುತ್ತಾರೆ. ಮಂಗಳನಿಂದ ಆಳಲ್ಪಡುವ ಮೇಷ ರಾಶಿಯವರು ತಮ್ಮ ಅಭಿಪ್ರಾಯ ಅಥವಾ ನಿರ್ಧಾರಗಳನ್ನು ನಿರ್ಭೀತಿಯಿಂದ ಹೇಳುತ್ತಾರೆ. ತಮ್ಮವರಿಗಾಗಿ ಅಂತ ಬಂದ್ರೆ ಯಾವುದೇ ಹೋರಾಟಕ್ಕೆ ಹಿಂಜರಿಯುವುದಿಲ್ಲ. ಸಂಸಾರವನ್ನು ಸಿಪಾಯಿಯಂತೆ ಕಾಯುತ್ತಾರೆ.
35
ವೃಶ್ಚಿಕ ರಾಶಿ
ಮಾನಸಿಕ ದೃಢತೆ ಅಂದ್ರೆ ವೃಶ್ಚಿಕ ರಾಶಿಯವರು. ಭಾವನಾತ್ಮಕ ಜೀವಿಗಳಾದರೂ ಯಾರ ಮುಂದೆಯೂ ತಮ್ಮ ನ್ಯೂನ್ಯತೆಗಳನ್ನು ತೋರಿಸಿಕೊಳ್ಳಲ್ಲ. ಸ್ಮಾರ್ಟ್ ಆಗಿರುವ ವೃಶ್ಚಿಕ ರಾಶಿಯವರು ಸದ್ದು ಗದ್ದಲವಿಲ್ಲದೇ ಯುದ್ಧ ಗೆಲ್ಲುವ ಜಾಣತನ ಇವರಲ್ಲಿರುತ್ತದೆ. ಎಂತಹ ಕಷ್ಟದ ಸಂದರ್ಭದಲ್ಲಿ ಯೋಚಿಸಿಯೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಎಲ್ಲರನ್ನು ನಿಯಂತ್ರಿಸುವ ಮತ್ತು ನಿರ್ವಹಿಸುವ ಆಡಳಿತಾತ್ಮಕತೆ ಗುಣ ಸಹ ವೃಶ್ಚಿಕ ರಾಶಿಯಲ್ಲಿರುತ್ತದೆ.
ಸಿಂಹ ರಾಶಿಯವರು ಹೆಸರಿಗೆ ತಕ್ಕಂತೆ ಸಿಂಹಿಣಿಯರು. ನಾಯಕತ್ವ ಗುಣ ಮತ್ತು ಆತ್ಮವಿಶ್ವಾಸದ ಖಜಾನೆಯಾಗಿರವ ಸಿಂಹ ರಾಶಿಯವರು ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಸೂರ್ಯನಿಂದ ಆಳಲ್ಪಡುವ ಸಿಂಹ ರಾಶಿಯವರು ಧೈರ್ಯದಿಂದಲೇ ಕಾಣಿಸಿಕೊಳ್ಳುತ್ತಾರೆ. ಇತರರಿಗೆ ಸ್ಪೂರ್ತಿ ಮತ್ತು ಮಾದರಿಯಾಗಿ ಸಿಂಹ ರಾಶಿಯವರು ಜೀವನ ನಡೆಸುವ ಇವರು, ಕಾಲ್ಕೆರೆದು ಯಾರಾದರು ಜಗಳಕ್ಕೆ ಬಂದ್ರೆ ಏಕ್ ಮಾರ್ ದೋ ತುಕಡಾ ಅಂತಾನೇ ನಿರ್ಧರಿಸಿ ಮುಂದೆ ಹೋಗುತ್ತಾರೆ.
ಗುರು ಗ್ರಹದಿಂದ ಆಳಲ್ಪಡುವ ಧನು ರಾಶಿಯವರು ಸ್ವಾತಂತ್ರ್ಯ ಮತ್ತು ಸಾಹಸಮಯ ಜೀವನ ಇಷ್ಟಪಡುತ್ತಾರೆ. ಹೊಸ ಅನುಭವ ಮತ್ತು ಹೊಸ ಸಮಸ್ಯೆಗಳನ್ನು ಎದುರಿಸಲಿ ಎಂದಿಗೂ ಹಿಂದೇಟು ಹಾಕಲಾರರು. ಆತ್ಮವಿಶ್ವಾಸ ಮತ್ತು ಸಕಾರಾತ್ಮಕತೆಯ ಗುಣದಿಂದಾಗಿ ಪ್ರಭಾವಶಾಲಿಗಳಾಗಿರುತ್ತಾರೆ. ಧೈರ್ಯದಿಂದ ಹೇಗೆ ಜೀವನ ನಡೆಸಬೇಕು ಎಂಬದರ ಬಗ್ಗೆ ಇತರರಿಗೆ ಮಾದರಿಯಾಗಿರುತ್ತಾರೆ. ಎಲ್ಲಾ ಸನ್ನಿವೇಶಗಳಲ್ಲಿಯೂ ಧನು ರಾಶಿಯವರು ಸಿಂಹದಂತೆ ಧೈರ್ಯವಾಗಿರುತ್ತಾರೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.